Asian Games 2023: ಭಾರತೀಯ ಶೂಟರ್ಸ್ ಐತಿಹಾಸಿಕ ಸಾಧನೆ..!
ಶೂಟಿಂಗ್‌ನಲ್ಲಿ ಈ ಬಾರಿ ಭಾರತ 6 ಚಿನ್ನ, 7 ಬೆಳ್ಳಿ ಹಾಗೂ 5 ಕಂಚು ಸೇರಿ 18 ಪದಕ ಗೆದ್ದಿದೆ. ಇದು ಏಷ್ಯಾಡ್ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2006ರ ದೋಹಾ ಏಷ್ಯಾಡ್‌ನಲ್ಲಿ ಭಾರತ 14 ಪದಕ ಗೆದ್ದಿದ್ದು, ಭಾರತದ ಈವರೆಗಿನ ಕೂಟವೊಂದರ ಶ್ರೇಷ್ಠ ಪ್ರದರ್ಶನವಾಗಿತ್ತು.
ಹಾಂಗ್ಝೂ(ಸೆ.30): ಏಷ್ಯನ್ ಗೇಮ್ಸ್ ಶೂಟಿಂಗ್‌ನಲ್ಲಿ ಹಿಂದೆಂದಿಗಿಂತಲೂ ಅಭೂತಪೂರ್ವ ಪ್ರದರ್ಶನ ತೋರುತ್ತಿರುವ ಭಾರತೀಯರು ಪದಕ ಬೇಟೆಯಲ್ಲಿ ಪ್ರಾಬಲ್ಯ ಮುಂದುವರಿಸಿದ್ದಾರೆ. ಈ ಬಾರಿ ಭಾರತಕ್ಕೆ ಹೆಚ್ಚಿನ ಯಶಸ್ಸು ತಂದುಕೊಟ್ಟಿರುವ ಶೂಟರ್‌ಗಳು ಶುಕ್ರವಾರ ಮತ್ತೆ 2 ಚಿನ್ನ ಹಾಗೂ 3 ಬೆಳ್ಳಿ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಉಳಿದಂತೆ 6ನೇ ದಿನ ಟೆನಿಸ್, ಸ್ಕ್ಯಾಶ್, ಅಥ್ಲೆಟಿಕ್ಸ್‌ನ ಶಾಟ್ ಪುಟ್‌ನಲ್ಲೂ ಭಾರತ ಪದಕ ಬಾಚಿಕೊಂಡಿದ್ದು, ಪದಕ ಗಳಿಕೆಯನ್ನು 33ಕ್ಕೆ ಏರಿಸಿದೆ. ಇದರೊಂದಿಗೆ ಭಾರತ ಪದಕ ಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ್ದು, ಚೀನಾ, ಜಪಾನ್, ದ.ಕೊರಿಯಾ ಕ್ರಮವಾಗಿ ಅಗ್ರ-3 ಸ್ಥಾನಗಳನ್ನು ಪಡೆದಿವೆ.
17ರ ಪಾಲಕ್ ಗುಲಿಯಾಗೆ ಚಿನ್ನ!
ಶುಕ್ರವಾರ ಭಾರತ 2 ವಿಭಾಗಗಳಲ್ಲಿ ಚಿನ್ನದ ಪದಕ ತನ್ನದಾಗಿಸಿಕೊಂಡಿತು. ಮಹಿಳೆಯರ 10 ಮೀ. ಏರ್ ಪಿಸ್ತೂಲ್ ವೈಯಕ್ತಿಕ ವಿಭಾಗದಲ್ಲಿ 17 ವರ್ಷದ ಪಾಲಕ್ ಗುಲಿಯಾ 242.1 ಅಂಕಗಳೊಂದಿಗೆ ಬಂಗಾರದ ಪದಕಕ್ಕೆ ಮುತ್ತಿಟ್ಟರೆ, ಇದೇ ಸ್ಪರ್ಧೆಯಲ್ಲಿ 239.7 ಅಂಕಗಳನ್ನು ಗಳಿಸಿದ ಇಶಾ ಸಿಂಗ್ ಬೆಳ್ಳಿಗೆ ಕೊರಳೊಡ್ಡಿದರು.
Asian Games 2023: ಅಥ್ಲೆಟಿಕ್ಸ್‌ನಲ್ಲಿ ಕಳೆದ ಸಲದ ದಾಖಲೆ ಮುರಿಯುತ್ತಾ ಭಾರತ?
ಭಾರತೀಯರ ನಡುವೆ ಏರ್ಪಟ್ಟಿದ್ದ ಪೈಪೋಟಿ ಭಾರಿ ರೋಚಕತೆ ಸೃಷ್ಟಿಸಿತ್ತು. ಇನ್ನು, 50 ಮೀ. ಏರ್ ರೈಫಲ್ 3 ಪೊಸಿಷನ್ ಪುರುಷರ ತಂಡ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಲಭಿಸಿತು. ಐಶ್ವರಿ ಪ್ರತಾಪ್ ಸಿಂಗ್, ಸ್ವಪ್ನಿಲ್ ಕುಶಾಲೆ, ಅಖಿಲ್ ಅವರನ್ನೊಳಗೊಂಡ ತಂಡ 1769 ಅಂಕಗಳನ್ನು ಗಳಿಸಿ ಅಗ್ರಸ್ಥಾನ ಪಡೆದರೆ, ಚೀನಾದ ತಂಡ 1763 ಅಂಕಗಳೊಂದಿಗೆ ಬೆಳ್ಳಿ, ದ.ಕೊರಿಯಾ 1748 ಅಂಕಗಳೊಂದಿಗೆ ಕಂಚಿಗೆ ತೃಪ್ತಿಪಟ್ಟುಕೊಂಡಿತು.
ರಾಜ್ಯದ ದಿವ್ಯಾಗೆ ರಜತ
ಶುಕ್ರವಾರ ಶೂಟಿಂಗ್‌ನಲ್ಲಿ ಭಾರತಕ್ಕೆ ಮತ್ತೆರಡು ಬೆಳ್ಳಿ ಪದಕ ಕೂಡಾ ಒಲಿಯಿತು. ಮಹಿಳೆಯರ 10 ಮೀ. ಏರ್ ಪಿಸ್ತೂಲ್‌ನಲ್ಲಿ ಇಶಾ, ಪಾಲಕ್ ಹಾಗೂ ಕರ್ನಾಟಕದ ದಿವ್ಯಾ ಟಿ.ಎಸ್. ಅವರಿದ್ದ ತಂಡ ಬೆಳ್ಳಿ ಪದಕ ಜಯಿಸಿತು. ಚೀನಾಗೆ ಚಿನ್ನ, ಚೈನೀಸ್ ತೈಪೆಗೆ ಕಂಚು ಲಭಿಸಿತು. ಇನ್ನು, ಪುರುಷರ 50 ಮೀ. ರೈಫಲ್ 3 ಪೊಸಿಷನ್ ಸ್ಪರ್ಧೆಯಲ್ಲಿ ಐಶ್ವರಿ ಪ್ರತಾಪ್ ಬೆಳ್ಳಿ ತಮ್ಮದಾಗಿಸಿಕೊಂಡರು. ಸ್ವಪ್ನಿಲ್ 4ನೇ ಸ್ಥಾನಿಯಾಗಿ, ಅಲ್ಪದರಲ್ಲೇ ಪದಕ ವಂಚಿತರಾದರು.
ಕೊನೆಯ ಕ್ಷಣದಲ್ಲಿ ಗೇಮ್ ಚೇಂಜರ್ ಆಟಗಾರನನ್ನು ಕರೆ ತಂದ ಆಸೀಸ್, 6ನೇ ವಿಶ್ವಕಪ್ ಗೆಲ್ಲಲು ಕಾಂಗರೂ ಪಡೆ ರೆಡಿ..!
2014ರ ದಾಖಲೆ ಪತನ..!
ಶೂಟಿಂಗ್‌ನಲ್ಲಿ ಈ ಬಾರಿ ಭಾರತ 6 ಚಿನ್ನ, 7 ಬೆಳ್ಳಿ ಹಾಗೂ 5 ಕಂಚು ಸೇರಿ 18 ಪದಕ ಗೆದ್ದಿದೆ. ಇದು ಏಷ್ಯಾಡ್ ಇತಿಹಾಸದಲ್ಲೇ ಭಾರತದ ಶ್ರೇಷ್ಠ ಸಾಧನೆಯಾಗಿದೆ. 2006ರ ದೋಹಾ ಏಷ್ಯಾಡ್‌ನಲ್ಲಿ ಭಾರತ 14 ಪದಕ ಗೆದ್ದಿದ್ದು, ಭಾರತದ ಈವರೆಗಿನ ಕೂಟವೊಂದರ ಶ್ರೇಷ್ಠ ಪ್ರದರ್ಶನವಾಗಿತ್ತು.