Asianet Suvarna News Asianet Suvarna News

ICC World Cup 2023: ಲಖನೌದಲ್ಲಿಂದು ಡಚ್ vs ಆಫ್ಘನ್‌ ಫೈಟ್..!

ಆಫ್ಘಾನಿಸ್ತಾನ ತಂಡವು ಬ್ಯಾಟಿಂಗ್‌ನಲ್ಲಿ ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರೆಹ್ಮತ್ ಶಾ ಅವರನ್ನು ನೆಚ್ಚಿಕೊಂಡಿದೆ. ಇನ್ನು ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ನವೀನ್ ಉಲ್ ಹಕ್, ಫಜಲ್ ಹಕ್ ಫಾರೂಕಿ ಮಾರಕ ದಾಳಿ ನಡೆಸಲು ಸಜ್ಜಾಗಿದ್ದಾರೆ.

ICC World Cup 2023 Afghanistan take on Netherlands challenge in Lucknow kvn
Author
First Published Nov 3, 2023, 10:33 AM IST | Last Updated Nov 3, 2023, 10:33 AM IST

ಲಖನೌ(ನ.03): ಈ ಬಾರಿ ದೈತ್ಯ ಸಂಹಾರಗಳ ಮೂಲಕ ಗಮನ ಸೆಳೆಯುತ್ತಿರುವ ಅಫ್ಘಾನಿಸ್ತಾನ ಹಾಗೂ ನೆದರ್‌ಲೆಂಡ್ಸ್ ಶುಕ್ರವಾರ ಲಖನೌ ಕ್ರೀಡಾಂಗಣದಲ್ಲಿ ಪರಸ್ಪರ ಮುಖಾಮುಖಿಯಾಗಲಿವೆ. ಸೆಮಿಫೈನಲ್‌ ರೇಸ್‌ನಲ್ಲಿ ನೆಲೆಯೂರಬೇಕಿದ್ದರೆ ಆಫ್ಘನ್‌ಗೆ ಈ ಪಂದ್ಯದಲ್ಲಿ ಗೆಲುವು ಅನಿವಾರ್ಯಯಾಗಿದ್ದು, ಸೋತರೆ ಬಹುತೇಕ ಹೊರಬೀಳಲಿದೆ.

ಆಫ್ಘನ್‌ ಟೂರ್ನಿಯಲ್ಲಿ 6 ಪಂದ್ಯಗಳನ್ನಾಡಿದ್ದು, ಇಂಗ್ಲೆಂಡ್‌, ಪಾಕಿಸ್ತಾನ ಹಾಗೂ ಶ್ರೀಲಂಕಾ ವಿರುದ್ಧದ ಗೆಲುವು ತಂಡವನ್ನು ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿರಿಸಿದೆ. ಈ ಪಂದ್ಯದಲ್ಲೂ ಗೆದ್ದರೆ ತಂಡ 5ನೇ ಸ್ಥಾನಕ್ಕೇರಲಿದ್ದು, ರೇಸ್‌ನಲ್ಲಿ ನ್ಯೂಜಿಲೆಂಡ್‌(08 ಅಂಕ) ಹಾಗೂ ಪಾಕ್‌ಗೆ(06 ಅಂಕ) ಕಠಿಣ ಸ್ಪರ್ಧೆ ಒಡ್ಡುವುದು ಖಚಿತ. ಸ್ಪಿನ್ ಸ್ನೇಹಿ ಪಿಚ್‌ನಲ್ಲಿ ದೊಡ್ಡ ಅಂತರದಲ್ಲಿ ಗೆದ್ದು ನೆಟ್‌ ರನ್‌ರೇಟ್‌ ಕೂಡಾ ಹೆಚ್ಚಿಸುವುದು ತಂಡದ ಮುಂದಿರುವ ಪ್ರಮುಖ ಗುರಿ. ಅತ್ತ ಡಚ್‌ ಪಡೆ 6ರಲ್ಲಿ 2 ಪಂದ್ಯ ಗೆದ್ದಿದ್ದು, ರೇಸ್‌ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲೂ ಗೆಲ್ಲಬೇಕಿದೆ. ಸೋತರೆ ತಂಡ ರೇಸ್‌ನಿಂದಲೇ ಹೊರಬೀಳುವುದು ಬಹುತೇಕ ಖಚಿತ.

INDvSL ಮೊಹಮ್ಮದ್ ಶಮಿ ದಾಳಿಗೆ ದಿಗ್ಗಜ ಜಹೀರ್ ಖಾನ್, ಜಾವಗಲ್ ಶ್ರೀನಾಥ್ ದಾಖಲೆ ಪುಡಿ ಪುಡಿ!

ಆಫ್ಘಾನಿಸ್ತಾನ ತಂಡವು ಬ್ಯಾಟಿಂಗ್‌ನಲ್ಲಿ ರೆಹಮನುಲ್ಲಾ ಗುರ್ಬಾಜ್, ಇಬ್ರಾಹಿಂ ಜದ್ರಾನ್, ರೆಹ್ಮತ್ ಶಾ ಅವರನ್ನು ನೆಚ್ಚಿಕೊಂಡಿದೆ. ಇನ್ನು ಮೊಹಮ್ಮದ್ ನಬಿ ಹಾಗೂ ರಶೀದ್ ಖಾನ್ ಆಲ್ರೌಂಡ್ ಆಟದ ಮೂಲಕ ಗಮನ ಸೆಳೆಯುತ್ತಿದ್ದಾರೆ. ಇನ್ನು ನವೀನ್ ಉಲ್ ಹಕ್, ಫಜಲ್ ಹಕ್ ಫಾರೂಕಿ ಮಾರಕ ದಾಳಿ ನಡೆಸಲು ಸಜ್ಜಾಗಿದ್ದಾರೆ.

ಸಂಭವನೀಯ ಆಟಗಾರರ ಪಟ್ಟಿ

ಅಫ್ಘಾನಿಸ್ತಾನ: ರೆಹಮನುಲ್ಲಾ ಗುರ್ಬಜ್‌, ಇಬ್ರಾಹಿಂ ಜದ್ರಾನ್‌, ರಹ್ಮತ್‌ ಶಾ, ಹಶ್ಮತುಲ್ಲಾ ಶಾಹೀದಿ(ನಾಯಕ), ಅಜ್ಮತುಲ್ಲಾ ಓಮರ್‌ಝೈ, ಇಕ್ರಂ ಅಲಿಕಿಲ್‌, ಮೊಹಮ್ಮದ್ ನಬಿ, ರಶೀದ್‌ ಖಾನ್, ಮುಜೀಬ್‌ ಉರ್ ರೆಹಮಾನ್, ನವೀನ್‌ ಉಲ್ ಹಕ್, ಫಜಲ್‌ ಹಕ್ ಫಾರೂಕಿ.

ನೆದರ್‌ಲೆಂಡ್ಸ್‌: ವಿಕ್ರಂಜಿತ್‌ ಸಿಂಗ್, ಮ್ಯಾಕ್ಸ್ ಒಡೌಡ್‌, ವೆಸ್ಲೆ ಬಾರೆಸೈ, ಕಾಲಿನ್ ಆ್ಯಕರ್‌ಮನ್‌, ಸ್ಕಾಟ್ ಎಡ್ವರ್ಡ್ಸ್‌(ನಾಯಕ), ಬಾಸ್ ಡೇ ಲೀಡೆ, ಸೈಬ್ರಂಡ್‌, ಬೀಕ್‌, ಶಾರಿಜ್‌, ಆರ್ಯನ್‌, ಮೀಕೆರನ್‌.

ಒಟ್ಟು ಮುಖಾಮುಖಿ: 09

ಅಫ್ಘಾನಿಸ್ತಾನ: 07

ನೆದರ್‌ಲೆಂಡ್ಸ್‌: 02

ಪಂದ್ಯ: ಮಧ್ಯಾಹ್ನ 2ಕ್ಕೆ
 

Latest Videos
Follow Us:
Download App:
  • android
  • ios