ಶಾಟ್‌ಪುಟ್ ಎಸೆತದಲ್ಲಿ ಭಾರತದ ತಜೀಂದರ್‌ಪಾಲ್ ಚಿನ್ನ ಗೆದ್ದು ದಾಖಲೆ ಬರೆದಿದ್ದಾರೆ. ಈ ತಜೀಂದರ್‌ಪಾಲ್ ಚಿನ್ನದ ಗೆಲುವಿನ ಹಿಂದೆ ರೋಚಕ ಕತೆ ಇದೆ. ಪಾಲ್ ಚಿನ್ನದ ಗೆಲುವಿಗೆ ಕೋಚ್ ಹೇಗೆ ಸಹಾಯ ಮಾಡಿದ್ದಾರೆ? ಇಲ್ಲಿದೆ.

ಜಕರ್ತಾ(ಆ.27): 18ನೇ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಹಲವು ಕ್ರೀಡೆಗಳಲ್ಲಿ ನಿರೀಕ್ಷೆಗೂ ಮೀರಿದ ಪ್ರದರ್ಶನ ನೀಡಿ ಪದಕ ಗೆದ್ದ ಸಾಧನೆ ಮಾಡಿದಿ. ಶಾಟ್‌ಪುಟ್‌ನಲ್ಲಿ ಭಾರತ ತಜೀಂದರ್‌ಪಾಲ್ ಚಿನ್ನ ಗೆಲ್ಲೋ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

Add Asianetnews Kannada as a Preferred SourcegooglePreferred

ತಜೀಂದರ್‌ಪಾಲ್ ಫೈನಲ್ ಸುತ್ತಿನ ಹೋರಾಟದಲ್ಲಿ ಕೋಚ್ ಬೈಗುಳವೇ ಚಿನ್ನಕ್ಕೆ ಕಾರಣವಾಯಿತು. ಅಂತಿಮ ಸುತ್ತಿನಲ್ಲಿ ತಜೀಂದರ್‌ಪಾಲ್ ಇನ್ನೇನು ಶಾಟ್‌ಪುಟ್ ಎಸೆಯಬೇಕು ಎನ್ನುವಷ್ಟರಲ್ಲಿ ಕೋಚ್ ಬೈಗುಳ ಶುರುಮಾಡಿದ್ದರು. 

ತಜೀಂದರ್‌ಪಾಲ್‌ನಲ್ಲಿ ಆಕ್ರೋಶ ಬರಿಸೋ ಮೂಲಕ ಆತನಲ್ಲಿ ಮತ್ತಷ್ಟು ಶಕ್ತಿ ತುಂಬುವ ಪ್ಲಾನ್ ಚೆನ್ನಾಗಿ ವರ್ಕೌಟ್ ಆಯಿತು ಎಂದು ಕೋಚ್ ಹೇಳಿದ್ದಾರೆ. ಅಂತಿಮ ಸುತ್ತಿಗೆ ಸಜ್ಜಾಗುತ್ತಿದ್ದ ತಜೀಂದರ್‌ಪಾಲ್ ಕಡೆ ತಿರುಗಿದ ಕೋಚ್, ನಾನು ನಿನಗೋಸ್ಕರ ಮನೆ ಬಿಟ್ಟು ಬಂದಿದ್ದೇನೆ. ನಿನ್ನ ತಂದೆ ಕ್ಯಾನ್ಸರ್ ವಿರುದ್ಧ ಹೋರಾಡುತ್ತಿದ್ದಾರೆ. ಇವೆಲ್ಲ ನಿನಗೆ ನೆನಪಿದೆಯಾ ಎಂದು ಕೂಗಿ ಹೇಳಿದ್ದೆ. 

21 ಮೀಟರ್ ಎಸೆಯುವ ಗುರಿ ಹೊಂದಿದ್ದ ತಜೀಂದರ್‌ಪಾಲ್ ಅಂತಿಮ ಸುತ್ತಿನಲ್ಲಿ 20.75ಮೀಟರ್ ಎಸೆದು ಏಷ್ಯನ್ ಗೇಮ್ಸ್ ಕೂಟದಲ್ಲಿ ದಾಖಲೆ ಬರೆದರು. ಜೊತೆಗೆ ಚಿನ್ನದ ಪದಕಕ್ಕೆ ಮುತ್ತಿಕ್ಕಿದರು. ಗೆಲುವಿನ ಬಳಿಕ ತಜೀಂದರ್‌ಪಾಲ್ ತನ್ನೆಲ್ಲಾ ಶ್ರೇಯಸ್ಸನ್ನ ಕೋಚ್‌ಗೆ ಅರ್ಪಿಸಿದ್ದರು.