Asianet Suvarna News Asianet Suvarna News

48 ವರ್ಷಗಳ ಬಳಿಕ ಟ್ರಿಪಲ್ ಜಂಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕ

ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಪದಕ ಹೋರಾಟ ಮುಂದುವರಿಸಿದೆ. ಅಥ್ಲೆಟಿಕ್ಸ್ ವಿಭಾಗದಲ್ಲಿ ಮತ್ತೆ ಪದಕ ಸಂಪಾದಿಸಿದೆ. 11ನೇ ಭಾರತದ ಪ್ರದರ್ಶನ ಹೇಗಿದೆ? ಗೆದ್ದ ಪದಕಗಳ ಸಂಖ್ಯೆ ಎಷ್ಟು?ಇಲ್ಲಿದೆ.

Asian games 2018 arpinder sing bags gold in triple jump
Author
Bengaluru, First Published Aug 29, 2018, 7:05 PM IST

ಜಕರ್ತಾ(ಆ.29): ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕ ಗೆದ್ದಿದೆ. ಪುರುಷರ ಟ್ರಿಪಲ್ ಜಂಪ್ ವಿಭಾಗದಲ್ಲಿ ಭಾರತದ ಅರ್ಪಿಂದರ್ ಸಿಂಗ್ ಚಿನ್ನದ ಪದಕ ಗೆದ್ದಿದ್ದಾರೆ. ಈ ಮೂಲಕ ಭಾರತ 10ನೇ ಚಿನ್ನದ ಪದಕ ಬಾಚಿಕೊಂಡಿತು.

16.77 ಮೀಟರ್ ದೂರಕ್ಕೆ ಜಿಗಿಯೋ ಮೂಲಕ ಅರ್ಪಿಂದರ್ ಚಿನ್ನದ ಪದಕಕ್ಕೆ ಮುತ್ತಿಕ್ತಿದ್ದರು. ಈ ಮೂಲಕ ಭಾರತ ತ್ರಿಪಲ್ ಜಂಪ್ ವಿಭಾಗದಲ್ಲಿ ಬರೋಬ್ಬರಿ 48 ವರ್ಷಗಳ ಬಳಿಕ ಪದಕ ಗೆದ್ದುಕೊಂಡಿದೆ.

 

 

ಇದೀಗ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನ ಅಲಂಕರಿಸಿದೆ. 10 ಚಿನ್ನ, 20 ಬೆಳ್ಳಿ ಹಾಗೂ 23 ಕಂಚಿನೊಂದಿಗೆ ಭಾರತ ಒಟ್ಟು 53 ಪದಕ ಗೆದ್ದುಕೊಂಡಿದೆ.  ಮೊದಲ ಸ್ಥಾನದಲ್ಲಿರುವ ಚೀನಾ 101 ಚಿನ್ನ, 65 ಬೆಳ್ಳಿ ಹಾಗೂ 50 ಕಂಚಿನೊಂದಿಗೆ ಒಟ್ಟು 216 ಪದಕ ಗೆದ್ದುಕೊಂಡಿದೆ.

Follow Us:
Download App:
  • android
  • ios