ಸಿಡ್ನಿ[ಡಿ.03]  ಆಸ್ಟ್ರೇಲಿಯಾದ ಆಲಿವರ್ ಡೇವಿಸ್ 6 ಎಸೆತದಲ್ಲಿ 6 ಸಿಕ್ಸರ್ ಎತ್ತಿದ್ದು ಅಲ್ಲದೆ ದ್ವಿಶತಕ ಸಾಧನೆ ಮಾಡಿದ್ದಾರೆ. ಆಸ್ಟ್ರೇಲಿಯಾ ಅಂಡರ್ 19 ಟೂರ್ನಿಯಲ್ಲಿ ನ್ಯೂ ಸೌಥ್ ವೇಲ್ಸ್ ಮೆಟ್ರೋ ತಂಡದ ಆಲಿವರ್ ಡೇವಿಸ್ ಈ ಸಾಧನೆ ಮಾಡಿದ್ದು, ನಾರ್ಥನ್ ತಂಡದ ಬೌಲರ್‌ಗಳ ಚಳಿ ಬಿಡಿಸಿದ್ದಾರೆ.

ಪಂದ್ಯದಲ್ಲಿ 115 ಎಸೆತಗಳನ್ನು ಎದುರಿಸಿದ ಡೇವಿಸ್  207 ರನ್ ದಾಖಲಿಸಿದರು. ಅಂಡರ್ 19 ಚಾಂಪಿಯನ್ ಶಿಪ್ ನಲ್ಲಿ ದ್ವಿಶಕತ ಸಿಡಿಸಿದ ಮೊದಲ ಆಟಗಾರ ಎಂಬ ಶ್ರೇಯವೂ ಅವರದ್ದಾಯಿತು.

ಪಂದ್ಯದ 40ನೇ ಓವರ್ ನಲ್ಲಿ ಸತತ 6 ಎಸೆತಗಳಲ್ಲೂ ಡೇವಿಸ್ ಸಿಕ್ಸರ್ ಸಿಡಿಸಿದ್ದು ವಿಶೇಷವಾಗಿತ್ತು. ಡೇವಿಸ್ 14 ಬೌಂಡರಿ, 17 ಸಿಕ್ಸರ್ ಸಿಡಿಸಿ ಮಿಂಚಿದರು. ಏಕದಿನ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾದ ಹರ್ಷಲ್ ಗಿಬ್ಸ್, ಟಿ-20ಯಲ್ಲಿ ಯುವರಾಜ್‌ ಸಿಂಗ್ 6ಕ್ಕೆ 6 ಎಸೆತಗಳನ್ನು ಸಿಕ್ಸರ್‌ಗೆ ಎತ್ತಿದ್ದರು.

ಪ್ರಥಮ ದರ್ಜೆ ಪಂದ್ಯದಲ್ಲಿ ರವಿಶಾಸ್ತ್ರಿ, ಜೋಡರ್ನ್ ಕ್ಲಾಕ್, ರೋಸ್ ವೈಟ್ಲಿ, ರವೀಂದ್ರ ಜಡೇಜಾ, ವಿಂಡೀಸ್ ನ ಸರ್ ಗ್ಯಾರ್ಫೀಲ್ಡ್ ಸೋಬರ್ಸ್,  ಅಭ್ಯಾಸ ಪಂದ್ಯದಲ್ಲಿ ಕೀರೆನ್ ಪೋಲಾರ್ಡ್, ಜೂನಿಯರ್ ಕ್ರಿಕೆಟಿನಲ್ಲಿ ಶಾದೂರ್ಲ್ ಠಾಕೂರ್  ಸಹ 6ಕ್ಕೆ 6 ಸಿಕ್ಸರ್ ಎತ್ತಿದ ಸಾಧನೆ ಮಾಡಿರುವುದು ದಾಖಲೆಯಾಗಿದೆ.