ಬುಧವಾರ ಚಿನ್ನ ಗೆದ್ದ ಭಾರತೀಯರಲ್ಲಿ ಕರ್ನಾಟಕದ ರಕ್ಷಿತಾ ರಾಜು ಕೂಡಾ ಒಬ್ಬರು. ಅವರು ಮಹಿಳೆಯರ ಟಿ-11 ವಿಭಾಗದ 1500 ಮೀ. ಸ್ಪರ್ಧೆಯಲ್ಲಿ 5 ನಿಮಿಷ 21.45 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿದರು. ಇದೇ ಸ್ಪರ್ಧೆಯಲ್ಲಿ ಲಲಿತಾ ಬೆಳ್ಳಿ ಗೆದ್ದರು. ಪುರುಷರ ಟಿ-13 1500 ಮೀ. ಓಟದಲ್ಲಿ ರಾಜ್ಯದ ಶರತ್ ಶಂಕರಪ್ಪಗೆ ಬೆಳ್ಳಿ ಲಭಿಸಿತು. ಬಲ್ವಂತ್ ಸಿಂಗ್ ಕಂಚು ಗೆದ್ದರು. 

ಹಾಂಗ್ಝೋ(ಅ.26): ಪ್ಯಾರಾ ಏಷ್ಯನ್ ಗೇಮ್ಸ್ ನಲ್ಲಿ ಭಾರತದ ಪದಕ ಗೆಲುವಿನ ನಾಗಾಲೋಟ ಮುಂದುವರಿದಿದೆ. 4ನೇ ಆವೃತ್ತಿ ಕೂಟದ 3ನೇ ದಿನವಾದ ಬುಧವಾರ ಭಾರತೀಯರು 6 ಚಿನ್ನ, 8 ಬೆಳ್ಳಿ, 16 ಕಂಚು ಸೇರಿ ಬರೋಬ್ಬರಿ 30 ಪದಕ ಕೊಳ್ಳೆ ಹೊಡೆದಿದ್ದು, ಒಟ್ಟಾರೆ ಪದಕ ಗಳಿಕೆ 15 ಚಿನ್ನ ಸೇರಿ 64ಕ್ಕೆ ಏರಿಕೆಯಾಗಿದೆ. ಸದ್ಯ ಭಾರತ ಪದಕ ಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದೆ. ಚೀನಾ ಬರೋಬ್ಬರಿ 300 ಪದಕದೊಂದಿಗೆ ಅಗ್ರಸ್ಥಾನದಲ್ಲೇ ಮುಂದುವರಿದಿದೆ.

ರಕ್ಷಿತಾಗೆ ಸ್ವರ್ಣ: ಬುಧವಾರ ಚಿನ್ನ ಗೆದ್ದ ಭಾರತೀಯರಲ್ಲಿ ಕರ್ನಾಟಕದ ರಕ್ಷಿತಾ ರಾಜು ಕೂಡಾ ಒಬ್ಬರು. ಅವರು ಮಹಿಳೆಯರ ಟಿ-11 ವಿಭಾಗದ 1500 ಮೀ. ಸ್ಪರ್ಧೆಯಲ್ಲಿ 5 ನಿಮಿಷ 21.45 ಸೆಕೆಂಡ್‌ಗಳಲ್ಲಿ ಕ್ರಮಿಸಿ ಚಿನ್ನ ಜಯಿಸಿದರು. ಇದೇ ಸ್ಪರ್ಧೆಯಲ್ಲಿ ಲಲಿತಾ ಬೆಳ್ಳಿ ಗೆದ್ದರು. ಪುರುಷರ ಟಿ-13 1500 ಮೀ. ಓಟದಲ್ಲಿ ರಾಜ್ಯದ ಶರತ್ ಶಂಕರಪ್ಪಗೆ ಬೆಳ್ಳಿ ಲಭಿಸಿತು. ಬಲ್ವಂತ್ ಸಿಂಗ್ ಕಂಚು ಗೆದ್ದರು. 

French Open Badminton: ಕಿದಂಬಿ ಶ್ರೀಕಾಂತ್, ಲಕ್ಷ್ಯ ಸೆನ್‌ಗೆ ಸೋಲಿನ ಶಾಕ್

ಇನ್ನು ಪುರುಷರ ಎಫ್ 37/38 ಜಾವೆಲಿನ್‌ನಲ್ಲಿ ಹನಿ ಚಿನ್ನ ಗೆದ್ದರೆ, ಮಹಿಳೆಯರ ಟಿ47 ಲಾಂಗ್‌ಜಂಪ್‌ನಲ್ಲಿ ನಿಮಿಶಾ ಸ್ವಣ ಹೆಕ್ಕಿದರು. ಪುರುಷರ ಎಫ್‌47 ಶಾಟ್‌ಪುಟ್ ನಲ್ಲಿ ರಾಣಾ ಸೋಮನ್ ಬೆಳ್ಳಿ, ಹೊಕಾಟೊ ಸೆನಾ ಕಂಚಿನ ಪದಕಕ್ಕೆ ಕೊರಳೊಡ್ಡಿದರು

ಸುಮಿತ್ ವಿಶ್ವ ದಾಖಲೆ!

ಪುರುಷರ ಎಫ್-64 ಜಾವೆಲಿನ್ ಥ್ರೋ ಸ್ಪರ್ಧೆಯಲ್ಲಿ ಸುಮಿತ್ ಅಂತಿಲ್ ವಿಶ್ವ ದಾಖಲೆಯೊಂದಿಗೆ ಚಿನ್ನದ ಪದಕ ಗೆದ್ದರು. ಬುಧವಾರ ನಡೆದ ಸ್ಪರ್ಧೆಯ 3ನೇ ಪ್ರಯತ್ನದಲ್ಲಿ 73.29 ಮೀ. ದೂರಕ್ಕೆ ಜಾವೆಲಿನ್ ಎಸೆದ ಅವರು ತಮ್ಮ ಹೆಸರಲ್ಲೇ ಇದ್ದ ದಾಖಲೆಯನ್ನು ಉತ್ತಮ ಗೊಳಿಸಿ, ಬಂಗಾರಕ್ಕೆ ಕೊರಳೊಡ್ಡಿದರು. ಸುಮಿತ್ ಈ ವರ್ಷ ಪ್ಯಾರಿಸ್‌ನಲ್ಲಿ ನಡೆದಿದ್ದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ 70.83 ಮೀ. ಎಸೆದು ವಿಶ್ವ ದಾಖಲೆ ಬರೆದಿದ್ದರು. ಟೋಕಿಯೋ ಪ್ಯಾರಾಲಿಂಪಿಕ್ಸ್ ನಲ್ಲಿ 68.55 ಮೀ. ಎಸೆದು ಚಿನ್ನದ ಪದಕ ಗಳಿಸಿದ್ದರು.

ಫ್ರೆಂಚ್‌ ಓಪನ್‌ ಬ್ಯಾಡ್ಮಿಂಟನ್: ಸಿಂಧು, ಸಾತ್ವಿಕ್‌-ಚಿರಾಗ್‌ಗೆ ಜಯ

ಎಫ್‌-46 ಜಾವೆಲಿನ್‌: ಭಾರತ ಕ್ಲೀನ್‌ಸ್ವೀಪ್‌

ಕ್ರೀಡಾಕೂಟದ ಪುರುಷರ ಎಫ್‌-46 ವಿಭಾಗದ ಜಾವೆಲಿನ್‌ ಎಸೆತದಲ್ಲಿ ಭಾರತ ಕ್ಲೀನ್‌ಸ್ವೀಪ್‌ ಸಾಧನೆ ಮಾಡಿತು. ಸುಂದರ್‌ ಸಿಂಗ್‌ 68.60ಮೀ. ವಿಶ್ವದಾಖಲೆ ದೂರದೊಂದಿಗೆ ಚಿನ್ನ ಗೆದ್ದರೆ, ರಿಂಕು ಸಿಂಗ್‌(67.08ಮೀ.) ಬೆಳ್ಳಿ, ಅಜೀತ್‌ ಸಿಂಗ್‌(63.52 ಮೀ.) ಕಂಚು ಜಯಿಸಿದರು. ಕೂಟದಲ್ಲಿ ಭಾರತಕ್ಕೆ ಇನ್ನೂ 3 ಸ್ಪರ್ಧೆಗಳಲ್ಲಿ ತಲಾ 2 ಪದಕ ಬಂದವು. ಮಹಿಳೆಯರ ಟಿ11 ವಿಭಾಗದ 1500 ಓಟದಲ್ಲಿ ರಕ್ಷಿತಾ ಚಿನ್ನ, ಲಲಿತಾ ಬೆಳ್ಳಿ ಗೆದ್ದರು. ಪುರುಷರ ಟಿ13 ವಿಭಾಗದ 1500 ಮೀ. ರೇಸ್‌ನಲ್ಲಿ ಶರತ್‌ ಬೆಳ್ಳಿ, ಬಲ್ವಂತ್‌ ಸಿಂಗ್‌ ಕಂಚು ಗೆದ್ದರೆ, ಪುರುಷರ ಎಫ್‌47 ಶಾಟ್‌ಪುಟ್‌ನಲ್ಲಿ ರಾಣಾ ಸೋಮನ್‌ ಬೆಳ್ಳಿ, ಹೊಕಾಟೊ ಸೆನಾ ಕಂಚು ಜಯಿಸಿದರು.

ಇಂದು ಮತ್ತಷ್ಟು ಪದಕ ಭರವಸೆ

ಭಾರತ ಗುರುವಾರವೂ ಪದಕ ಬೇಟೆ ಮುಂದುವರಿಸುವ ನಿರೀಕ್ಷೆಯಲ್ಲಿದೆ. ಅಥ್ಲೆಟಿಕ್ಸ್‌ನ ಪುರುಷ, ಮಹಿಳೆಯರ ಡಿಸ್ಕಸ್ ಥ್ರೋ, ಶಾಟ್‌ಪುಟ್‌, ಮಹಿಳೆಯರ ಜಾವೆಲಿನ್‌ ಎಸೆತ, 100 ಮೀ. ಓಟ, ವೇಟ್‌ಲಿಫ್ಟಿಂಗ್‌ ಸೇರಿದಂತೆ ಇನ್ನೂ ಕೆಲ ಕ್ರೀಡೆಗಳಲ್ಲಿ ಪದಕ ಲಭಿಸುವ ಭರವಸೆ ಇದೆ.