Wrestlers Protest ಮಂಪರು ಪರೀಕ್ಷೆಗೆ ನಾವೂ ಸಿದ್ದ ಆದರೆ..?: ಕುಸ್ತಿಪಟುಗಳ ಚಾಲೆಂಜ್‌..!

ಬ್ರಿಜ್‌ಭೂಷಣ್‌ ವಿರುದ್ದ ಮುಂದುವರೆದ ಕುಸ್ತಿಪಟುಗಳ ಪ್ರತಿಭಟನೆ
ಕುಸ್ತಿ​ಪ​ಟು​ಗಳೂ ಮಂಪರು ಪರೀ​ಕ್ಷೆಗೆ ಸಿದ್ಧವೆಂದ ಕುಸ್ತಿಪಟುಗಳು
ಈ ಮೊದಲು ತಾವು ಮಂಪರು ಪರೀಕ್ಷೆಗೆ ರೆಡಿ ಎಂದಿದ್ದ ಬ್ರಿಜ್‌ಭೂಷಣ್

Wrestlers Protest Protesting Wrestlers Take Up Federation Chief Dare ready for Narco test kvn

ನವ​ದೆ​ಹ​ಲಿ(ಮೇ.23): ಭಾರ​ತೀಯ ಕುಸ್ತಿ ಫೆಡ​ರೇ​ಶನ್‌(ಡ​ಬ್ಲ್ಯು​ಎ​ಫ್‌​ಐ) ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಹಾಗೂ ದೇಶದ ಅಗ್ರ ಕುಸ್ತಿ​ಪ​ಟು​ಗ​ಳ ನಡು​ವಿನ ಸಂಘರ್ಷ ಮತ್ತೊಂದು ಹಂತ ತಲು​ಪುವ ಲಕ್ಷ​ಣ​ಗ​ಳು ಕಂಡು​ಬ​ರು​ತ್ತಿದ್ದು, ಬ್ರಿಜ್‌​ಭೂ​ಷಣ್‌ ಬಳಿಕ ಕುಸ್ತಿ​ಪ​ಟು​ಗಳೂ ಮಂಪರು ಪರೀ​ಕ್ಷೆಗೆ ಸಿದ್ಧ ಎಂದಿ​ದ್ದಾರೆ.

ಇತ್ತೀ​ಚೆಗೆ ಕುಸ್ತಿ​ಪಟು ಸಾಕ್ಷಿ ಮಲಿ​ಕ್‌, ತಮ್ಮ ಮೇಲಿನ ಆರೋ​ಪ​ಗ​ಳನ್ನು ನಿರಾ​ಕ​ರಿ​ಸು​ತ್ತಿ​ರುವ ಬ್ರಿಜ್‌ ಮಂಪರು ಪರೀ​ಕ್ಷೆಗೆ ಒಳ​ಗಾ​ಗಲಿ ಎಂದು ಸವಾಲು ಹಾಕಿ​ದ್ದರು. ಭಾನು​ವಾರ ಈ ಸವಾ​ಲನ್ನು ಸ್ವೀಕ​ರಿ​ಸಿದ್ದ ಬ್ರಿಜ್‌, ಕುಸ್ತಿ​ಪ​ಟು​ಗಳು ಪರೀ​ಕ್ಷೆಗೆ ಒಳ​ಗಾ​ಗು​ವು​ದಾ​ದರೆ ನಾನು ಕೂಡಾ ಸಿದ್ಧ ಎಂದಿ​ದ್ದರು. ಸೋಮವಾರ ಬ್ರಿಜ್‌ರ ಸವಾಲಿಗೆ ಉತ್ತರಿಸಿರುವ ಕುಸ್ತಿ​ಪಟು ಭಜ​ರಂಗ್‌ ಪೂನಿಯಾ, ಮಂಪರು ಪರೀ​ಕ್ಷೆಗೆ ನಮ್ಮ ಜೊತೆಗೆ ದೂರು ನೀಡಿದ ಎಲ್ಲಾ ಕುಸ್ತಿ​ಪ​ಟು​ಗಳು ಸಿದ್ಧ​ರಿದ್ದಾರೆ ಎಂದು ತಿಳಿ​ಸಿ​ದ್ದಾರೆ.

‘ಸುಪ್ರೀಂಕೋರ್ಚ್‌ ಮೇಲ್ವಿಚಾರಣೆಯಲ್ಲಿ ಬ್ರಿಜ್‌ರ ಮಂಪರು ಪರೀಕ್ಷೆ ನಡೆ​ಯ​ಲಿ. ರಾಷ್ಟ್ರೀಯ ಮಾಧ್ಯ​ಮ​ಗ​ಳಲ್ಲಿ ಇದರ ನೇರ​ಪ್ರ​ಸಾರ ಮಾಡಲಿ. ಅವ​ರಿಗೆ ಯಾವ ಪ್ರಶ್ನೆ​ಗ​ಳನ್ನು ಕೇಳ​ಲಾ​ಗು​ತ್ತಿದೆ ಎಂಬುದು ನಮಗೂ ಗೊತ್ತಾ​ಗ​ಬೇ​ಕು’ ಎಂದು ಹೇಳಿ​ದ್ದಾರೆ.

ಮಂಪರು ಪರೀ​ಕ್ಷೆಗೆ ಸಿದ್ಧ: ಬ್ರಿಜ್‌​ಭೂ​ಷ​ಣ್‌!

ತಮ್ಮ ವಿರು​ದ್ಧದ ಆರೋ​ಪ​ಗ​ಳ​ನ್ನು ನಿರಾ​ಕ​ರಿ​ಸು​ತ್ತಿ​ರುವ ಬ್ರಿಜ್‌​ಭೂ​ಷಣ್‌ ಮಂಪರು ಪರೀ​ಕ್ಷೆಗೆ ಒಳ​ಗಾ​ಗಲಿ ಎಂಬ ಕುಸ್ತಿ​ಪ​ಟು​ಗಳ ಸವಾ​ಲನ್ನು ಡಬ್ಲ್ಯು​ಎ​ಫ್‌ಐ ಅಧ್ಯಕ್ಷ ಬ್ರಿಜ್‌​ಭೂ​ಷಣ್‌ ಸಿಂಗ್‌ ಸ್ವೀಕ​ರಿ​ಸಿದ್ದು, ಮಂಪರು ಪರೀ​ಕ್ಷೆಗೆ ಸಿದ್ಧ ಎಂದಿ​ದ್ದಾರೆ. ‘ನನ್ನ ಜೊತೆ ಭಜ​ರಂಗ್‌ ಪೂನಿಯಾ, ವಿನೇಶ್‌ ಫೋಗಾ​ಟ್‌ ಕೂಡಾ ಮಂಪರು ಪರೀ​ಕ್ಷೆಗೆ ಒಳ​ಗಾ​ಗಬೇಕು. ಅವರು ಮಂಪರು ಪರೀ​ಕ್ಷೆಗೆ ಸಿದ್ಧ​ವಿ​ದ್ದರೆ ನಾನು ಪತ್ರಿ​ಕಾ​ಗೋಷ್ಠಿ ಮೂಲಕ ಇದನ್ನು ಘೋಷಿ​ಸು​ತ್ತೇ​ನೆ’ ಎಂದು ಬ್ರಿಜ್‌ಭೂಷ​ಣ್‌ ತಮ್ಮ ಫೇಸ್ಬು​ಕ್‌​ ಖಾತೆ​ಯಲ್ಲಿ ಬರೆ​ದಿ​ದ್ದಾರೆ.

Wrestlers Protest ಮಂಪರು ಪರೀಕ್ಷೆಗೆ ಸಿದ್ದ ಆದರೆ ಒಂದು ಕಂಡೀಷನ್‌: ಬ್ರಿಜ್‌ಭೂಷಣ್ ಸಿಂಗ್

ಇಂದು ಮೇಣ​ದ​ ಬತ್ತಿ ಪ್ರತಿ​ಭ​ಟ​ನೆ

ಜಂತ​ರ್‌​ಮಂತ​ರ್‌​ನಲ್ಲಿ (Jantar-Mantar) ನಡೆ​ಯು​ತ್ತಿ​ರುವ ಪ್ರತಿ​ಭ​ಟ​ನೆ ಒಂದು ತಿಂಗಳು ಪೂರ್ಣ​ಗೊಳ್ಳುತ್ತಿ​ರುವ ಹಿನ್ನೆ​ಲೆ​ಯಲ್ಲಿ ಮಂಗ​ಳ​ವಾರ ಕುಸ್ತಿ​ಪ​ಟು​ಗಳು ಇಂಡಿಯಾ ಗೇಟ್‌ಗೆ ಮೇಣದ ಬತ್ತಿ ಮೆರ​ವ​ಣಿಗೆ ನಡೆ​ಸ​ಲಿ​ದ್ದಾರೆ. ಏಪ್ರಿಲ್ 23ರಂದು ಪ್ರತಿಭಟನೆ ಆರಂಭಗೊಂಡಿತ್ತು.

ವಿಶ್ವ ಟಿಟಿ: ಪ್ರಿ ಕ್ವಾರ್ಟರ್‌ ಪ್ರವೇಶಿಸಿದ ಸತ್ಯನ್‌ ಜೋಡಿ

ಡರ್ಬನ್‌: ಭಾರತದ ಜಿ. ಸತ್ಯನ್‌ ಇಲ್ಲಿ ನಡೆಯುತ್ತಿರುವ ವಿಶ್ವ ಟೇಬಲ್‌ ಟೆನಿಸ್‌ ಚಾಂಪಿಯನ್‌ಶಿಪ್‌ನ ಪುರುಷರ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ತಮ್ಮ ಜೊತೆಗಾರರ ಜೊತೆ ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿದ್ದಾರೆ. ಪುರುಷರ ಡಬಲ್ಸ್‌ನಲ್ಲಿ ಶರತ್‌ ಕಮಲ್‌-ಸತ್ಯನ್‌ ಜೋಡಿಯು ಅಂತಿಮ 32ರ ಸುತ್ತಿನಲ್ಲಿ ಹಂಗೇರಿಯ ಬೆನ್ಸ್‌ ಮೊಜೊರೊಸ್‌ ಹಾಗೂ ಡೆನ್ಮಾರ್ಕ್ನಮ ಆ್ಯಂಡ​ರ್‍ಸ್ ಲಿಂಡ್‌ ಜೋಡಿ ವಿರುದ್ಧ 3-0ಯಲ್ಲಿ ಜಯಿಸಿತು. ಮಿಶ್ರ ಡಬಲ್ಸ್‌ನಲ್ಲಿ ಸತ್ಯನ್‌ ಹಾಗೂ ಮನಿಕಾ ಬಾತ್ರಾ ಜೋಡಿ ಬ್ರೆಜಿಲ್‌ನ ಎರಿಕ್‌ ಜೌಟಿ ಹಾಗೂ ಲುಕಾಕುಮಹಾರಾ ವಿರುದ್ಧ 3-1ರ ಅಂತರದಲ್ಲಿ ಜಯಿಸಿ ಮುನ್ನಡೆಯಿತು. ಇದೇ ವೇಳೆ ಸಿಂಗಲ್ಸ್‌ ವಿಭಾಗದ 2ನೇ ಸುತ್ತಿನಲ್ಲಿ ಶರತ್‌ ಕಮಲ್‌ ಕೊರಿಯಾದ ಲೀ ಸಾಂಗ್‌ ವಿರುದ್ಧ ಸೋಲುಂಡರು. ಮಹಿಳಾ ಸಿಂಗಲ್ಸ್‌ನಲ್ಲಿ ಶ್ರೀಜಾ ಅಕುಲಾ ಸಹ ಸೋತು ಹೊರಬಿದ್ದರು.

ಜೂನ್ 22ರಿಂದ ಐಪಿಎಲ್‌ ರೀತಿ ಟೇಕ್ವಾಂಡೋ ಲೀಗ್‌!

ಹೈದರಾಬಾದ್‌: ಐಪಿಎಲ್‌ ರೀತಿ ಇದೀಗ ಟೇಕ್ವಾಂಡೋ ಪ್ರೀಮಿಯರ್‌ ಲೀಗ್‌(ಟಿಪಿಎಲ್‌) ಕೂಡ ಶುರುವಾಗಲಿದ್ದು, ಜೂನ್‌ 22ರಿಂದ 26ರ ವರೆಗೂ ನವದೆಹಲಿಯ ಟಾಲ್ಕಟೋರಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಟೂರ್ನಿಯಲ್ಲಿ 8 ತಂಡಗಳು ಇರಲಿದ್ದು, ಬೆಂಗಳೂರು, ಹರಾರ‍ಯಣ, ಮಹಾರಾಷ್ಟ್ರ, ಅಸ್ಸಾಂ, ಹೈದರಾಬಾದ್‌, ಚೆನ್ನೈ, ಗುಜರಾತ್‌ ಹಾಗೂ ಡೆಲ್ಲಿಯನ್ನು ಪ್ರತಿನಿಧಿಸಲಿವೆ. ಪ್ರತಿ ತಂಡದಲ್ಲಿ 5 ಆಟಗಾರರು ಇರಲಿದ್ದಾರೆ. ಸ್ಪರ್ಧೆಯು ವೇಗ ಹಾಗೂ ರೋಚಕವಾಗಿರಲಿ ಎನ್ನುವ ಉದ್ದೇಶದಿಂದ ಸ್ಪರ್ಧಾಳುಗಳನ್ನು 58.1-67.9 ಕೆ.ಜಿ. ವಿಭಾಗಗಳಿಗೆ ಸೀಮಿತಗೊಳಿಸಲಾಗಿದೆ.

Latest Videos
Follow Us:
Download App:
  • android
  • ios