ಜಕರ್ತಾ(ಆ.29): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಅರ್ಪಿಂದರ್ ಸಿಂಗ್ ಚಿನ್ನ ಗೆದ್ದ ಬೆನ್ನಲ್ಲೇ, ಮಹಿಳಾ ವಿಭಾಗದ ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ ಭಾರತದ ಸ್ವಪ್ನ ಬರ್ಮನ್ ಚಿನ್ನದ ಪದಕ ಗೆದ್ದ ಸಾಧನೆ ಮಾಡಿದ್ದಾರೆ.

 

 

ಹೆಪ್ಟಥ್ಲಾನ್ ಸ್ಪರ್ಧೆಯಲ್ಲಿ 6022 ಅಂಕ ಪಡೆಯೋ ಮೂಲಕ ಸ್ಪಪ್ನ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ. ಈ ಮೂಲಕ ಭಾರತ 11 ಚಿನ್ನದ ಪದಕ ಗೆದ್ದುಕೊಂಡಿದೆ. ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದ್ದ ಭಾರತ ಇದೀಗ 8ನೇ ಸ್ಥಾನಕ್ಕೆ ಜಿಗಿದಿದೆ.

ಭಾರತ 11 ಚಿನ್ನ, 20 ಬೆಳ್ಳಿ ಹಾಗೂ 23 ಕಂಚಿನೊಂದಿಗೆ ಭಾರತ ಒಟ್ಟು 54 ಪದಕ ಗೆದ್ದುಕೊಂಡಿದೆ.  ಮೊದಲ ಸ್ಥಾನದಲ್ಲಿರುವ ಚೀನಾ 102 ಚಿನ್ನ, 66 ಬೆಳ್ಳಿ ಹಾಗೂ 50 ಕಂಚಿನೊಂದಿಗೆ ಒಟ್ಟು 218 ಪದಕ ಗೆದ್ದುಕೊಂಡಿದೆ.