Asianet Suvarna News Asianet Suvarna News

Asian Games 2023: ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಶ್ರೀಕಾಂತ್‌ ಶುಭಾರಂಭ

ಭಾರತದ ಸಾತ್ವಿಕ್‌-ಚಿರಾಗ್‌ ಹಾಂಕಾಂಗ್‌ನ ಚೊವು ಹಿನ್‌ ಲಾಂಗ್‌-ಲುಯಿ ಚುನ್‌ ವಾಯ್‌ ವಿರುದ್ಧ 21-11, 21-16 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಮಾಜಿ ವಿಶ್ವ ನಂ.1 ಶ್ರೀಕಾಂತ್‌ ವಿಯೆಟ್ನಾಂನ ಫಾತ್‌ ಲೆ ಡ್ಯುಕ್‌ ವಿರುದ್ಧ 21-10, 21-10 ಅಂತರದಲ್ಲಿ ಸುಲಭ ಗೆಲುವು ಸಾಧಿಸಿ ಅಂತಿಮ 32ರ ಸುತ್ತಿಗೇರಿದರು.

Asian Games 2023 Kidambi Srikanth Satwiksairaj Rankireddy Chirag Shetty Enter Second Round kvn
Author
First Published Oct 3, 2023, 10:51 AM IST

ಹಾಂಗ್‌ಝೋ(ಅ.03): ಪುರುಷರ ಡಬಲ್ಸ್‌ ಬ್ಯಾಡ್ಮಿಂಟನ್‌ನಲ್ಲಿ ವಿಶ್ವ ನಂ.3 ಜೋಡಿ ಸಾತ್ವಿಕ್‌-ಚಿರಾಗ್‌ ಶೆಟ್ಟಿ, ಸಿಂಗಲ್ಸ್‌ನಲ್ಲಿ ಕಿದಂಬಿ ಶ್ರೀಕಾಂತ್‌ ಶುಭಾರಂಭ ಮಾಡಿದ್ದಾರೆ. ಸೋಮವಾರ ಮೊದಲ ಸುತ್ತಿನಲ್ಲಿ ಭಾರತದ ಸಾತ್ವಿಕ್‌-ಚಿರಾಗ್‌ ಹಾಂಕಾಂಗ್‌ನ ಚೊವು ಹಿನ್‌ ಲಾಂಗ್‌-ಲುಯಿ ಚುನ್‌ ವಾಯ್‌ ವಿರುದ್ಧ 21-11, 21-16 ಅಂತರದಲ್ಲಿ ಗೆದ್ದು ಪ್ರಿ ಕ್ವಾರ್ಟರ್‌ ಫೈನಲ್‌ ಪ್ರವೇಶಿಸಿತು. ಮಾಜಿ ವಿಶ್ವ ನಂ.1 ಶ್ರೀಕಾಂತ್‌ ವಿಯೆಟ್ನಾಂನ ಫಾತ್‌ ಲೆ ಡ್ಯುಕ್‌ ವಿರುದ್ಧ 21-10, 21-10 ಅಂತರದಲ್ಲಿ ಸುಲಭ ಗೆಲುವು ಸಾಧಿಸಿ ಅಂತಿಮ 32ರ ಸುತ್ತಿಗೇರಿದರು. ಮಿಶ್ರ ಡಬಲ್ಸ್‌ನಲ್ಲಿ ಕೃಷ್ಣ ಪ್ರಸಾದ್‌-ತನಿಶಾ ಕ್ರಾಸ್ಟೊ ಕೂಡಾ ಪ್ರಿ ಕ್ವಾರ್ಟರ್‌ಗೇರಿದರು.

ಟಿಟಿಯಲ್ಲಿ ಐತಿಹಾಸಿಕ ಕಂಚು

ಟೇಬಲ್‌ ಟೆನಿಸ್‌ನ ಮಹಿಳಾ ಡಬಲ್ಸ್‌ನಲ್ಲಿ ಭಾರತದ ಸುತೀರ್ಥ ಮುಖರ್ಜಿ-ಐಹಿಕಾ ಮುಖರ್ಜಿ ಐತಿಹಾಸಿಕ ಕಂಚಿನ ಪದಕ ತಮ್ಮದಾಗಿಸಿಕೊಂಡಿದ್ದಾರೆ. ಇದು ಏಷ್ಯಾಡ್‌ ಇತಿಹಾಸದಲ್ಲೇ ಮಹಿಳಾ ಡಬಲ್ಸ್‌ನಲ್ಲಿ ಭಾರತಕ್ಕೆ ಲಭಿಸಿದ ಮೊದಲ ಪದಕ. ಸೋಮವಾರ ನಡೆದ ಸೆಮಿಫೈನಲ್‌ನಲ್ಲಿ ಭಾರತದ ಜೋಡಿ ಉತ್ತರ ಕೊರಿಯಾ ವಿರುದ್ಧ 3-4 ಅಂತರದಲ್ಲಿ ವೀರೋಚಿತ ಸೋಲನುಭವಿಸಿತು. ಕೊನೆ ಗೇಮ್‌ನಲ್ಲಿ ಎಡವಿದ ಭಾರತೀಯ ಜೋಡಿ ಫೈನಲ್‌ಗೇರುವ ಅವಕಾಶ ಕಳೆದುಕೊಂಡಿತು. ಭಾರತದ ಜೋಡಿ ಕ್ವಾರ್ಟರ್‌ ಫೈನಲ್‌ನಲ್ಲಿ ಹಾಲಿ ವಿಶ್ವ ಚಾಂಪಿಯನ್‌, ವಿಶ್ವ ನಂ.2 ಚೀನಾದ ಜೋಡಿಯನ್ನು ಸೋಲಿಸಿತ್ತು.

Asian Games 2023: ಅಥ್ಲೆಟಿಕ್ಸ್‌ನಲ್ಲಿ ಮುಂದುವರೆದ ಭಾರತದ ಪದಕ ಬೇಟೆ

ಭಾರತ ಇದಕ್ಕೂ ಮೊದಲು ಏಷ್ಯಾಡ್‌ನ ಟೇಬಲ್‌ ಟೆನಿಸ್‌ನಲ್ಲಿ ಗೆದ್ದಿದ್ದು ಕೇವಲ 2 ಪದಕ. 2018ರಲ್ಲಿ ಪುರುಷರ ತಂಡ ಹಾಗೂ ಮಿಶ್ರ ತಂಡ ವಿಭಾಗದಲ್ಲಿ ಭಾರತೀಯರಿಗೆ ಕಂಚು ಲಭಿಸಿತ್ತು.

ಏಷ್ಯಾಡ್‌ ಕೌತುಕ: ಏಷ್ಯಾಡ್‌ನಲ್ಲಿ 8 ಚಿನ್ನ ಗೆದ್ದಿರುವ ಪಾಕಿಸ್ತಾನ ಪುರುಷರ ಹಾಕಿ ತಂಡ ಈ ಸಲ ಗುಂಪು ಹಂತದಲ್ಲೇ ಹೊರಬಿದ್ದಿದೆ. ಪಾಕ್‌ ತಂಡ ಸೆಮಿಫೈನಲ್‌ ಪ್ರವೇಶಿಸಲು ವಿಫಲವಾಗಿರುವುದು ಇದೇ ಮೊದಲು.

CWC 2023: ತುರ್ತು ಕಾರಣಕ್ಕೆ ತಂಡವನ್ನು ತೊರೆದು ಮುಂಬೈಗೆ ಪ್ರಯಾಣಿಸಿದ ವಿರಾಟ್‌ ಕೊಹ್ಲಿ!

ರಾಷ್ಟ್ರೀಯ ಟೆನಿಸ್‌: ರಾಜ್ಯದ ಶರ್ಮದಾ, ಮನೀಶ್‌ಗೆ ಜಯ

ನವದೆಹಲಿ: ಇಲ್ಲಿ ಆರಂಭಗೊಂಡ 28ನೇ ರಾಷ್ಟ್ರೀಯ ಟೆನಿಸ್‌ ಚಾಂಪಿಯನ್‌ಶಿಪ್‌ನಲ್ಲಿ ಕರ್ನಾಟಕದ ಶರ್ಮದಾ ಬಾಲು ಹಾಗೂ ಮನೀಶ್‌ ಶುಭಾರಂಭ ಮಾಡಿದ್ದಾರೆ. ಮಹಿಳಾ ಸಿಂಗಲ್ಸ್‌ನಲ್ಲಿ 5ನೇ ಶ್ರೇಯಾಂಕಿತೆ ಶರ್ಮದಾ ತೆಲಂಗಾಣದ ಪಾವಣಿ ಪಾಠಕ್‌ ವಿರುದ್ಧ 6-2, 4-6, 6-1 ಸೆಟ್‌ಗಳಲ್ಲಿ ಜಯಗಳಿಸಿದರು. ಪುರುಷರ ಸಿಂಗಲ್ಸ್‌ನಲ್ಲಿ ಮನೀಶ್‌, ತಮಿಳುನಾಡಿನ ಸಿದ್ಧಾರ್ಥ್‌ ಆರ್ಯ ವಿರುದ್ಧ 6-3, 6-4ರಲ್ಲಿ ಗೆದ್ದು 2ನೇ ಸುತ್ತಿಗೇರಿದರು. ಅಂಡರ್‌-18 ಬಾಲಕರ ವಿಭಾಗದಲ್ಲಿ ಕರ್ನಾಟಕದ ಚಂದನ್‌ ಶಿವರಾಜ್‌ ಶುಭಾರಂಭ ಮಾಡಿದರು.
 

Latest Videos
Follow Us:
Download App:
  • android
  • ios