ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೆರೆಡು ಪದಕ ಗೆದ್ದುಕೊಂಡಿದೆ.  8ನೇ ದಿನದ ಕ್ರೀಡಾಕೂಟದಲ್ಲಿ ಭಾರತೀಯರ ಪ್ರದರ್ಶನ ಹೇಗಿತ್ತು? ಯಾವ ಕ್ರೀಡೆಗಳಲ್ಲಿ ಭಾರತ ಪದಕ ಗೆದ್ದುಕೊಂಡಿದೆ? ಇಲ್ಲಿದೆ. 

ಜಕರ್ತಾ(ಆ.26): ಏಷ್ಯನ್ ಗೇಮ್ಸ್ ಕ್ರೀಡಾಕೂಟದ 8ನೇ ದಿನ ಭಾರತದ ಪದಕ ಭೇಟೆ ಮುಂದುವರಿದೆ. ಓಟದಲ್ಲಿ ಭಾರತದ ಹಿಮಾ ದಾಸ್ ಹಾಗೂ ಮೊಹಮ್ಮದ್ ಅನಾಸ್ ಬೆಳ್ಳಿ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತದ ಪದಕಗಳ ಸಂಖ್ಯೆ 35ಕ್ಕೇರಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಮಹಿಳೆಯರ 400 ಮೀಟರ್ ಓಟದಲ್ಲಿ ಹಿಮಾ ದಾಸ್ 50.79 ಸೆಕೆಂಡುಗಳಲ್ಲಿ ಗುರಿ ತಲುಪೋ ಮೂಲಕ ಬೆಳ್ಳಿ ಪದಕ ಗೆದ್ದಿದ್ದಾರೆ. ಇನ್ನು ಪುರುಷರ 400 ಮೀಟರ್ ಓಟದಲ್ಲಿ ಮೊಹಮ್ಮದ್ ಅನಾಸ್ 45.60 ಸೆಕೆಂಡುಗಳಲ್ಲಿ ಗುರಿ ತಲುಪೋ ಮೂಲಕ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ.

ಬ್ಯಾಡ್ಮಿಂಟನ್ ಸಿಂಗಲ್ಸ್ ವಿಭಾಗದಲ್ಲಿ ಭಾರತದ ಸೈನಾ ನೆಹ್ವಾಲ್ ಹಾಗೂ ಪಿವಿ ಸಿಂಧೂ ಅತ್ಯುತ್ತಮ ಪ್ರದರ್ಶನದ ಮೂಲಕ ಸೆಮಿಫೈನಲ್ ಪ್ರವೇಶಿಸಿದ್ದಾರೆ. ಈ ಮೂಲಕ ಪದಕ ಖಚಿತಪಡಿಸಿಕೊಂಡಿದ್ದಾರೆ. 

8ನೇ ದಿನದಲ್ಲಿ ಭಾರತ 7 ಚಿನ್ನ, 9 ಬೆಳ್ಳಿ, 19 ಕಂಚಿನೊಂದಿಗೆ ಒಟ್ಟು 35 ಪದಕ ಗೆದ್ದು 9ನೇ ಸ್ಥಾನದಲ್ಲಿದೆ. ಮೊದಲ ಸ್ಥಾನದಲ್ಲಿರುವ ಚೀನಾ 74 ಚಿನ್ನ, 54 ಬೆಳ್ಳಿ ಹಾಗೂ 34 ಕಂಚಿನೊಂದಿಗೆ ಒಟ್ಟು 166 ಪದಕ ಗೆದ್ದಿದೆ.