Asianet Suvarna News Asianet Suvarna News

ATP Rankings: 7 ವರ್ಷ ಬಳಿಕ ಮತ್ತೆ ಅಗ್ರ-10ರಲ್ಲಿ ಬೋಪ​ಣ್ಣ!

ಟೆನಿಸ್‌ ವಿಶ್ವ ಡಬಲ್ಸ್‌ ರಾರ‍ಯಂಕಿಂಗ್‌
ಟಾಪ್ 10 ಪಟ್ಟಿಯೊಳಗೆ ಸ್ಥಾನ ಪಡೆದ ಬೋಪಣ್ಣ
ರಾಜ್ಯದ ಟೆನಿಸಿಗನಿಗೆ 9ನೇ ಸ್ಥಾನ
 

ATP Rankings Veteran Rohan Bopanna back in the top 10 kvn
Author
First Published May 23, 2023, 9:40 AM IST

ಲಂಡನ್‌(ಮೇ.23): ಭಾರ​ತದ ತಾರಾ ಟೆನಿ​ಸಿಗ, ಕರ್ನಾ​ಟ​ಕದ ರೋಹನ್‌ ಬೋಪಣ್ಣ 7 ವರ್ಷ​ಗಳ ಬಳಿಕ ಮತ್ತೆ ಪುರುಷರ ಡಬಲ್ಸ್‌ನ ವಿಶ್ವ ರ‍್ಯಾಂಕಿಂಗ್‌‌ನಲ್ಲಿ ಅಗ್ರ 10ರೊಳಗೆ ಸ್ಥಾನ ಪಡೆದಿದ್ದಾರೆ. ಸೋಮ​ವಾರ ಪ್ರಕ​ಟ​ಗೊಂಡ ನೂತನ ರ‍್ಯಾಂಕಿಂಗ್‌‌ ಪಟ್ಟಿ​ಯಲ್ಲಿ 43 ವರ್ಷದ ಬೋಪ​ಣ್ಣ 9ನೇ ಸ್ಥಾನ ಗಿಟ್ಟಿ​ಸಿ​ಕೊಂಡಿ​ದ್ದಾರೆ. ಇತ್ತೀಚೆಗೆ ಆಸ್ಪ್ರೇಲಿಯಾದ ಮ್ಯಾಥ್ಯೂ ಎಬ್ಡೆನ್‌ ಜೊತೆ ಆಡುತ್ತಿರುವ ಬೋಪಣ್ಣ, ಇಂಡಿಯಾನಾ ವೆಲ್ಸ್‌ ಟೂರ್ನಿಯನ್ನು ಜಯಿಸಿದ್ದರು.

ಬಾರ್ಸಿಲೋನಾ ಹಾಗೂ ಮ್ಯಾಡ್ರಿಡ್‌ ಓಪನ್‌ ಟೂರ್ನಿಗಳಲ್ಲಿ ಬೋಪಣ್ಣ-ಎಬ್ಡೆನ್‌ ಜೋಡಿ ರನ್ನರ್‌-ಅಪ್‌ ಆಗಿತ್ತು. ಮುಂದಿನ ವಾರ ಆರಂಭಗೊಳ್ಳಲಿರುವ ಫ್ರೆಂಚ್‌ ಓಪನ್‌ನಲ್ಲೂ ಬೋಪಣ್ಣ ಆಡಲಿದ್ದಾರೆ. 2013ರ ಜುಲೈ​ನಲ್ಲಿ ಬೋಪಣ್ಣ 3ನೇ ಸ್ಥಾನ ಪಡೆ​ದಿದ್ದರು. ಅದು ಅವರ ಶ್ರೇಷ್ಠ ಸಾಧನೆ ಎನಿ​ಸಿ​ಕೊಂಡಿದೆ.

ಭಾರತದ ಅತಿಹಿರಿಯ!

ವಿಶ್ವ ರ‍್ಯಾಂಕಿಂಗ್‌‌ನ ಅಗ್ರ-10ರಲ್ಲಿ ಸ್ಥಾನ ಪಡೆದ ಭಾರತದ ಅತಿಹಿರಿಯ ಟೆನಿಸಿಗ ಎನ್ನುವ ಹೆಗ್ಗ​ಳಿ​ಕೆಗೂ ಬೋಪಣ್ಣ ಪಾತ್ರ​ರಾ​ಗಿ​ದ್ದಾರೆ. ಈ ಮೊದಲು 41 ವರ್ಷ​ವಿ​ದ್ದಾಗ ಲಿಯಾಂಡರ್‌ ಪೇಸ್‌ ಹಾಗೂ 39 ವರ್ಷ​ವಾ​ಗಿ​ದ್ದಾಗ ಮಹೇ​ಶ್‌ ಭೂಪತಿ ರಾರ‍ಯಂಕಿಂಗ್‌​ ಪಟ್ಟಿಯಲ್ಲಿ ಅಗ್ರ-10ರಲ್ಲಿ ಸ್ಥಾನ ಪಡೆ​ದಿ​ದ್ದರು.

ಜಾವೆಲಿನ್‌: ನೀರಜ್‌ ವಿಶ್ವ ನಂ.1: ಅಥ್ಲೆ​ಟಿಕ್ಸ್‌ನಲ್ಲಿ ಅಗ್ರ​ಸ್ಥಾ​ನ​ಕ್ಕೇ​ರಿದ ಭಾರ​ತದ ಮೊದ​ಲಿ​ಗ

ನವ​ದೆ​ಹ​ಲಿ: ಟೋಕಿಯೋ ಒಲಿಂಪಿಕ್ಸ್‌ ಚಾಂಪಿ​ಯನ್‌, ಇತ್ತೀ​ಚೆ​ಗಷ್ಟೇ ದೋಹಾ ಡೈಮಂಡ್‌ ಲೀಗ್‌​ನಲ್ಲಿ ವಿಜೇತರಾಗಿದ್ದ ಭಾರ​ತದ ತಾರಾ ಅಥ್ಲೀಟ್‌ ನೀರಜ್‌ ಚೋಪ್ರಾ ಪುರು​ಷರ ಜಾವೆ​ಲಿನ್‌ ವಿಶ್ವ ರ‍್ಯಾಂಕಿಂಗ್‌‌​ನಲ್ಲಿ ನಂ.1 ಸ್ಥಾನ​ಕ್ಕೇ​ರಿ​ದ್ದಾರೆ. ಒಲಿಂಪಿಕ್ಸ್‌ನ ಅಥ್ಲೆ​ಟಿಕ್ಸ್‌ನಲ್ಲಿ ಚಿನ್ನ ಗೆದ್ದ ಭಾರ​ತ ಮೊದ​ಲಿಗ ಎಂಬ ಖ್ಯಾತಿ ಗಳಿ​ಸಿದ್ದ 25 ವರ್ಷದ ನೀರಜ್‌ ಅಥ್ಲೆ​ಟಿ​ಕ್ಸ್‌ನ ಯಾವುದೇ ಕ್ರೀಡೆ​ಯ ರ‍್ಯಾಂಕಿಂಗ್‌‌ನ​ಲ್ಲೂ ಅಗ್ರ​ಸ್ಥಾ​ನ​ಕ್ಕೇ​ರಿದ ದೇಶದ ಮೊದಲ ಕ್ರೀಡಾ​ಪ​ಟು ಎಂಬ ಹೆಗ್ಗ​ಳಿ​ಕೆಗೂ ಪಾತ್ರ​ರಾ​ಗಿ​ದ್ದಾರೆ.

ಸೋಮ​ವಾರ ಪ್ರಕ​ಟ​ಗೊಂಡ ನೂತನ ರ‍್ಯಾಂಕಿಂಗ್‌‌ ಪಟ್ಟಿ​ಯಲ್ಲಿ ನೀರಜ್‌ 1455 ಅಂಕ​ಗ​ಳನ್ನು ಸಂಪಾ​ದಿ​ಸಿದ್ದು, 2 ಬಾರಿ ವಿಶ್ವ ಚಾಂಪಿ​ಯ​ನ್‌​ಶಿಪ್‌ ವಿಜೇತ, ಗ್ರೆನ​ಡಾದ ಆ್ಯಂಡ​ರ್‌​ಸನ್‌ ಪೀಟ​ರ್ಸ್ ​(1433 ಅಂಕ​)​ರನ್ನು ಹಿಂದಿ​ಕ್ಕಿ​ ಮೊದಲ ಸ್ಥಾನ ಪಡೆ​ದ​ರು. ಟೋಕಿಯೋ ಒಲಿಂಪಿಕ್ಸ್‌ ಬೆಳ್ಳಿ ವಿಜೇತ, ಚೆಕ್‌ ಗಣ​ರಾ​ಜ್ಯದ ಜಾಕುಬ್‌ ವ್ಯಾಡ್‌​ಲೆ​ಕ್‌​(1416) 3ನೇ ಸ್ಥಾನ​ದ​ಲ್ಲಿ​ದ್ದಾ​ರೆ.

ಜೂ.13-17 ಚೆನ್ನೈನಲ್ಲಿ ಸ್ಕ್ವ್ಯಾಶ್‌ ವಿಶ್ವಕಪ್‌ ಟೂರ್ನಿ

ಚೆನ್ನೈ: ಜೂ.13ರಿಂದ 17ರ ವರೆಗೂ ಚೆನ್ನೈನಲ್ಲಿ ಸ್ಕ್ವ್ಯಾಶ್‌ ವಿಶ್ವಕಪ್‌ ನಡೆಯಲಿದ್ದು, ಸೌರವ್‌ ಘೋಷಾಲ್‌ ಹಾಗೂ ಜೋಶ್ನಾ ಚಿನ್ನಪ್ಪ ಭಾರತದ ಸವಾಲನ್ನು ಮುನ್ನಡೆಸಲಿದ್ದಾರೆ ಎಂದು ಭಾರತೀಯ ಸ್ಕ್ವ್ಯಾಶ್‌ ರಾಕೆಟ್ಸ್‌ ಫೆಡರೇಶನ್‌(ಎಸ್‌ಆರ್‌ಎಫ್‌ಐ) ಸೋಮವಾರ ಘೋಷಿಸಿತು.

Wrestlers Protest ಮಂಪರು ಪರೀಕ್ಷೆಗೆ ನಾವೂ ಸಿದ್ದ ಆದರೆ..?: ಕುಸ್ತಿಪಟುಗಳ ಚಾಲೆಂಜ್‌..!

ಭಾರತ ಸೇರಿ ಒಟ್ಟು 9 ದೇಶಗಳು ಈ ಟೂರ್ನಿಯಲ್ಲಿ ಪಾಲ್ಗೊಳ್ಳಲಿದೆ. ಹಾಂಕಾಂಗ್‌, ಚೀನಾ, ಜಪಾನ್‌, ಮಲೇಷ್ಯಾ, ಈಜಿಪ್‌್ಟ, ದ.ಆಫ್ರಿಕಾ, ಆಸ್ಪ್ರೇಲಿಯಾ ಹಾಗೂ ಕೊಲಂಬಿಯಾದ ಆಟಗಾರರು ಸ್ಪರ್ಧಿಸಲಿದ್ದಾರೆ. ಈ ಹಿಂದೆ 2011ರಲ್ಲಿ ಚೆನ್ನೈನಲ್ಲಿ ವಿಶ್ವಕಪ್‌ ಆಯೋಜಿಸಲಾಗಿತ್ತು.

ಇಂದಿ​ನಿಂದ ಮಲೇ​ಷ್ಯಾ ಮಾಸ್ಟ​​ರ್ಸ್‌ ಬ್ಯಾಡ್ಮಿಂಟ​ನ್‌

ಕೌಲಾ​ಲಂಪು​ರ: ಇತ್ತೀಚಿನ ಸುದೀರ್‌​ಮನ್‌ ಕಪ್‌ ಸೇರಿ​ದಂತೆ 2023ರಲ್ಲಿ ನಿರೀ​ಕ್ಷಿತ ಪ್ರದ​ರ್ಶನ ನೀಡಲು ವಿಫ​ಲ​ವಾ​ಗಿ​ರುವ ಭಾರ​ತೀಯ ಶಟ್ಲ​ರ್‌​ಗಳು ಮಂಗ​ಳ​ವಾ​ರ​ದಿಂದ ಮಲೇಷ್ಯಾ ಮಾಸ್ಟ​ರ್ಸ್‌ ಸೂಪರ್‌ 500 ಟೂರ್ನಿ​ಯಲ್ಲಿ ಕಣ​ಕ್ಕಿ​ಳಿ​ಯ​ಲಿದ್ದು, ಸುಧಾ​ರಿತ ಪ್ರದ​ರ್ಶ​ನ​ದೊಂದಿಗೆ ಪದಕ ಬರ ನೀಗಿ​ಸುವ ನಿರೀ​ಕ್ಷೆ​ಯ​ಲ್ಲಿ​ದ್ದಾರೆ.

ಈ ಟೂರ್ನಿ​ಯಲ್ಲಿ ಭಾರತ ಈವ​ರೆಗೆ 3 ಚಿನ್ನ ಗೆದ್ದಿದ್ದು, ಮೂರೂ ಕೂಡ ಮಹಿಳಾ ಸಿಂಗ​ಲ್ಸ್‌​ನಲ್ಲಿ ಒಲಿ​ದಿದೆ. 2013, 2016ರಲ್ಲಿ ಪಿ.ವಿ.​ಸಿಂಧು, 2017ರಲ್ಲಿ ಸೈನಾ ನೆಹ್ವಾಲ್‌ ಚಾಂಪಿ​ಯನ್‌ ಆಗಿ​ದ್ದರು. ಆದರೆ ಈ ಬಾರಿ ಸೈನಾ ಆಡು​ತ್ತಿಲ್ಲ. ಸಿಂಧು ಜೊತೆ ಆಕರ್ಷಿ ಕಶ್ಯಪ್‌ ಮಹಿಳಾ ಸಿಂಗ​ಲ್ಸ್‌​ನಲ್ಲಿ, ಪ್ರಣಯ್‌, ಲಕ್ಷ್ಯ ಸೇನ್‌, ಶ್ರೀಕಾಂತ್‌ ಪುರು​ಷ ಸಿಂಗ​ಲ್ಸ್‌​ನಲ್ಲಿ ಕಣ​ಕ್ಕಿ​ಳಿ​ಯ​ಲಿ​ದ್ದಾರೆ. ಡಬ​ಲ್ಸ್‌ನ ಯಾವುದೇ ವಿಭಾ​ಗ​ದಲ್ಲೂ ಭಾರ​ತೀ​ಯರು ಸ್ಪರ್ಧಿ​ಸು​ತ್ತಿ​ಲ್ಲ.

Follow Us:
Download App:
  • android
  • ios