ದುಬೈ(ಸೆ.22): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದಲ್ಲಿ ಬಾಂಗ್ಲಾದೇಶ ವಿರುದ್ಧ ಗೆಲುವು ಸಾಧಿಸಿದ ಟೀಂ ಇಂಡಿಯಾ ಇದೀಗ ಸಂಡೇ ವಾರ್‌ಗೆ ಸಜ್ಜಾಗಿದೆ. ನಾಳೆ(ಸೆ.23) ನಡೆಯಲಿರುವ ಪಾಕಿಸ್ತಾನ ವಿರುದ್ದದ ಮಹತ್ವದ ಪಂದ್ಯಕ್ಕೆ ಟೀಂ ಇಂಡಿಯಾ ಅಂತಿಮ ಕಸರತ್ತು ನಡೆಸುತ್ತಿದೆ.

ಲೀಗ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ಸಾಧಿಸಿದ್ದ ಭಾರತ, ಇದೀಗ ಅದೇ ಪ್ರದರ್ಶನ ಮುಂದುವರಿಸೋ ವಿಶ್ವಾಸದಲ್ಲಿದೆ. ಆದರೆ ಸೋಲಿಗೆ ತಿರುಗೇಟು ನೀಡಲು ಪಾಕಿಸ್ತಾನ ಕೂಡ ತಯಾರಿ ನಡೆಸಿದೆ.

ಹಾಲಿ ಚಾಂಪಿಯನ್ ಭಾರತ, ಪಾಕ್ ವಿರುದ್ಧ ಗೆಲುವು ಸಾಧಿಸಿ ನೇರವಾಗಿ ಫೈನಲ್ ಪ್ರವೇಶವನ್ನ ಖಚಿತಪಡಿಸಿಕೊಳ್ಳೋ ಲೆಕ್ಕಾಚಾರದಲ್ಲಿದೆ. ಇದೀಗ  ಪಾಕಿಸ್ತಾನ ವಿರುದ್ಧದ ಸೂಪರ್ 4 ಪಂದ್ಯಕ್ಕೆ ಟೀಂ ಇಂಡಿಯಾ ಸಂಭಾವ್ಯ ತಂಡ ಇಲ್ಲಿದೆ. 

ಭಾರತದ ಸಂಭಾವ್ಯ ತಂಡ:
ರೋಹಿತ್ ಶರ್ಮಾ(ನಾಯಕ),ಶಿಖರ್ ಧವನ್, ಅಂಬಾಟಿ ರಾಯುಡು, ಎಂ.ಎಸ್ ಧೋನಿ, ದಿನೇಶ್ ಕಾರ್ತಿಕ್, ಕೇದಾರ್ ಜಾಧವ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಕುಲ್ದೀಪ್ ಯಾದವ್, ಯುಜುವೇಂದ್ರ ಚಹಾಲ್, ಜಸ್‌ಪ್ರೀತ್ ಬುಮ್ರಾ