Asianet Suvarna News Asianet Suvarna News

ಏಷ್ಯನ್‌ ಈಜು ಚಾಂಪಿಯನ್‌ಶಿಪ್ 2019: ಭಾರತಕ್ಕೆ 64 ಪದಕ

ಬೆಂಗಳೂರಿನಲ್ಲಿ ನಡೆದ 10ನೇ ಏಷ್ಯನ್ ಈಜು ಚಾಂಪಿಯನ್‌ಶಿಪ್‌ನಲ್ಲಿ ಭಾರತ 64 ಪದಕಗಳನ್ನು ಚಾಚಿಕೊಂಡಿದೆ. ಇದರೊಂದಿಗೆ ಭಾರತ ಡೈವಿಂಗ್‌ ಸ್ಪರ್ಧೆಯಲ್ಲಿ 5 ಚಿನ್ನ, 5 ಬೆಳ್ಳಿ 2 ಕಂಚಿನೊಂದಿಗೆ 12 ಪದಕ ಗೆದ್ದಿತು. ಈ ಕುರಿತಾದ ವರದಿ ಇಲ್ಲಿದೆ ನೋಡಿ...

Asian Swimming Championship 2019 India Won 64 medals
Author
Bengaluru, First Published Oct 3, 2019, 12:57 PM IST

ಬೆಂಗಳೂರು(ಅ.03): ಬುಧವಾರ ಮುಕ್ತಾಯವಾದ 10ನೇ ಏಷ್ಯನ್‌ ವಯೋ ವರ್ಗ ಈಜು ಚಾಂಪಿಯನ್‌ಶಿಪ್‌ನ ಡೈವಿಂಗ್‌ ಸ್ಪರ್ಧೆಯಲ್ಲಿ ಭಾರತದ ಪಾಲಕ್‌ ಶರ್ಮಾ ಹಾಗೂ ಸಿದ್ಧಾಥ್‌ ಪ್ರದೇಶಿ ಚಿನ್ನದ ಪದಕಕ್ಕೆ ಮುತ್ತಿಟ್ಟರು. ಇದರೊಂದಿಗೆ ಭಾರತ ಡೈವಿಂಗ್‌ ಸ್ಪರ್ಧೆಯಲ್ಲಿ 5 ಚಿನ್ನ, 5 ಬೆಳ್ಳಿ 2 ಕಂಚಿನೊಂದಿಗೆ 12 ಪದಕ ಗೆದ್ದಿತು. ಒಟ್ಟಾರೆ ಭಾರತದ ಈಜುಪಟುಗಳು 20 ಚಿನ್ನ, 24 ಬೆಳ್ಳಿ ಹಾಗೂ 20 ಕಂಚಿನೊಂದಿಗೆ 64 ಪದಕಗಳನ್ನು ಜಯಿಸಿದರು. 

ಏಷ್ಯನ್‌ ಈಜು ಕೂಟ: ಚಿನ್ನಕ್ಕೆ ಮುತ್ತಿಟ್ಟ ರಮಾ​ನಂದ

ಮೊದಲ ಅಂ.ರಾ. ಕೂಟದಲ್ಲಿ ಭಾಗವಹಿಸಿರುವ ಪಾಲಕ್‌ ಶರ್ಮಾ 5 ಮೀ./7.5 ಮೀ. ಗುಂಪು 3 ಬಾಲಕಿಯರ ಪ್ಲಾಟ್‌ ಫಾರಂ ಸ್ಪರ್ಧೆಯಲ್ಲಿ 162.70 ಅಂಕಗಳಿಸುವ ಮೂಲಕ ಚಿನ್ನ ಗೆದ್ದರು. ಪುರುಷರ ಮುಕ್ತ ವಿಭಾಗದಲ್ಲಿ ಸಿದ್ಧಾರ್ಥ್ ಪ್ರದೇಶಿ 10 ಮೀ. ಪ್ಲಾಟ್‌ ಫಾರಂ 379 ಅಂಕಗಳಿಸುವ ಮೂಲಕ ಚಿನ್ನ ಗೆದ್ದರು. ಬಾಲಕರ ಗುಂಪು 3ರ 5 ಮೀ./7.5 ಮೀ. ಸ್ಪರ್ಧೆಯಲ್ಲಿ ಸೈರನ್‌ ಇಂದೀವರ್‌ 237 ಅಂಕಗಳಿಸುವ ಮೂಲಕ ಕಂಚಿನ ಪದಕ ಗೆದ್ದರು.

ಏಷ್ಯನ್ ಈಜು ಕೂಟ: ಶ್ರೀಹರಿ ನಟರಾಜ್ ಗೆ 5ನೇ ಚಿನ್ನ

ಒಟ್ಟಾರೆ ಈಜು ಕೂಟದಲ್ಲಿ ಜಪಾನ್‌ ತಂಡದ ಸ್ಪರ್ಧಿಗಳು ಹೆಚ್ಚು ಪದಕ ಗೆದ್ದಿತು. ಆದರೆ ಆರ್ಟಿಸ್ಟಿಕ್‌ ಈಜು ಸ್ಪರ್ಧೆಯಲ್ಲಿ ಕಜಕಸ್ತಾನ 12 ಚಿನ್ನ, 7 ಬೆಳ್ಳಿ 5 ಕಂಚು ಗೆದ್ದರೆ, ಜಪಾನ್‌ 8 ಚಿನ್ನ, 2 ಬೆಳ್ಳಿ 1 ಕಂಚು ಜಯಿಸಿತು.
 

Follow Us:
Download App:
  • android
  • ios