ಪುರುಷರ 74 ಕೆ.ಜಿ ಪ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬಹ್ರೇನ್’ನ ಆ್ಯಡಂ ಬೆಟಿರ್ವ್ ವಿರುದ್ಧ 5-3 ಅಂಕಗಳ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಆರಂಭದಲ್ಲಿ 2-1 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಸುಶೀಲ್ ದ್ವಿತಿಯಾರ್ಧದಲ್ಲಿ ಅದೇ ಪ್ರದರ್ಶನ ಕಾಯ್ದುಕೊಳ್ಳಲು ವಿಫಲರಾದರು. 

ಜಕಾರ್ತ[ಆ.19]: ಕುಸ್ತಿಯಲ್ಲಿ ಪದಕ ಗೆಲ್ಲುವ ನೆಚ್ಚಿನ ಸ್ಪರ್ಧಾಳು ಎಂದು ಗುರುತಿಸಿಕೊಂಡಿದ್ದ ಭಾರತದ ಒಲಿಂಪಿಕ್ಸ್ ಪದಕ ವಿಜೇತ ಸುಶೀಲ್ ಕುಮಾರ್ ಆರ್ಹತಾ ಸುತ್ತಿನಲ್ಲೇ ಹೊರಬಿದ್ದು ನಿರಾಸೆ ಅನುಭವಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಪುರುಷರ 74 ಕೆ.ಜಿ ಪ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ಬಹ್ರೇನ್’ನ ಆ್ಯಡಂ ಬೆಟಿರ್ವ್ ವಿರುದ್ಧ 5-3 ಅಂಕಗಳ ಆಘಾತಕಾರಿ ಸೋಲು ಅನುಭವಿಸಿದ್ದಾರೆ. ಆರಂಭದಲ್ಲಿ 2-1 ಅಂಕಗಳ ಮುನ್ನಡೆ ಕಾಯ್ದುಕೊಂಡಿದ್ದ ಸುಶೀಲ್ ದ್ವಿತಿಯಾರ್ಧದಲ್ಲಿ ಅದೇ ಪ್ರದರ್ಶನ ಕಾಯ್ದುಕೊಳ್ಳಲು ವಿಫಲರಾದರು. ಆಕ್ರಮಣ ಹಾಗೂ ತಾಂತ್ರಿಕ ಕೌಶಲ್ಯ ಮೆರೆದ ಬಹ್ರೇನ್’ನ ಕುಸ್ತಿಪಟು 5-3 ಅಂಕಗಳ ಅಂತರದಲ್ಲಿ ಸುಶೀಲ್’ಗೆ ಸೋಲಿನ ರುಚಿ ತೋರಿಸಿದರು. 

ಇನ್ನು 57 ಕೆ.ಜಿ ವಿಭಾಗದ ಕ್ವಾಲಿಫೈಯರ್ ಹಂತದ ಕುಸ್ತಿಯಲ್ಲಿ ಸಂದೀಪ್ ತೋಮರ್ ತುರ್ಕಮೇನಿಸ್ತಾನ್ ತಂಡದ ರುಸ್ತೀಮ್ ನಜರೋವ್ ವಿರುದ್ಧ 12-8 ಅಂಕಗಳ ಗೆಲುವು ಸಾಧಿಸಿ ಮುಂದಿನ ಹಂತಕ್ಕೆ ಲಗ್ಗೆಯಿಟ್ಟಿದ್ದಾರೆ.