ಪಾಕಿಸ್ತಾನ ಹಾಗೂ ಬಾಂಗ್ಲಾದೇಶ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಅಂತಿಮ ಪಂದ್ಯ ಭಾರಿ ಕುತೂಹಲ ಕೆರಳಿಸಿದೆ. ಬಾಂಗ್ಲಾದೇಶ ತಂಡದ ಬ್ಯಾಟಿಂಗ್ ಹಾಗೂ ಪಾಕ್ ಬೌಲಿಂಗ್ ಅಪ್‌ಡೇಟ್ ಇಲ್ಲಿದೆ.
ಅಬು ದಾಬಿ(ಸೆ.26): ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಅಂತಿಮ ಪಂದ್ಯದಲ್ಲಿ ಪಾಕಿಸ್ತಾನ ವಿರುದ್ಧ ಬಾಂಗ್ಲಾದೇಶ 239 ರನ್‌ಗೆ ಆಲೌಟ್ ಆಗಿದೆ. ಈ ಮೂಲಕ ಪಾಕ್ ಗೆಲುವಿಗೆ 240 ರನ್ ಟಾರ್ಗೆಟ್ ನೀಡಿದೆ.
ಏಷ್ಯಾಕಪ್ ಫೈನಲ್ ಪ್ರವೇಶಕ್ಕೆ ಗೆಲ್ಲಲೇಬೇಕಾದ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ ಆರಂಭದಲ್ಲೇ 3 ವಿಕೆಟ್ ಕಳೆದುಕೊಂಡಿತು. ಆದರೆ ಮುಶ್ಫಿಕರ್ ರಹೀಮ್ ಮತ್ತೆ ತಂಡಕ್ಕೆ ಆಸರೆಯಾದರು.
ಮೊಹಮ್ಮದ್ ಮಿಥುನ್ ಜೊತೆಗೂಡಿ ಇನ್ನಿಂಗ್ಸ್ ಕಟ್ಟಿದ ಮುಶ್ಫಿಕರ್ ಬಾಂಗ್ಲಾಗೆ ಚೇತರಿಕೆ ನೀಡಿದರು. ಮಿಥುನ್ 60 ರನ್ ಕಾಣಿಕೆ ನೀಡಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ಮುಶ್ಫಿಕರ್ 99 ರನ್ ಸಿಡಿಸಿ ಔಟಾದರು. ಈ ಮೂಲಕ ಕೇವಲ 1 ರನ್‌ಗಳಿಂದ ಶತಕ ವಂಚಿತರಾದರು.
48.5 ಓವರ್‌ಗಳಲ್ಲಿ ಬಾಂಗ್ಲಾದೇಶ 239 ರನ್‌ಗೆ ಆಲೌಟ್ ಆಯಿತು. ಪಾಕಿಸ್ತಾನ ಪರ ಜುನೈದ್ ಖಾನ್ 4, ಶಹೀನ್ ಅಫ್ರೀದಿ ಹಾಗೂ ಹಸನ್ ಆಲಿ ತಲಾ 2 ವಿಕೆಟ್ ಪಡೆದು ಮಿಂಚಿದರು.
