ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯದಲ್ಲಿನ ಕೆಲ ಘಟನೆಗಳು ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಒಳಗಾಗಿದೆ. ಇದರಲ್ಲಿ ಆರ್ ಅಶ್ವಿನ್ ಹಾಗೂ ರೋಹಿತ್ ಶರ್ಮಾ ನಡುವಿನ ಪ್ರಕರಣ ಪ್ರಮುಖವಾಗಿದೆ. ಅಷ್ಟಕ್ಕೂ ಇವರಿಬ್ಬರ ನಡುವೆ ನಡೆದಿದ್ದೇನು? ವೀಡಿಯೋ ಹೇಳೋದೇನು? ಇಲ್ಲಿದೆ ವಿವರ.

ಆಡಿಲೆಡ್(ಡಿ.9): ಆಸ್ಟ್ರೇಲಿಯಾ ಹಾಗೂ ಭಾರತ ನಡುವಿನ ಮೊದಲ ಟೆಸ್ಟ್ ಪಂದ್ಯ ಇದೀಗ ಅಂತಿಮ ಘಟ್ಟ ತಲುಪಿದೆ. ಭಾರತದ ಗೆಲುವಿಗೆ ಇನ್ನು 6 ವಿಕೆಟ್‌ಗಳ ಅವಶ್ಯಕತೆ ಇದೆ. ಅತ್ತ ಆಸ್ಟ್ರೇಲಿಯಾ 219 ರನ್ ಅವಶ್ಯಕತೆ ಇದೆ. 2ನೇ ಇನ್ನಿಂಗ್ಸ್‌ನಲ್ಲಿ ಸ್ಪಿನ್ನರ್ ಆರ್ ಅಶ್ವಿನ್ 2 ವಿಕೆಟ್ ಕಬಳಿಸಿ ಮಿಂಚಿದ್ದಾರೆ.

ಅಶ್ವಿನ್ ವಿಕೆಟ್ ಕಬಳಿಸಿ ತಂಡಕ್ಕೆ ಮೇಲುಗೈ ತಂದುಕೊಡುತ್ತಲೇ ಸಹ ಕ್ರಿಕೆಟಿಗರು ಅಭಿನಂಧಿಸಿದರು. ಇದೇ ವೇಳೆ ಅಶ್ವಿನ್ ಕೈ ಕುಲುಕಿ ಅಭಿನಂದಿಸಲು ಬಂದ ರೋಹಿತ್ ಶರ್ಮಾರನ್ನ ಅಶ್ವಿನ್ ಕಡೆಗಣಿಸಿದರಾ ಅನ್ನೋ ಪ್ರಶ್ನೆ ಎದ್ದಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ಭಾರಿ ಚರ್ಚೆ ಕೂಡ ನಡೆದಿದೆ. 

Scroll to load tweet…

ಈ ವೀಡಿಯೋ ರೋಹಿತ್ ಶರ್ಮಾ ಹಾಗೂ ಆರ್ ಅಶ್ವಿನ್ ಘಟನೆಯನ್ನ ಬಿಚ್ಚಿಟ್ಟಿದೆ. ಆದರೆ ರೋಹಿತ್ ಶರ್ಮಾ ಕೈಕುಲುಕಲು ಬಂದಿರುವುದು ಅಶ್ವಿನ್ ಗಮನಕ್ಕೆ ಬಂದಿಲ್ಲ. ಇದು ರೋಹಿತ್ ಶರ್ಮಾರನ್ನ ಕಡೆಗಣಿಸಿರುವುದಲ್ಲ.