ಈತ ಅರ್ಧಶತಕ ಸಿಡಿಸಿದರೆ ತಂಡದ ಸೋಲು ಫಿಕ್ಸ್..!

ಏಕಾಂಗಿಯಾಗಿ ಪಂದ್ಯವನ್ನು ಗೆಲ್ಲಿಸುವ ಸಾಮರ್ಥ್ಯವಿರುವ ತಂಡದ ಸ್ಟಾರ್ ಆಲ್ರೌಂಡರ್ ಇದೀಗ ನತದೃಷ್ಟ ಆಟಗಾರನಾಗಿ ಬದಲಾಗಿದ್ದಾರೆ. ಈತ 50+ ರನ್ ಬಾರಿಸಿದನೆಂದರೆ ಮುಗಿಯಿತು, ತಂಡದ ಸೋಲು ಫಿಕ್ಸ್ ಅಂತಾನೆ ಅರ್ಥ. ಅಷ್ಟಕ್ಕೂ ಯಾರು ಈ ಆಟಗಾರ ನೀವೇ ನೋಡಿ...

Australian Cricketer Marcus Stoinis unfortunate record

ನಾಗ್ಪುರ[ಮಾ.06]: ತಂಡವನ್ನು ಏಕಾಂಗಿಯಾಗಿ ಗೆಲ್ಲಿಸುವ ಸಾಮರ್ಥ್ಯ ಹೊಂದಿರುವ ಆಸ್ಟ್ರೇಲಿಯಾದ ಸ್ಟಾರ್ ಆಲ್ರೌಂಡರ್ ಮಾರ್ಕಸ್ ಸ್ಟೋನಿಸ್, ಇದೀಗ ಕಾಂಗರೂಗಳ ಪಾಲಿಗೆ ನತದೃಷ್ಟ ಆಟಗಾರನಾಗಿ ಬದಲಾಗಿದ್ದಾರೆ. ಭಾರತ-ಆಸ್ಟ್ರೇಲಿಯಾ ನಡುವಿನ ಎರಡನೇ ಏಕದಿನ ಪಂದ್ಯ ಈ ಅಪವಾದಕ್ಕೆ ಮತ್ತೊಂದು ಸಾಕ್ಷಿ ಒದಗಿಸಿದಂತಿತ್ತು.

Australian Cricketer Marcus Stoinis unfortunate record

ಇಂಡೋ-ಆಸಿಸ್ 2ನೇ ಏಕದಿನ: ಅಂತಿಮ ಓವರ್‌ನಲ್ಲಿ ಭಾರತಕ್ಕೆ ಗೆಲುವು!

ಆಸ್ಟ್ರೇಲಿಯಾದ 29 ವರ್ಷದ ಮಾರ್ಕಸ್ ಸ್ಟೋನಿಸ್ ನಾಗ್ಪುರದಲ್ಲಿ ನಡೆದ ಎರಡನೇ ಪಂದ್ಯದಲ್ಲಿ ಅರ್ಧಶತಕ ಸಿಡಿಸಿ ಕೊನೆಯವರೆಗೂ ತಂಡವನ್ನು ಗೆಲುವಿನ ದಡ ಸೇರಿಸಲು ಹೋರಾಡಿದರಾದರೂ ಅದರಲ್ಲಿ ಯಶಸ್ಸು ಕಾಣಲಿಲ್ಲ. ಇದುವರೆಗೂ ಆಸ್ಟ್ರೇಲಿಯಾ ಪರ 26 ಏಕದಿನ ಪಂದ್ಯಗಳನ್ನಾಡಿರುವ ಸ್ಟೋನಿಸ್ 6 ಅರ್ಧಶತಕ ಹಾಗೂ ಒಂದು ಶತಕ ಸಿಡಿಸಿದ್ದಾರೆ. ಕಾಕತಾಳೀಯವೆಂದರೆ, ಸ್ಟೋನಿಸ್ 50+ ರನ್ ಬಾರಿಸಿದ ಎಲ್ಲಾ ಪಂದ್ಯದಲ್ಲೂ ಆಸ್ಟ್ರೇಲಿಯಾ ಸೋಲಿನ ಕಹಿಯುಂಡಿದೆ. 

40ನೇ ಶತಕ ಸಿಡಿಸಿದ ವಿರಾಟ್ ಕೊಹ್ಲಿ..!

ನ್ಯೂಜಿಲೆಂಡ್ ನೀಡಿದ್ದ 287 ರನ್’ಗಳ ಗುರಿ ಬೆನ್ನತ್ತಿದ್ದ ಆಸ್ಟ್ರೇಲಿಯಾ ಒಂದು ಹಂತದಲ್ಲಿ 54 ರನ್’ಗಳಿಗೆ 5 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಈ ವೇಳೆ ಕ್ರೀಸ್’ಗಿಳಿದ ಸ್ಟೋನಿಸ್ 117 ಎಸೆತಗಳನ್ನು ಎದುರಿಸಿ 11 ಸಿಕ್ಸರ್ ಹಾಗೂ 9 ಬೌಂಡರಿ ಸಹಿತ ಅಜೇಯ 146 ರನ್ ಬಾರಿಸಿದ್ದರು. ಆದರೂ ಆ ಪಂದ್ಯವನ್ನು ಆಸಿಸ್ 6 ರನ್’ಗಳಿಂದ ಸೋಲುಂಡಿತು. ಇನ್ನು ಭಾರತ ವಿರುದ್ಧ ಕೋಲ್ಕತಾದಲ್ಲಿ ನಡೆದ ಪಂದ್ಯದಲ್ಲೂ ಸ್ಟೋನಿಸ್ ಅಜೇಯ 62 ರನ್ ಬಾರಿಸಿದ್ದರು. ಆ ಪಂದ್ಯವನ್ನು ಕಾಂಗರೂಗಳು 50 ರನ್’ಗಳ ಹೀನಾಯ ಸೋಲು ಕಂಡಿತ್ತು. ಇನ್ನು ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ 60, 56 ಹಾಗೂ 87 ರನ್ ಸಿಡಿಸಿದ್ದಾಗಲೂ ಆಸ್ಟ್ರೇಲಿಯಾಗೆ ಗೆಲುವು ದಕ್ಕಿರಲಿಲ್ಲ. ಇನ್ನು ದಕ್ಷಿಣ ಆಫ್ರಿಕಾ ವಿರುದ್ಧ ಹೋಬಾರ್ಟ್’ನಲ್ಲಿ ನಡೆದ ಪಂದ್ಯದಲ್ಲಿ ಸ್ಟೋನಿಸ್ 63 ರನ್ ಬಾರಿಸಿದಾಗಲೂ ಆಸಿಸ್ ನಿರಾಸೆ ಅನುಭವಿಸಿತ್ತು. ಇದೀಗ ಭಾರತ ವಿರುದ್ಧ 52 ರನ್ ಬಾರಿಸಿದರೂ ತಂಡವನ್ನು ಗೆಲುವಿನ ದಡ ಸೇರಿಸಲು ಸಾಧ್ಯವಾಗಲಿಲ್ಲ.

ಜಡೇಜಾ ದಾಖಲೆ- ಸಚಿನ್, ಕಪಿಲ್ ದೇವ್ ಸಾಲಿಗೆ ಸೇರಿದ ಆಲ್ರೌಂಡರ್!

ಆಸ್ಟ್ರೇಲಿಯಾ ಪರ ಅರ್ಧಶತಕ ಸಿಡಿಸಿಯೂ ತಂಡವನ್ನು ಗೆಲ್ಲಿಸದ 17ನೇ ನತದೃಷ್ಟ ಆಟಗಾರರ ಎನ್ನುವ ಕುಖ್ಯಾತಿಗೆ ಸ್ಟೋನಿಸ್ ಪಾತ್ರರಾಗಿದ್ದಾರೆ. ಆಸಿಸ್ ಪರ ಈ ನತದೃಷ್ಟ ಆಟಗಾರರ ಪಟ್ಟಿಯಲ್ಲಿ ಆಸ್ಟ್ರೇಲಿಯಾದ ಮಾಜಿ ನಾಯಕ ಸ್ಟೀವ್ ವಾ ಅಗ್ರಸ್ಥಾನದಲ್ಲಿದ್ದಾರೆ. ಸ್ಟೀವ್ ವಾ 18 ಬಾರಿ ಅರ್ಧಶತಕ ಸಿಡಿಸಿದಾಗ ಆಸಿಸ್ ಸೋಲಿನ ರುಚಿ ಕಂಡಿದೆ. ಇನ್ನು ಒಟ್ಟಾರೆ ಪಟ್ಟಿಯಲ್ಲಿ ಟೀಂ ಇಂಡಿಯಾ ಮಾಜಿ ಕ್ರಿಕೆಟಿಗ ಸಚಿನ್ ತೆಂಡುಲ್ಕರ್ ಅಗ್ರಸ್ಥಾನದಲ್ಲಿದ್ದು, 49 ಬಾರಿ 50+ ರನ್ ಬಾರಿಸಿದಾಗ ಭಾರತ ಸೋಲಿನ ಕಹಿ ಅನುಭವಿಸಿದೆ. 

Latest Videos
Follow Us:
Download App:
  • android
  • ios