ಜಕರ್ತಾ(ಆ.23): ಮಹಿಳಾ ಸಿಂಗಲ್ಸ್ ಟೆನಿಸಿ ವಿಭಾಗದಲ್ಲಿ ಭಾರತ ಪದಕ ಬೇಟೆಯಾಡಿದೆ. ಚೀನಾದ ಶುಯಿ ಝಾಂಗ್ ವಿರುದ್ಧದ ಸೆಮಿಫೈನಲ್ ಪಂದ್ಯಜಲ್ಲಿ ಭಾರತದ ಅಂಕಿತ ರೈನಾ 4-6, 6-7 ನೇರ ಸೆಟ್‌ಗಳಿಂದ ಸೋಲು ಅನುಭವಿಸಿದರು. ಹೀಗಾಗಿ ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮೊದಲ ಸೆಟ್‌ನಲ್ಲಿ 3-1 ಮುನ್ನಡೆ ಸಾಧಿಸಿದ್ದ ಅಂಕಿತ ಬಳಿಕ ಭುಜದ ನೋವಿನಿಂದ ಬಳಲಿದರು. ಹೀಗಾಗಿ ಮೊದಲ ಸೆಟ್ ಜೊತೆಗೆ 2ನೇ ಸೆಟ್‌ನಲ್ಲೂ ಸೋಲು ಅನುಭವಿಸಿದರು. 

 

 

ಅಂಕಿತ ರೈನಾ ಕಂಚಿನ ಪದಕ ಗೆಲ್ಲೋ ಮೂಲಕ ಭಾರತ ಪದಕ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ. 4 ಚಿನ್ನ, 4 ಬೆಳ್ಳಿ ಹಾಗೂ 9 ಕಂಚಿನೊಂದಿಗೆ ಒಟ್ಟು 17 ಪದಕ ಸಂಪಾದಿಸಿದೆ. ಮೊದಲ ಸ್ಥಾನದಲ್ಲಿರುವ ಚೀನಾ, 51 ಚಿನ್ನ, 34 ಬೆಳ್ಳಿ ಹಾಗೂ 17 ಕಂಚಿನೊಂದಿಗೆ ಓಟ್ಟು 102 ಪದಕ ಗೆದ್ದುಕೊಂಡಿದೆ.