Asianet Suvarna News Asianet Suvarna News

ಪ್ಯಾರಾ ಏಷ್ಯಾಡ್‌ಗೆ ಅಧಿಕೃತ ಚಾಲನೆ: ಭಾರತದ ಕ್ರೀಡಾಳುಗಳ ಮೇಲೆ ಎಲ್ಲರ ಚಿತ್ತ

ಸುಮಾರು 2000 ನಟಿ-ನಟಿಯರು ಏಕಕಾಲಕ್ಕೆ ಹಾಡಿದ ಹಾಡು ಸಮಾರಂಭದ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು. ಚೀನಾದ ಸಾಂಸ್ಕೃತಿಕ ವೈಭವ, ಸಂಗೀತ ಕಾರ್ಯಕ್ರಮ, ಲೈಟ್‌ ಶೋ ಕಾರ್ಯಕ್ರಮದ ಕಲೆ ಹೆಚ್ಚಿಸಿತು. ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲಾ ದೇಶಗಳ ಅಥ್ಲೀಟ್‌ಗಳ ಆಕರ್ಷಕ ಪಥಸಂಚಲನವೂ ಗಮನ ಸೆಳೆಯಿತು.

Asian Para Games 2022 begins India eyes on all time medal tally kvn
Author
First Published Oct 23, 2023, 11:47 AM IST

ಹಾಂಗ್‌ಝೋ(ಅ23): 4ನೇ ಆವೃತ್ತಿ ಪ್ಯಾರಾ ಏಷ್ಯನ್‌ ಗೇಮ್ಸ್‌ ಭಾನುವಾರ ಚೀನಾದ ಹಾಂಗ್‌ಝೋ ನಗರದಲ್ಲಿ ಅದ್ಧೂರಿ ಚಾಲನೆ ಲಭಿಸಿತು. ಭಾನುವಾರ ಹಾಂಗ್‌ಝೋ ಒಲಿಂಪಿಕ್‌ ಸ್ಪೋರ್ಟ್ಸ್‌ ಸೆಂಟರ್‌ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಉದ್ಘಾಟನಾ ಸಮಾರಂಭ ನೋಡುಗರ ಕಣ್ಮನ ಸೆಳೆಯಿತು.

ಸುಮಾರು 2000 ನಟಿ-ನಟಿಯರು ಏಕಕಾಲಕ್ಕೆ ಹಾಡಿದ ಹಾಡು ಸಮಾರಂಭದ ಪ್ರಮುಖ ಆಕರ್ಷಣೆ ಎನಿಸಿಕೊಂಡಿತು. ಚೀನಾದ ಸಾಂಸ್ಕೃತಿಕ ವೈಭವ, ಸಂಗೀತ ಕಾರ್ಯಕ್ರಮ, ಲೈಟ್‌ ಶೋ ಕಾರ್ಯಕ್ರಮದ ಕಲೆ ಹೆಚ್ಚಿಸಿತು. ಕೂಟದಲ್ಲಿ ಪಾಲ್ಗೊಳ್ಳುವ ಎಲ್ಲಾ ದೇಶಗಳ ಅಥ್ಲೀಟ್‌ಗಳ ಆಕರ್ಷಕ ಪಥಸಂಚಲನವೂ ಗಮನ ಸೆಳೆಯಿತು. ಪ್ಯಾರಾ ಬ್ಯಾಡ್ಮಿಂಟನ್‌ ತಾರೆ ಪಾರುಲ್‌ ಪರ್ಮಾರ್‌, ಪ್ಯಾರಾ ಡಿಸ್ಕಸ್‌ ಎಸೆತಗಾರ ಅಮಿತ್‌ ಸರೋಹಾ ಭಾರತದ ಧ್ವಜಧಾರಿಗಳಾಗಿದ್ದರು.

ಪಾಕಿಸ್ತಾನ ಹಿಂದೂ ದೇಗುಲದಲ್ಲಿ ನವರಾತ್ರಿ ಪೂಜೆ, ಕುಟುಂಬ ಸಮೇತ ಪಾಲ್ಗೊಂಡ ಕ್ರಿಕೆಟಿಗ!

ಭಾರತಕ್ಕಿಂದು ಪದಕ ನಿರೀಕ್ಷೆ

ಕೂಟದಲ್ಲಿ ಕೆಲ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿದ್ದು, ಭಾರತ ಸೋಮವಾರ ಪದಕ ಬೇಟೆ ಆರಂಭಿಸುವ ನಿರೀಕ್ಷೆಯಿದೆ. ಪುರುಷ, ಮಹಿಳೆಯರ ಜಾವೆಲಿನ್‌ ಎಸೆತ, ಹೈಜಂಪ್‌, ಶಾಟ್‌ಪುಟ್‌, ಲಾಂಗ್‌ಜಂಪ್‌, ಶೂಟಿಂಗ್‌ ಸೇರಿದಂತೆ ಹಲವು ಸ್ಪರ್ಧೆಗಳಲ್ಲಿ ಭಾರತೀಯರು ಪದಕ ಗೆಲ್ಲುವ ಫೇವರಿಟ್‌ ಎನಿಸಿದ್ದಾರೆ.

ಧಾರವಾಡ ಓಪನ್‌ ಕಿರೀಟ ಜಯಿಸಿದ ರಾಮ್‌ಕುಮಾರ್‌

ಧಾರವಾಡ: ಇತ್ತೀಚೆಗಷ್ಟೇ ಏಷ್ಯನ್‌ ಗೇಮ್ಸ್‌ನ ಡಬಲ್ಸ್‌ನಲ್ಲಿ ಬೆಳ್ಳಿ ಪದಕ ಗೆದ್ದಿದ್ದ ಭಾರತದ ತಾರಾ ಟೆನಿಸಿಗ ರಾಮ್‌ಕುಮಾರ್‌ ರಾಮನಾಥನ್‌ ಐಟಿಎಫ್‌ ಧಾರವಾಡ ಓಪನ್‌ ಪುರುಷರ ಟೆನಿಸ್‌ ಟೂರ್ನಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ.

ಡೆನ್ಮಾರ್ಕ್‌ ಓಪನ್‌: ಸಿಂಧು ಸವಾಲು ಸೆಮೀಸಲ್ಲಿ ಅಂತ್ಯ

ಭಾನುವಾರ ಇಲ್ಲಿ ನಡೆದ ಫೈನಲ್‌ ಹಣಾಹಣಿಯಲ್ಲಿ ಭಾರತದವರೇ ಆದ 3ನೇ ಶ್ರೇಯಾಂಕಿತ ದಿಗ್ವಿಜಯ್‌ ಪ್ರತಾಪ್‌ ಸಿಂಗ್‌ ವಿರುದ್ಧ 4ನೇ ಶ್ರೇಯಾಂಕಿತ ರಾಮ್‌ಕುಮಾರ್‌ 7-6(5), 7-6(6) ಅಂತರದಲ್ಲಿ ರೋಚಕ ಗೆಲುವು ಸಾಧಿಸಿದರು. ಆಕ್ರಮಣಕಾರಿ ಆಟದ ಮೂಲಕ ರಾಮ್‌ ಮೊದಲ ಸೆಟ್‌ ಗೆದ್ದರೂ, 2ನೇ ಸೆಟ್‌ನಲ್ಲಿ ದಿಗ್ವಿಜಯ್‌ 4-1ರಿಂದ ಮುನ್ನಡೆ ಸಾಧಿಸಿದ್ದರು. ಆದರೆ ಬಳಿಕ ಅನುಭವಿ ರಾಮ್‌ ವಿರುದ್ಧ ಹಲವು ತಪ್ಪುಗಳನ್ನೆಸೆದ ದಿಗ್ವಿಜಯ್‌ ಪ್ರಶಸ್ತಿ ಗೆಲ್ಲುವ ಅವಕಾಶ ಕೈಚೆಲ್ಲಿದರು. ಚಾಂಪಿಯನ್‌ ರಾಮ್‌ಕುಮಾರ್‌ ಅಂದಾಜು 3 ಲಕ್ಷ ರು. ನಗದು ಬಹುಮಾನ ಪಡೆದರೆ, ದಿಗ್ವಿಜಯ್‌ಗೆ 1.76 ಲಕ್ಷ ರು. ಲಭಿಸಿತು.

ಏಷ್ಯಾ ಜೂ. ಬ್ಯಾಡ್ಮಿಂಟನ್‌ ಕೂಟ: ಆಕಾಶ್‌ ಚಾಂಪಿಯನ್‌

ಚೆಂಗ್‌ಡು(ಚೀನಾ): ಭಾರತದ ಯುವ ಶಟ್ಲರ್‌ ಆಕಾಶ್‌ ಬೊರ್ನಿಲ್‌ ಏಷ್ಯಾ ಜೂನಿಯರ್‌ ಬ್ಯಾಡ್ಮಿಂಟನ್‌ ಚಾಂಪಿಯನ್‌ಶಿಪ್‌ನಲ್ಲಿ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. ಭಾನುವಾರ ಇಲ್ಲಿ ನಡೆದ ಅಂಡರ್‌-15 ಬಾಲಕರ ವಿಭಾಗದ ಫೈನಲ್‌ನಲ್ಲಿ 13 ವರ್ಷದ ಆಕಾಶ್‌, ಚೀನನಾದ ಫ್ಯಾನ್‌ ಹಾಂಗ್‌ ವಿರುದ್ಧ 21-19, 21-13 ಅಂತರದಲ್ಲಿ ಗೆಲುವು ಸಾಧಿಸಿದರು. ಇದರೊಂದಿಗೆ ಕೂಟದಲ್ಲಿ ಚಿನ್ನ ಗೆದ್ದ ಭಾರತದ 2ನೇ ಶಟ್ಲರ್‌ ಎನಿಸಿಕೊಂಡರು. 2013ರಲ್ಲಿ ಸಿರಿಲ್ ವರ್ಮಾ ಚಾಂಪಿಯನ್‌ ಆಗಿದ್ದರು. ಇದೇ ವೇಳೆ ಬಾಲಕಿಯರ ಅಂಡರ್‌-17 ವಿಭಾಗದಲ್ಲಿ ತಾನ್ವಿ ಶರ್ಮಾ ಫೈನಲ್‌ನಲ್ಲಿ ಥಾಯ್ಲೆಂಡ್‌ನ ಯಟವೀಮಿನ್‌ ವಿರುದ್ಧ ಸೋತು ಬೆಳ್ಳಿಗೆ ತೃಪ್ತಿಪಟ್ಟರು.

ರಾಷ್ಟ್ರೀಯ ಗೇಮ್ಸ್‌ನಲ್ಲಿ ರಾಜ್ಯಕ್ಕೆ ಮೊದಲ ಚಿನ್ನ!

ಪಣಜಿ: 37ನೇ ರಾಷ್ಟ್ರೀಯ ಕ್ರೀಡಾಕೂಟದಲ್ಲಿ ಕರ್ನಾಟಕ ಮೊದಲ ಚಿನ್ನದ ಪದಕ ತನ್ನದಾಗಿಸಿಕೊಂಡಿದೆ. ಕ್ರೀಡಾಕೂಟಕ್ಕೆ ಅ.25ಕ್ಕೆ ಅಧಿಕೃತವಾಗಿ ಚಾಲನೆ ಸಿಗಬೇಕಿದ್ದರೂ ಕೆಲ ಸ್ಪರ್ಧೆಗಳು ಈಗಾಗಲೇ ಆರಂಭಗೊಂಡಿವೆ. ಭಾನುವಾರ ಬ್ಯಾಡ್ಮಿಂಟನ್‌ ವಿಭಾಗದ ಫೈನಲ್‌ ನಡೆಯಿತು. ಪುರುಷರ ತಂಡ ವಿಭಾಗದ ಪ್ರಶಸ್ತಿ ಫೈಟ್‌ನಲ್ಲಿ ಕರ್ನಾಟಕ ತಂಡ ಮಹಾರಾಷ್ಟ್ರ ವಿರುದ್ಧ 3-1 ಅಂತರದಲ್ಲಿ ಗೆಲುವು ಸಾಧಿಸಿ ಚಿನ್ನದ ಪದಕಕ್ಕೆ ಕೊರಳೊಡ್ಡಿತು. 2 ಸಿಂಗಲ್ಸ್‌ ಹಾಗೂ 1 ಡಬಲ್ಸ್‌ ಪಂದ್ಯದಲ್ಲಿ ಕರ್ನಾಟಕ ಶಟ್ಲರ್‌ಗಳು ಜಯಗಳಿಸಿದರು.
 

Follow Us:
Download App:
  • android
  • ios