Asian Games 2023: ಜೈ ಹೋ ನೀರಜ್, ಮತ್ತೆ ಚಿನ್ನ ಗೆದ್ದ ಜಾವಲಿನ್ ಹೀರೋ..! ಕಿಶೋರ್‌ಗೆ ಬೆಳ್ಳಿ ಕಿರೀಟ
ನೀರಜ್ ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.88 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಭಾರತದ ಮತ್ತೋರ್ವ ಜಾವೆಲಿನ್ ಪಟು ಕಿಶೋರ್ ಕುಮಾರ್ ಜೆನಾ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನದೊಂದಿಗೆ(87.54 ಮೀಟರ್) ಬೆಳ್ಳಿ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.
ಹಾಂಗ್ಝೂ(ಅ.04): ಒಲಿಂಪಿಕ್ ಚಾಂಪಿಯನ್ ನೀರಜ್ ಚೋಪ್ರಾ ನಿರೀಕ್ಷೆಯಂತೆಯೇ ಏಷ್ಯನ್ ಗೇಮ್ಸ್‌ನಲ್ಲಿ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಈ ಆವೃತ್ತಿಯಲ್ಲಿ ಶ್ರೇಷ್ಠ ಪ್ರದರ್ಶನ ತೋರಿದ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ, 88.88 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇನ್ನು ಭಾರತದ ಮತ್ತೋರ್ವ ಜಾವೆಲಿನ್ ಥ್ರೋ ಪಟು ಕಿಶೋರ್ ಕುಮಾರ್ ಜೆನಾ 87.54 ಮೀಟರ್ ದೂರ ಎಸೆಯುವ ಮೂಲಕ ಬೆಳ್ಳಿ ಪದಕ ಸ್ಮರಣೀಯವಾಗಿಸಿಕೊಂಡರು.
ಕಿಶೋರ್ ಕುಮಾರ್ ಜೆನಾ ತಮ್ಮ ಮೂರನೇ ಪ್ರಯತ್ನದಲ್ಲಿ 86.77 ಮೀಟರ್ ದೂರ ಜಾವೆಲಿನ್ ಎಸೆಯುವ ಮೂಲಕ ಒಂದು ಹಂತದಲ್ಲಿ ನೀರಜ್ ಚೋಪ್ರಾ ಅವರನ್ನೇ ಹಿಂದಿಕ್ಕಿದರು. ಆದರೆ ನೀರಜ್ ಚೋಪ್ರಾ ತಮ್ಮ ನಾಲ್ಕನೇ ಪ್ರಯತ್ನದಲ್ಲಿ 88.88 ಮೀಟರ್ ದೂರ ಎಸೆಯುವ ಮೂಲಕ ಚಿನ್ನದ ಪದಕ ಖಚಿತಪಡಿಸಿಕೊಳ್ಳುವಲ್ಲಿ ಯಶಸ್ವಿಯಾದರು. ಇನ್ನು ಭಾರತದ ಮತ್ತೋರ್ವ ಜಾವೆಲಿನ್ ಪಟು ಕಿಶೋರ್ ಕುಮಾರ್ ಜೆನಾ ವೃತ್ತಿಜೀವನದ ಶ್ರೇಷ್ಠ ಪ್ರದರ್ಶನದೊಂದಿಗೆ(87.54 ಮೀಟರ್) ಬೆಳ್ಳಿ ಪದಕಕ್ಕೆ ಕೊರಳೊಡ್ಡುವಲ್ಲಿ ಯಶಸ್ವಿಯಾದರು.
ರಿಲೇಯಲ್ಲಿ ಚಿನ್ನ ಗೆದ್ದ ಪುರುಷರ, ಬೆಳ್ಳಿ ಮುಡಿಗೇರಿಸಿಕೊಂಡ ಮಹಿಳೆಯರ ತಂಡ:
ಮೊಹಮ್ಮದ್ ಅನಾಸ್ ಯಾಹಿಯಾ, ಅಮೋಜ್ ಜೋಕೊಬ್, ಮೊಹಮ್ಮದ್ ಅಜ್ಮಲ್ ವೆರಿಯಾತೋಡಿ ಹಾಗೂ ರಾಜೇಶ್ ರಮೇಶ್ ಅವರನ್ನೊಳಗೊಂಡ ಭಾರತದ ಪುರುಷರ ರಿಲೇ ತಂಡವು ಐತಿಹಾಸಿಕ ಚಿನ್ನದ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಗಿದೆ. 1962ರ ಬಳಿಕ ಭಾರತ ಪುರುಷರ ರಿಲೇ ತಂಡವು ಚಿನ್ನದ ಪದಕ ಜಯಿಸುವಲ್ಲಿ ಯಶಸ್ವಿಯಾಯಿತು.
Asian Games 2023 ಇಂದು ನೀರಜ್ ಸ್ಪರ್ಧೆ: ಬಂಗಾರವೇ ಟಾರ್ಗೆಟ್
ಇನ್ನೊಂದೆಡೆ ವಿಥ್ಯಾ ರಾಮ್‌ರಾಜ್, ಐಶ್ವರ್ಯ ಕೈಲಾಶ್ ಮಿಶ್ರಾ, ಪ್ರಾಚಿ ಹಾಗೂ ಶುಭಾ ವೆಂಕಟೇಶನ್ ಅವರನ್ನೊಳಗೊಂಡ ಭಾರತ ಮಹಿಳಾ ರಿಲೇ ತಂಡವು ಕೂದಲೆಳೆ ಅಂತರದಲ್ಲಿ ಚಿನ್ನ ಗೆಲ್ಲುವ ಅವಕಾಶವನ್ನು ಕೈಚೆಲ್ಲಿ ಬೆಳ್ಳಿ ಪದಕ ಮುಡಿಗೇರಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.
ಇನ್ನು ಮಹಿಳೆಯರ 800 ಮೀಟರ್ ಓಟದ ಸ್ಪರ್ಧೆಯಲ್ಲಿ ಹರ್ಮಿಲನ್ ಬೈನ್ಸ್ ಬೆಳ್ಳಿ ಪದಕ ಜಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪುರುಷರ 5000 ಮೀಟರ್ ಓಟದ ಸ್ಪರ್ಧೆಯಲ್ಲಿ ಅವಿನಾಶ್ ಸಾಬ್ಲೆ 13:29.09 ನಿಮಿಷಗಳಲ್ಲಿ ಗುರಿ ತಲುಪುವ ಮೂಲಕ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದರು.