ದೋಹಾ(ಏ.25): ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಭಾರತ ಒಟ್ಟು 18 ಪದಕ ಗೆದ್ದಿದೆ. ಕೂಟದ ಕೊನೆಯ ದಿನವಾದ ಬುಧವಾರ ಮಹಿಳೆಯರ 1500 ಮಿ. ಓಟದಲ್ಲಿ ಪಿ.ಯು.ಚಿತ್ರಾ 4:14:56 ಸೆಂಕೆಂಡ್‌ಗಳಲ್ಲಿ ಗುರಿ ತಲುಪಿ ಚಿನ್ನಕ್ಕೆ ಮುತ್ತಿಟ್ಟರು. 2017ರಲ್ಲಿ ಏಷ್ಯನ್ ಕೂಟದಲ್ಲಿ ಚಿನ್ನ ಗೆದ್ದಿದ್ದ ಚಿತ್ರಾ, 2018ರಲ್ಲ ಎೆಷ್ಯನ್ ಗೇಮ್ಸ್‌ನಲ್ಲಿ ಕಂಚು ಗೆದಿದ್ದರು. 

 

 

ಮಹಿಳೆಯರ 200 ಮಿ. ಓಟದಲ್ಲಿ ದ್ಯುತಿ ಚಾಂದ್ 23:24 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಕಂಚಿನ ಪಂದದಕಕ್ಕೆ ತೃಪ್ತಿಪಟ್ಟರು. ಪುರುಷರ 1500 ಮೀ. ಫೈನಲ್‌ನಲ್ಲಿ ಭಾರತ ಅಜಯ್ 3:43:18 ಸೆಕೆಂಡುಗಳಲ್ಲಿ ಗುರಿ ತಲುಪಿ ಬೆಳ್ಳಿ ಪದಕ ಗೆದ್ದಿದ್ದಾರೆ. ಮಹಿಳೆಯರ 4X400 ಮೀ.ರೆಲೆಯಲ್ಲಿ ಕರ್ನಾಟಕದದ ಪೂವಮ್ಮ ಅವರನ್ನನಳಗೊಂಡ ಭಾರತ ತಂಡ ಬೆಳ್ಳಿ ಪದಕ ಗೆದ್ದುಕೊಂಡಿದೆ. ಪದಕ ಪಟ್ಟಿಯಲ್ಲಿ ಭಾರತ 4ನೇ ಸ್ಥಾನ ಅಲಂಕರಿಸಿದೆ.