ಏಷ್ಯಾಕಪ್’ನಲ್ಲಿ ಮಿಂಚಿದ ಟಾಪ್ 5 ಬೌಲರ್’ಗಳಿವರು
ಈ ಬಾರಿಯ ಏಷ್ಯಾಕಪ್’ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಮಬಲ ಮೂಡಿ ಬರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್’ನಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ಮೊಹಮ್ಮದ್ ಶೆಹಜಾದ್, ಮುಷ್ಫಿಕರ್ ರಹೀಮ್, ಶೋಯೆಬ್ ಮಲ್ಲಿಕ್ ಮುಂತಾದವರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಮಿಂಚಿದರು. ಅದೇ ರೀತಿ ಬೌಲರ್’ಗಳು ಏಷ್ಯಾಕಪ್’ನಲ್ಲಿ ತಮ್ಮ ಅದ್ಭುತ ಕೌಶಲ್ಯ ಮೆರೆದರು. ಈ ಬಾರಿಯ ಏಷ್ಯಾಕಪ್’ನಲ್ಲಿ ಮಿಂಚಿದ ಟಾಪ್ ಬೌಲರ್’ಗಳು ನಿಮ್ಮ ಮುಂದೆ..
ಬೆಂಗಳೂರು[ಅ.01]: ಬಹುನಿರೀಕ್ಷಿತ 14ನೇ ಆವೃತ್ತಿಯ ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಚಾಂಪಿಯನ್ ಆಗುವುದರೊಂದಿಗೆ ಮುಕ್ತಾಯವಾಗಿದೆ. ಈ ಟೂರ್ನಿಯಲ್ಲಿ ಆಫ್ಘಾನ್ ತಂಡದ ಅದ್ಭುತ ಪ್ರದರ್ಶನ, 5 ಬಾರಿಯ ಚಾಂಪಿಯನ್ ಶ್ರೀಲಂಕಾ ಗುಂಪುಹಂತದಲ್ಲೇ ಹೊರಬಿದ್ದು ಆಘಾತ ಎದುರಿಸಿದ್ದು, ಫೈನಲ್’ನಲ್ಲಿ ಕೊನೆಯ ಎಸೆತದವರೆಗೆ ಬಾಂಗ್ಲಾದೇಶ ಹೋರಾಡಿದ್ದು, ಹೀಗೆ ಹತ್ತು-ಹಲವು ಕ್ಷಣಗಳು ನೆನಪಿನಲ್ಲಿ ಉಳಿಯುವಂತಹದ್ದು.
ಈ ಬಾರಿಯ ಏಷ್ಯಾಕಪ್’ನಲ್ಲಿ ಬ್ಯಾಟಿಂಗ್ ಹಾಗೂ ಬೌಲಿಂಗ್’ನಲ್ಲಿ ಸಮಬಲ ಮೂಡಿ ಬರುವ ಮೂಲಕ ಕ್ರಿಕೆಟ್ ಅಭಿಮಾನಿಗಳ ಗಮನ ಸೆಳೆಯುವಲ್ಲಿ ಯಶಸ್ವಿಯಾಯಿತು. ಬ್ಯಾಟಿಂಗ್’ನಲ್ಲಿ ಶಿಖರ್ ಧವನ್, ರೋಹಿತ್ ಶರ್ಮಾ, ಮೊಹಮ್ಮದ್ ಶೆಹಜಾದ್, ಮುಷ್ಫಿಕರ್ ರಹೀಮ್, ಶೋಯೆಬ್ ಮಲ್ಲಿಕ್ ಮುಂತಾದವರು ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿ ಮಿಂಚಿದರು. ಅದೇ ರೀತಿ ಬೌಲರ್’ಗಳು ಏಷ್ಯಾಕಪ್’ನಲ್ಲಿ ತಮ್ಮ ಅದ್ಭುತ ಕೌಶಲ್ಯ ಮೆರೆದರು. ಈ ಬಾರಿಯ ಏಷ್ಯಾಕಪ್’ನಲ್ಲಿ ಮಿಂಚಿದ ಟಾಪ್ ಬೌಲರ್’ಗಳು ನಿಮ್ಮ ಮುಂದೆ..
5. ಕುಲ್ದೀಪ್ ಯಾದವ್: 6 ಪಂದ್ಯ 10 ವಿಕೆಟ್- 4.09 ಎಕನೋಮಿ
ಚೈನಾಮ್ಯಾನ್ ಖ್ಯಾತಿಯ ಮಣಿಕಟ್ಟು ಸ್ಪಿನ್ನರ್ ಕುಲ್ದೀಪ್ ಯಾದವ್ ಏಷ್ಯಾಕಪ್’ನಲ್ಲೂ ತಮ್ಮ ಸಾಮರ್ಥ್ಯ ಮುಂದುವರೆಸಿದ್ದಾರೆ. ಲಂಡನ್ ಪ್ರವಾಸದಲ್ಲಿ ಯಶಸ್ವಿಯಾಗಿದ್ದ ಕುಲ್ದೀಪ್ ಏಷ್ಯಾಕಪ್’ನಲ್ಲೂ 10 ವಿಕೆಟ್ ಕಬಳಿಸಿ ಮಿಂಚಿದ್ದಾರೆ. ಅದರಲ್ಲೂ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಮುನ್ನುಗ್ಗುತ್ತಿದ್ದ ಲಿಟನ್ ದಾಸ್ ಬಲಿ ಪಡೆದಿದ್ದು ಪಂದ್ಯದ ಫಲಿತಾಂಶದ ಮೇಲೂ ಪ್ರಭಾವ ಬೀರಿತು.
4. ಕೇದಾರ್ ಜಾಧವ್: 6 ಪಂದ್ಯ- 6 ವಿಕೆಟ್ - 3.97 ಎಕನೋಮಿ
ಟೀಂ ಇಂಡಿಯಾದ ಸಾಂದರ್ಭಿಕ ಸ್ಪಿನ್ನರ್ ಕೇದಾರ್ ಜಾಧವ್ ಸಿಕ್ಕ ಅವಕಾಶವನ್ನು ಭರ್ಜರಿಯಾಗಿ ಬಳಸಿಕೊಳ್ಳುವ ಮೂಲಕ ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಆರು ಪಂದ್ಯಗಳಲ್ಲಿ ಓವರ್’ಗೆ ಕೇವಲ 4ರ ಸರಾಸರಿಯಲ್ಲಿ ರನ್ ನೀಡಿ 6 ವಿಕೆಟ್ ಕಬಳಿಸುವಲ್ಲಿ ಯಶಸ್ವಿಯಾದರು. ಅವರು ಕಬಳಿಸಿದ ಎಲ್ಲಾ ವಿಕೆಟ್’ಗಳು ಪಂದ್ಯದ ಫಲಿತಾಂಶವನ್ನೇ ಬದಲಾಯಿಸುವಲ್ಲಿ ಯಶಸ್ವಿಯಾಗಿದ್ದವು.
ಅದರಲ್ಲೂ ಏಷ್ಯಾಕಪ್ ಫೈನಲ್’ನಲ್ಲಿ ಶತಕದ ಜತೆಯಾಟವಾಡಿ ಮುನ್ನುಗ್ಗುತ್ತಿದ್ದ ಬಾಂಗ್ಲಾ ಆರಂಭಿಕ ಜೋಡಿಯನ್ನು ಪೆವಿಲಿಯನ್’ಗೆ ಕಳಿಸಿದ್ದೇ ಜಾಧವ್. ಅಲ್ಲದೇ ಮೊಹಮ್ಮದ್ ಶೆಹಜಾದ್, ಮುಷ್ಫಿಕರ್ ರಹೀಮ್, ಸರ್ಫರಾಜ್ ಅಹಮದ್ ಸೇರಿದಂತೆ ಪ್ರಮುಖ ವಿಕೆಟ್ ಕಬಳಿಸಿ ಮಿಂಚಿದರು.
3. ರಶೀದ್ ಖಾನ್: 5 ಪಂದ್ಯ-10 ವಿಕೆಟ್- 3.73 ಎಕನೋಮಿ
ಆಫ್ಘನ್ ಯುವ ಪ್ರತಿಭೆ ರಶೀದ್ ಖಾನ್ ಏಷ್ಯಾಕಪ್’ನಲ್ಲೂ ತಮ್ಮ ಸಾಮರ್ಥ್ಯವನ್ನು ಅನಾವರಣ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಆಡಿದ 5 ಪಂದ್ಯಗಳಲ್ಲಿ 10 ವಿಕೆಟ್ ಪಡದು ಗಮನ ಸೆಳೆಯುವಲ್ಲಿ ಯಶಸ್ವಿಯಾದರು. ಅದರಲ್ಲೂ ತಮ್ಮ ಹುಟ್ಟುಹಬ್ಬದಂದು ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ 9 ಓವರ್’ಗಳಲ್ಲಿ ಕೇವಲ 13 ರನ್ ನೀಡಿ 2 ವಿಕೆಟ್ ಕಬಳಿಸಿ ತಾವೆಷ್ಟು ಮಾರಕ ಸ್ಪಿನ್ನರ್ ಎನ್ನುವುದನ್ನು ಸಾಭೀತು ಮಾಡಿದ್ದಾರೆ. ಅಲ್ಲದೇ ಭಾರತ ವಿರುದ್ಧ ಟೈ ಸಾಧಿಸುವಲ್ಲೂ ರಶೀದ್ ಕೈವಾಡ ಎಲ್ಲರ ಗಮನ ಸೆಳೆಯಿತು.
2. ಜಸ್ಪ್ರೀತ್ ಬುಮ್ರಾ: 4 ಪಂದ್ಯ-8 ವಿಕೆಟ್- 3.67 ಎಕನೋಮಿ
ಗಾಯದ ಸಮಸ್ಯೆಯ ಬಳಿಕ ಭರ್ಜರಿಯಾಗಿ ಕಮ್’ಬ್ಯಾಕ್ ಮಾಡಿದ ಏಕದಿನ ಕ್ರಿಕೆಟ್’ನ ನಂಬರ್ 1 ಬೌಲರ್ ಜಸ್ಪ್ರೀತ್ ಬುಮ್ರಾ ಈ ಬಾರಿಯ ಏಷ್ಯಾಕಪ್’ನ ಭಾರತದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು. ಇಡೀ ಟೂರ್ನಿಯ ಡೆತ್ ಓವರ್’ಗಳಲ್ಲಿ ಬುಮ್ರಾ ಕೇವಲ 29 ರನ್ ನೀಡಿ ಗಮನ ಸೆಳೆದರು. ಡೆತ್ ಓವರ್’ಗಲ್ಲಿ ಬರೋಬ್ಬರಿ 7 ವಿಕೆಟ್ ಕಬಳಿಸಿದ್ದರು. ವೇಗದ ಬೌಲರ್ ಆಗಿ ಓವರ್’ಗೆ ಕೇವಲ 3.67ರ ಸರಾಸರಿಯಲ್ಲಿ ರನ್ ನೀಡಿದ್ದು ಮತ್ತೊಂದು ವಿಶೇಷ.1.
1. ಮುಷ್ತಾಫಿಜುರ್ ರೆಹಮಾನ್: 5 ಪಂದ್ಯ-10 ವಿಕೆಟ್- 4.40 ಎಕನೋಮಿ
ಗಾಯದ ಸಮಸ್ಯೆಗಳಿಂದ ಇತ್ತೀಚಿನ ಕೆಲ ಸರಣಿಗಳಿಂದ ವಂಚಿತರಾಗಿದ್ದ ಮುಷ್ತಾಫಿಜುರ್ ಏಷ್ಯಾಕಪ್’ನಲ್ಲಿ ಮಿಂಚಿನ ದಾಳಿ ಸಂಘಟಿಸುವ ಮೂಲಕ ಮತ್ತೊಮ್ಮೆ ಏಕದಿನ ಕ್ರಿಕೆಟ್’ಗೆ ಭರ್ಜರಿ ಕಮ್’ಬ್ಯಾಕ್ ಮಾಡಿದ್ದಾರೆ. ಡೆತ್ ಓವರ್’ಗಳಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶನ ತೋರಿದ್ದ ’ಫಿಜ್’ ಆಫ್ಘನ್ ಎದುರು 8 ರನ್’ಗಳನ್ನು ಡಿಫೆಂಡ್ ಮಾಡಿಕೊಳ್ಳುವಲ್ಲಿ ಸಫಲರಾಗಿದ್ದರು. ಇನ್ನು ಪಾಕಿಸ್ತಾನ ವಿರುದ್ಧ 4 ವಿಕೆಟ್ ಕಬಳಿಸಿ ತಂಡ ಫೈನಲ್ ಪ್ರವೇಶಿಸುವಂತೆ ಮಾಡುವಲ್ಲಿ ಸಫಲರಾಗಿದ್ದರು. ಫೈನಲ್’ನಲ್ಲೂ ಮಾರಕ ಬೌಲಿಂಗ್ ನಡೆಸಿದರಾದರೂ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ವಿಫಲರಾದರು.