ಜಕರ್ತಾ(ಆ.24): ಸತತ 3ನೇ ಬಾರಿಗೆ ಚಿನ್ನಕ್ಕೆ ಮತ್ತಿಕ್ಕೋ ಭಾರತ ಮಹಿಳಾ ತಂಡದ ಕನಸು ಭಗ್ನಗೊಂಡಿದೆ. ಇರಾನ್ ವಿರುದ್ದದ ಫೈನಲ್ ಪಂದ್ಯದಲ್ಲಿ ಭಾರತ ಮಹಿಳಾ ತಂಡ ಸೋಲು ಅನುಭವಿಸಿದೆ. ಈ ಮೂಲಕ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಂಡಿದೆ.

ಚಿನ್ನಕ್ಕಾಗಿ ನಡೆದ ಹೋರಾಟದಲ್ಲಿ ಭಾರತ ಹಾಗೂ ಇರಾನ್ ಪ್ರಬಲ ಪೈಪೋಟಿ ನಡೆಸಿತು. ಆದರೆ ಅಂತಿಮ ಕ್ಷಣದಲ್ಲಿ ಪ್ರಾಬಲ್ಯ ಸಾಧಿಸಿದ ಇರಾನ್ 27-24 ಅಂಕಗಳ ಅಂತರದಲ್ಲಿ ಪಂದ್ಯ ಗೆದ್ದುಕೊಂಡಿತು. 

ಏಷ್ಯನ್ ಗೇಮ್ಸ್ ಕ್ರೀಡಾಕೂಟದ ಕಬಡ್ಡಿಯಲ್ಲಿ ಭಾರತದ ಪುರುಷರ ತಂಡ ಹಾಗೂ ಮಹಿಳೆಯರ ತಂಡ ಪ್ರಾಬಲ್ಯ ಸಾಧಿಸಿತ್ತು. ಆದರೆ ಇದೇ ಮೊದಲ ಬಾರಿಗೆ ಪುರುಷ ಹಾಗೂ ಮಹಿಳಾ ತಂಡಗಳು ಚಿನ್ನದ ಪದಕ ಗೆಲ್ಲದೇ ನಿರಾಸೆ ಅನುಭವಿಸಿದೆ.