ಏಷ್ಯಾಕಪ್ ಆರಂಭಕ್ಕೂ ಮುನ್ನ ಲಂಕಾಗೆ ಬಿಗ್ ಶಾಕ್..!

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 5, Sep 2018, 4:21 PM IST
Asia Cup Dinesh Chandimal breaks finger
Highlights

ದಿನೇಶ್ ಚಾಂಡಿಮಲ್ ಒಟ್ಟು 139 ಏಕದಿನ ಪಂದ್ಯಗಳನ್ನಾಡಿ 32.39ರ ಸರಾಸರಿಯಲ್ಲಿ 3433 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕಗಳನ್ನು ಸಿಡಿಸಿದ್ದಾರೆ.

ಕೊಲಂಬೊ[ಸೆ.05]: ಇತ್ತೀಚೆಗಷ್ಟೇ ಮುಕ್ತಾಯವಾದ ಶ್ರೀಲಂಕಾ ಕ್ರಿಕೆಟ್ ಟಿ20(SLC T20) ಲೀಗ್ ಟೂರ್ನಿಯಲ್ಲಿ ಕೈಬೆರಳು ಮುರಿದುಕೊಂಡಿರುವ ಲಂಕಾ ಟೆಸ್ಟ್ ತಂಡದ ನಾಯಕ ದಿನೇಶ್ ಚಾಂಡಿಮಲ್ ಏಷ್ಯಾಕಪ್ ಟೂರ್ನಿಯಲ್ಲಿ ಭಾಗವಹಿಸುವುದು ಬಹುತೇಕ ಅನುಮಾನ ಎನ್ನಲಾಗುತ್ತಿದೆ. 

ಇದನ್ನು ಓದಿ:  ಏಷ್ಯಾಕಪ್’ಗೆ ಟೀಂ ಇಂಡಿಯಾ ಪ್ರಕಟ: ಕೊಹ್ಲಿಗೆ ರೆಸ್ಟ್, ಕನ್ನಡಿಗನಿಗೆ ಸ್ಥಾನ

ಇದೇ ತಿಂಗಳ 15ರಿಂದ ಯುಎಇನಲ್ಲಿ ಆರಂಭವಾಗಲಿರುವ ಏಷ್ಯಾಕಪ್ ಟೂರ್ನಿಯಲ್ಲಿ ಚಾಂಡಿಮಲ್ ಭಾಗವಹಿಸುತ್ತಾರೋ, ಇಲ್ಲವೋ ಎನ್ನುವುದು ಇನ್ನೊಂದು ವಾರದಲ್ಲಿ ಖಚಿತವಾಗಲಿದೆ.
ದಿನೇಶ್ ಚಾಂಡಿಮಲ್ ಒಟ್ಟು 139 ಏಕದಿನ ಪಂದ್ಯಗಳನ್ನಾಡಿ 32.39ರ ಸರಾಸರಿಯಲ್ಲಿ 3433 ರನ್ ಸಿಡಿಸಿದ್ದಾರೆ. ಇದರಲ್ಲಿ 4 ಶತಕಗಳನ್ನು ಸಿಡಿಸಿದ್ದಾರೆ.

ಇದನ್ನು ಓದಿ:  ಸೆ.19ಕ್ಕೆ ಭಾರತ-ಪಾಕಿಸ್ತಾನ ಕ್ರಿಕೆಟ್ ಹೋರಾಟ!

ಇನ್ನು ಲಂಕಾದ ಸ್ಟಾರ್ ಆಫ್’ಸ್ಪಿನ್ನರ್ ಅಕಿಲಾ ಧನಂಜಯ ಕೂಡಾ ಏಷ್ಯಾಕಪ್ ಟೂರ್ನಿಯ ಆರಂಭದಲ್ಲಿ ಪಾಲ್ಗೊಳ್ಳುತ್ತಿಲ್ಲ. ತಮ್ಮ ಮೊದಲ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಧನಂಜಯ ಟೂರ್ನಿಯ ಮಧ್ಯ ಭಾಗದಲ್ಲಿ ತಂಡವನ್ನು ಕೂಡಿಕೊಳ್ಳಲಿದ್ದಾರೆ.  

 

loader