ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಈ ಪೈಕಿ ಹಿರಿಯರ ವಿಭಾಗದಲ್ಲಿ ಭಾರತ 6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು ಸೇರಿ 19 ಪದಕ ಕೊರಳಿಗೇರಿಸಿಕೊಂಡಿದೆ. ಜೊತೆಗೆ 6 ಶೂಟರ್‌ಗಳು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದ 36 ಪದಕಗಳು ಕಿರಿಯರ ವಿಭಾಗದಲ್ಲಿ ಭಾರತಕ್ಕೆ ಒಲಿದಿದೆ.

ಚಾಂಗ್ವೊನ್‌(ನ.03): 15ನೇ ಏಷ್ಯನ್‌ ಶೂಟಿಂಗ್‌ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಬರೋಬ್ಬರಿ 55 ಪದಕಗಳೊಂದಿಗೆ ಅಭಿಯಾನ ಕೊನೆಗೊಳಿಸಿದೆ. ಅ.22ಕ್ಕೆ ಇಲ್ಲಿ ಆರಂಭಗೊಂಡಿದ್ದ ಕೂಟದಲ್ಲಿ ಭಾರತ 21 ಚಿನ್ನ, 21 ಬೆಳ್ಳಿ ಹಾಗೂ 13 ಕಂಚಿನ ಪದಕಗಳನ್ನು ತನ್ನದಾಗಿಸಿಕೊಂಡಿದ್ದು, ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದೆ. ಈ ಪೈಕಿ ಹಿರಿಯರ ವಿಭಾಗದಲ್ಲಿ ಭಾರತ 6 ಚಿನ್ನ, 8 ಬೆಳ್ಳಿ ಹಾಗೂ 5 ಕಂಚು ಸೇರಿ 19 ಪದಕ ಕೊರಳಿಗೇರಿಸಿಕೊಂಡಿದೆ. ಜೊತೆಗೆ 6 ಶೂಟರ್‌ಗಳು 2024ರ ಪ್ಯಾರಿಸ್‌ ಒಲಿಂಪಿಕ್ಸ್‌ಗೂ ಅರ್ಹತೆ ಗಿಟ್ಟಿಸಿಕೊಂಡಿದ್ದಾರೆ. ಇನ್ನುಳಿದ 36 ಪದಕಗಳು ಕಿರಿಯರ ವಿಭಾಗದಲ್ಲಿ ಭಾರತಕ್ಕೆ ಒಲಿದಿದೆ.

ರಾಷ್ಟ್ರೀಯ ಗೇಮ್ಸ್‌: ರಾಜ್ಯಕ್ಕೆ ಮತ್ತೆ 11 ಪದಕ!

ಪಣಜಿ(ನ.03): 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಪದಕ ಗಳಿಕೆಯಲ್ಲಿ ಅರ್ಧಶತಕ ಬಾರಿಸಿದೆ. ಗುರುವಾರ 4 ಚಿನ್ನ ಸೇರಿ ಮತ್ತೆ 11 ಪದಕ ಗೆದ್ದಿದ್ದು, ಒಟ್ಟಾರೆ 20 ಚಿನ್ನ ಸೇರಿ 52 ಪದಕಗಳೊಂದಿಗೆ 4ನೇ ಸ್ಥಾನ ಕಾಯ್ದುಕೊಂಡಿದೆ.

ಗುರುವಾರ ರಾಜ್ಯಕ್ಕೆ ಈಜಿನಲ್ಲಿ 2 ಚಿನ್ನ ಸೇರಿ 6 ಪದಕ ಒಲಿಯಿತು. ಪುರುಷರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ಶ್ರೀಹರಿ ನಟರಾಜ್(55.59 ಸೆಕೆಂಡ್‌) ಕೂಟ ದಾಖಲೆಯೊಂದಿಗೆ ಚಿನ್ನ ಗೆದ್ದರೆ, ಶಿವ ಕಂಚು ಜಯಿಸಿದರು. ಮಹಿಳೆಯರ 50 ಮೀ. ಬಟರ್‌ಫ್ಲೈನಲ್ಲಿ ನೀನಾ ವೆಂಕಟೇಶ್‌(27.70 ಸೆಕೆಂಡ್‌) ಕೂಟ ದಾಖಲೆ ಜತೆ ಬಂಗಾರ ಪಡೆದರು. ಮಾನವಿ ವರ್ಮಾಗೆ ಬೆಳ್ಳಿ ಲಭಿಸಿತು. ಮಹಿಳೆಯರ 100 ಮೀ. ಬ್ಯಾಕ್‌ಸ್ಟ್ರೋಕ್‌ನಲ್ಲಿ ರಿಧಿಮಾ, 1500 ಮೀ. ಫ್ರೀಸ್ಟೈಲ್‌ನಲ್ಲಿ ಶಿರಿನ್‌ ಕಂಚು ಪಡೆದರು.

ICC World Cup 2023: ಲಖನೌದಲ್ಲಿಂದು ಡಚ್ vs ಆಫ್ಘನ್‌ ಫೈಟ್..!

ಈಜಿನಲ್ಲಿ ರಾಜ್ಯ ಒಟ್ಟು 26 ಪದಕ ಗೆದ್ದಿದೆ. ಇನ್ನು, ಪುರುಷರ 200 ಮೀ. ಓಟದಲ್ಲಿ ಅಭಿನ್‌ ದೇವಾಡಿಗ(20.87 ಸೆ.) ಚಿನ್ನ, ಶಶಿಕಾಂತ್‌(20.97 ಸೆ.) ಬೆಳ್ಳಿ ಪದಕ ಗೆದ್ದರು. ಸೈಕ್ಲಿಂಗ್‌ನ ಮಹಿಳೆಯರ 15 ಕಿ.ಮೀ. ಸ್ಕ್ರ್ಯಾಚ್‌ ರೇಸ್‌ನಲ್ಲಿ ಕೀರ್ತಿ ರಂಗಸ್ವಾಮಿ ಬೆಳ್ಳಿ ಜಯಿಸಿದರು. ಟೆನಿಸ್‌ನ ಪುರುಷರ ಡಬಲ್ಸ್‌ನಲ್ಲಿ ಪ್ರಜ್ವಲ್‌ ದೇವ್‌-ಆದಿಲ್‌ ಕಲ್ಯಾಣ್‌ಪುರ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಪ್ರಜ್ವಲ್‌-ಶರ್ಮದಾ ಬಾಲು ಸೆಮಿಫೈನಲ್‌ ಪ್ರವೇಶಿಸಿದರು.

ಟಿಟಿಯಲ್ಲಿ ಬಂಗಾರ

ಟೇಬಲ್‌ ಟೆನಿಸ್‌ನ ಮಹಿಳಾ ಸಿಂಗಲ್ಸ್‌ನಲ್ಲಿ ರಾಜ್ಯದ ಅರ್ಚನಾ ಕಾಮತ್‌ ಚಿನ್ನ ಗೆದ್ದರು. ಅವರು ಫೈನಲ್‌ನಲ್ಲಿ ಮಹಾರಾಷ್ಟ್ರದ ದಿವ್ಯಾ ಚಿತ್ತಾಲೆ ವಿರುದ್ಧ 4-1ರಲ್ಲಿ ಜಯಗಳಿಸಿದರು.

ಕಿರಿಯರ ಹಾಕಿ: ಇಂದು ಭಾರತ-ಜರ್ಮನಿ ಸೆಮಿ

ಜೋಹರ್ ಬಹ್ರು(ಮಲೇಷ್ಯಾ): ಸುಲ್ತಾನ್‌ ಆಫ್‌ ಜೋಹರ್‌ ಕಪ್‌ ಕಿರಿಯರ ಹಾಕಿ ಟೂರ್ನಿಯ ಸೆಮಿಫೈನಲ್‌ನಲ್ಲಿ ಶುಕ್ರವಾರ ಭಾರತ ಹಾಗೂ ಜರ್ಮನಿ ಸೆಣಸಾಡಲಿವೆ. ‘ಬಿ’ ಗುಂಪಿನಲ್ಲಿದ್ದ ಹಾಲಿ ಚಾಂಪಿಯನ್‌ ಭಾರತ, ಆಡಿದ 3 ಪಂದ್ಯಗಳಲ್ಲಿ 2 ಗೆಲುವು, 1 ಡ್ರಾದೊಂಡಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿತ್ತು. 3 ಬಾರಿ ಪ್ರಶಸ್ತಿ ಗೆದ್ದಿರುವ ಭಾರತ 8ನೇ ಬಾರಿ ಫೈನಲ್‌ಗೇರಲು ಕಾಯುತ್ತಿದೆ. ಅತ್ತ ಜರ್ಮನಿ ‘ಎ’ ಗುಂಪಿನಲ್ಲಿ 2ರಲ್ಲಿ ಜಯ, 1 ಡ್ರಾದೊಂದಿಗೆ 2ನೇ ಸ್ಥಾನಿಯಾಗಿತ್ತು. ತಂಡ 2ನೇ ಬಾರಿ ಫೈನಲ್‌ಗೇರಲು ಕಾಯುತ್ತಿದೆ.