ನವದೆಹಲಿ(ಡಿ.13): ಜ.5 ರಿಂದ ಫೆ. 1 ರವರೆಗೆ ಯುಎಇಯಲ್ಲಿ ನಡೆಯಲಿರುವ ಎಎಫ್‌ಸಿ ಏಷ್ಯನ್‌ ಕಪ್‌ ಫುಟ್ಬಾಲ್‌ ಪಂದ್ಯಾವಳಿಗೆ 34 ಆಟಗಾರರ ಭಾರತ ಸಂಭವನೀಯ ತಂಡ ಪ್ರಕಟಗೊಂಡಿದೆ. ಇದರಲ್ಲಿ 18 ಅಂಡರ್‌-23 ಆಟಗಾರರು ಸಹ ಇದ್ದಾರೆ. 

 

 

ಡಿ.16ರಿಂದ ನವದೆಹಲಿಯಲ್ಲಿ ಮೊದಲ ಹಂತದ ಅಭ್ಯಾಸ ಶಿಬಿರ ನಡೆಯಲಿದ್ದು, ಆ ಬಳಿಕ ಡಿ.20ರಿಂದ ಅಬು ಧಾಬಿಯಲ್ಲಿ 2ನೇ ಹಂತದ ಶಿಬಿರ ನಡೆಯಲಿದೆ. ಅದರಲ್ಲಿ 28 ಆಟಗಾರರು ಪಾಲ್ಗೊಳ್ಳಲಿದ್ದಾರೆ. 23 ಸದಸ್ಯರ ಅಂತಿಮ ತಂಡವನ್ನು ಪ್ರಕಟಿಸಲು ಡಿ.26 ಕೊನೆ ದಿನವಾಗಿದೆ. ಜ.6ರಂದು ಥಾಯ್ಲೆಂಡ್‌ ವಿರುದ್ಧ ಭಾರತ ತನ್ನ ಮೊದಲ ಪಂದ್ಯವನ್ನು ಆಡಲಿದೆ.