ಅದೇಗೆ ಕಾಂಗರೂಗಳು ಭಾರತದಲ್ಲಿ ಅಭ್ಯಾಸ ನಡೆಸಿ ಅದೇ ಸಮಯದಲ್ಲಿ ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಪಾಲ್ಗೊಂಡಿದ್ರೂ ಅಂತ ತಲೆಕೆಡಸಿಕೊಳ್ತೀರಾ.? ಹೌದು ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ಮುಂಬೈನಲ್ಲಿ ಭಾರತ ‘A’ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ನಿರತರಾಗಿರೋದು ನಿಜ. ಹಾಗೇನೆ ಅಸ್ಟ್ರೇಲಿಯಾದಲ್ಲೇ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡು ವಿರೋಚಿತ ಸೋಲು ಕಂಡಿರೋದು ನಿಜ.
ಅಯ್ಯೋ ಇದೇನಿದು ಆಸ್ಟ್ರೇಲಿಯಾ ತಂಡ ಭಾರತ ಪ್ರವಾಸದಲ್ಲಿದೆ. ಆದರೆ ಇಲ್ಲಿ ನೋಡಿದರೆ ಶ್ರೀಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ಸೋತಿದೆ ಅಂತ ಹೇಳ್ತಿದ್ದಾರೆ ಅಂದುಕೊಂಡ್ರಾ.? ಹೌದು ಕಾಂಗರೂಗಳು ಭಾರತದಲ್ಲಿ ಅಭ್ಯಾಸನೂ ನಡೆಸುತಿದ್ದಾರೆ ಜೊತೆಗೆ ಆಸ್ಟ್ರೇಲಿಯಾದಲ್ಲಿ ಟಿ20 ಸರಣಿ ಕೂಡ ಆಡ್ತಿದ್ದಾರೆ.
ಅದೇಗೆ ಕಾಂಗರೂಗಳು ಭಾರತದಲ್ಲಿ ಅಭ್ಯಾಸ ನಡೆಸಿ ಅದೇ ಸಮಯದಲ್ಲಿ ತವರಿನಲ್ಲಿ ಶ್ರೀಲಂಕಾ ವಿರುದ್ಧದ ಟಿ20 ಪಂದ್ಯದಲ್ಲಿ ಪಾಲ್ಗೊಂಡಿದ್ರೂ ಅಂತ ತಲೆಕೆಡಸಿಕೊಳ್ತೀರಾ.? ಹೌದು ಆಸ್ಟ್ರೇಲಿಯಾ ರಾಷ್ಟ್ರೀಯ ತಂಡ ಮುಂಬೈನಲ್ಲಿ ಭಾರತ ‘A’ ವಿರುದ್ಧ ಅಭ್ಯಾಸ ಪಂದ್ಯದಲ್ಲಿ ನಿರತರಾಗಿರೋದು ನಿಜ. ಹಾಗೇನೆ ಅಸ್ಟ್ರೇಲಿಯಾದಲ್ಲೇ ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಪಾಲ್ಗೊಂಡು ವಿರೋಚಿತ ಸೋಲು ಕಂಡಿರೋದು ನಿಜ.
ಒಂದೇ ದಿನ 2 ದೇಶದಲ್ಲಿ ಎರಡು ಪಂದ್ಯವನ್ನಾಡಲು ಸಾಧ್ಯವಾಗಿದ್ದಾದ್ರೂ ಹೇಗೆ ಎಂಬ ಪ್ರಶ್ನೆಗೆ ಉತ್ತರಾವಾದ್ರೂ ಏನ್ ಗೊತ್ತಾ.? ಕ್ರಿಕೆಟ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆ ಮಾಡಿದ್ದ ಪಕ್ಕಾ ಪ್ಲಾನ್. ಆರು ತಿಂಗಳ ಹಿಂದೆಯೇ ಕ್ರಿಕೆಟ್ ಆಸ್ಟ್ರೇಲಿಯಾ ಒಂದೇ ಸಮಯದಲ್ಲಿ ಎರಡು ಬಲಿಷ್ಠ ಏಷ್ಯನ್ ತಂಡಗಳ ವಿರುದ್ಧ ಸೆಣಸಾಡಲು ಪ್ಲಾನ್ ಮಾಡಿತ್ತು.
ಕಾಂಗುರೂಗಳು ಎರಡು ಸೀನಿಯರ್ಸ್ ತಂಡಗಳನ್ನು ರೆಡಿ ಮಾಡಲು ತಯಾರಿ ನಡೆಸುತ್ತಿದ್ದಾರೆ. ಒಂದು ಸೀಮಿತ ಓವರ್ಗಳಿಗಾದ್ರೆ ಮತ್ತೊಂದು ಟೆಸ್ಟ್ ಆಡಲು. ಎರಡೂ ತಂಡಗಳನ್ನ ಬಲಿಷ್ಠಗೊಳಿಸಿ ಒಮ್ಮೆಲೆ ಎರಡೆರಡು ಟೂರ್ನಿಗಳಲ್ಲಿ ಆಡಲು ಆಸೀಸ್ಗಳು ಪ್ಲಾನ್ ಮಾಡ್ತಿದ್ದಾರೆ. ಇದರೊಂದಿಗೆ ವಿಶ್ವ ಕ್ರಿಕೆಟ್ನಲ್ಲಿ ಮತ್ತೊಂದು ಮೈಲಿಗಲ್ಲು ಸೃಷ್ಟಿಸಲು ಆಸ್ಟ್ರೇಲಿಯಾ ಎದುರುನೋಡುತ್ತಿದೆ.
ಮೈಲಿಗಲ್ಲು ಸೃಷ್ಟಿಸಲು ಮಾತ್ರ ಕಾಂಗರೂಗಳು ಈ ಪ್ಲಾನ್ ಮಾಡುತ್ತಿಲ್ಲ. ಆಕಸ್ಮಾತ್ ಅವರ ಈ ಪ್ಲಾನ್ ವರ್ಕ್ ಆಗಿಬಿಟ್ರೆ, ಹೆಚ್ಚು ಹೆಚ್ಚು ಹಣ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗೆ ಹರಿದು ಬರಲಿದೆ. ಏನೇ ಆದ್ರೂ ಇಂತಹ ಸಾಹಸಗಳ ಮಧ್ಯೆ ಕ್ರಿಕೆಟ್ ಆಗಲಿ ಕ್ರಿಕೆಟ್ ಪ್ಲೇಯರ್ಗಳಾಗಲಿ ಬೆಲೆ ಕಳೆದುಕೊಳ್ಳದೆ ಇದ್ರೆ ಅಷ್ಟೇ ಸಾಕು.
ವರದಿ: ಸ್ಪೋರ್ಟ್ಸ್ ಬ್ಯೂರೋ, ಸುವರ್ಣ ನ್ಯೂಸ್