Asian Games 2023: ವಿಶ್ವದಾಖಲೆಯೊಂದಿಗೆ ದೇಶಕ್ಕೆ ಮೊದಲ ಚಿನ್ನದ ಕಿರೀಟ ತೊಡಿಸಿದ ಭಾರತದ ಶೂಟರ್‌ಗಳ ತಂಡ
ಭಾರತ ಪುರುಷರ 10 ಮೀಟರ್ ಏರ್ ರೈಫಲ್ ತಂಡದ ರುದ್ರಾಂಕ್ಷ ಪಾಟೀಲ್, ಒಲಿಂಪಿಯನ್ ದಿವ್ಯಾನ್ಶು ಪನ್ವಾರ್ ಹಾಗೂ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ತಂಡ ಅಮೋಘ ಪ್ರದರ್ಶನ ತೋರುವ ಮೂಲಕ ದೇಶದ ಪರ ಚಿನ್ನದ ಪದಕದ ಖಾತೆ ತೆರೆದರು.
ಹಾಂಗ್ಝೂ(ಸೆ.25): ಭಾರತದ ಪುರುಷರ 10 ಮೀಟರ್ ಏರ್ ರೈಫಲ್ ತಂಡವು ಸೋಮವಾರ ಮುಂಜಾನೆ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದೆ. ಈ ಮೂಲಕ ಭಾರತಕ್ಕೆ ಈ ಬಾರಿಯ ಏಷ್ಯನ್ ಗೇಮ್ಸ್‌ನಲ್ಲಿ ಮೊದಲ ಸ್ವರ್ಣದ ಗರಿ ಮೂಡಿಸಿದ್ದಾರೆ. ಇನ್ನು ಇಂಟ್ರೆಸ್ಟಿಂಗ್ ವಿಚಾರವೆಂದರೆ, ಭಾರತದ ಶೂಟರ್‌ಗಳ ತಂಡವು ವಿಶ್ವದಾಖಲೆಯೊಂದಿಗೆ ಈ ಐತಿಹಾಸಿಕ ದಾಖಲೆ ಬರೆದಿದ್ದಾರೆ.
ಭಾರತ ಪುರುಷರ 10 ಮೀಟರ್ ಏರ್ ರೈಫಲ್ ತಂಡದ ರುದ್ರಾಂಕ್ಷ ಪಾಟೀಲ್, ಒಲಿಂಪಿಯನ್ ದಿವ್ಯಾನ್ಶು ಪನ್ವಾರ್ ಹಾಗೂ ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ ಅವರನ್ನೊಳಗೊಂಡ ತಂಡ ಅಮೋಘ ಪ್ರದರ್ಶನ ತೋರುವ ಮೂಲಕ ದೇಶದ ಪರ ಚಿನ್ನದ ಪದಕದ ಖಾತೆ ತೆರೆದರು.
ಭಾರತದ ಶೂಟರ್‌ಗಳ ಈ ತ್ರಿವಳಿ ಜೋಡಿಯು ಅರ್ಹತಾ ಸುತ್ತಿನ ಸ್ಪರ್ಧೆಯಲ್ಲಿ 1893.7 ಅಂಕಗಳನ್ನು ಕಲೆಹಾಕುವ ಮೂಲಕ, ಕಳೆದ ತಿಂಗಳಷ್ಟೇ ಅಜರ್‌ಬೈಜಾನ್‌ನ ಬಾಕುವಿನಲ್ಲಿ ನಡೆದ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾ ತಂಡವು 1893.3 ನಿರ್ಮಿಸಿದ್ದ ದಾಖಲೆಯನ್ನು ಬ್ರೇಕ್ ಮಾಡಿ ಇದೀಗ ಹೊಸ ವಿಶ್ವದಾಖಲೆ ನಿರ್ಮಿಸಿದ್ದಾರೆ.
ರುದ್ರಾಂಕ್ಷ್ ಪಾಟೀಲ್, ಒತ್ತಡಗಳನ್ನು ಮೆಟ್ಟಿನಿಂತು 632.5 ಅಂಕಗಳನ್ನು ಕಲೆಹಾಕುವ ಮೂಲಕ ಶ್ರೇಷ್ಠ ಪ್ರದರ್ಶನವನ್ನು ತೋರಿದರು. ಐಶ್ವರ್ಯ್ ಪ್ರತಾಪ್ ಸಿಂಗ್ ತೋಮರ್ 631.6 ಅಂಕ ಹಾಗೂ ದಿವ್ಯಾನ್ಶು ಪನ್ವಾರ್ 629.6 ಅಂಕಗಳನ್ನು ಕಲೆಹಾಕುವ ಮೂಲಕ ವಿಶ್ವದಾಖಲೆ ನಿರ್ಮಿಸಲು ಮಹತ್ವದ ಕಾಣಿಕೆ ನೀಡಿದರು.
ಇನ್ನುಳಿದಂತೆ ಪುರುಷರ 10 ಮೀಟರ್ ಏರ್ ರೈಫಲ್ ಫೈನಲ್‌ನಲ್ಲಿ ಒಟ್ಟಾರೆ 1890.1 ಅಂಕಗಳನ್ನು ಗಳಿಸಿದ ದಕ್ಷಿಣ ಕೊರಿಯಾ ಚಿನ್ನದ ಪದಕಕ್ಕೆ ಮುತ್ತಿಕ್ಕಿತು. ಇನ್ನು ಆತಿಥೇಯ ಚೀನಾ ತಂಡವು 1888.2 ಅಂಕಗಳನ್ನು ಗಳಿಸುವ ಮೂಲಕ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡಿತು.