ದುಬೈ[ಸೆ.21]: ಏಷ್ಯಾ ಕಪ್ ಟೂರ್ನಿಯಲ್ಲಿ ಬಾಂಗ್ಲಾದೇಶ ಎದುರು ಟಾಸ್ ಗೆದ್ದ ಭಾರತ ಫೀಲ್ಡಿಂಗ್ ಆಯ್ದುಕೊಂಡಿದೆ. ಭಾರತ ತಂಡದಲ್ಲಿ ಹಾರ್ದಿಕ್ ಪಾಂಡ್ಯ ಬದಲಿಗೆ ರವೀಂದ್ರ ಜಡೇಜಾ ತಂಡ ಕೂಡಿಕೊಂಡಿದ್ದಾರೆ.
ಏಷ್ಯಾಕಪ್ ಟೂರ್ನಿಯ ಸೂಪರ್ 4 ಹಂತದ ಪಂದ್ಯಗಳಿಗೆ ಚಾಲನೆ ದೊರಕಿದ್ದು, ಭಾರತ ತಂಡದಲ್ಲಿ ಏಕೈಕ ಬದಲಾವಣೆ ಮಾಡಲಾಗಿದ್ದರೆ, ಬಾಂಗ್ಲಾದೇಶ ತಂಡದಲ್ಲಿ 2 ಬದಲಾವಣೆ ಮಾಡಲಾಗಿದೆ. ಮುಷ್ತಫಿಜುರ್ ಹಾಗೂ ಮುಷ್ಫಿಕರ್ ರಹೀಮ್ ತಂಡ ಕೂಡಿಕೊಂಡಿದ್ದಾರೆ.
ಸತತ ಎರಡು ಪಂದ್ಯಗಳನ್ನು ಗೆದ್ದು ಏಷ್ಯಾಕಪ್’ನಲ್ಲಿ ಹ್ಯಾಟ್ರಿಕ್ ಜಯಸಾಧಿಸುವ ವಿಶ್ವಾಸದಲ್ಲಿದ್ದರೆ, ಬಾಂಗ್ಲದೇಶ ತಂಡವು ಆಘ್ಘಾನ್ ವಿರುದ್ಧ ಆಘಾತಕಾರಿ ಸೋಲಿನಿಂದ ಹೊರಬರಲು ಎದುರು ನೋಡುತ್ತಿದೆ.
ತಂಡಗಳು ಹೀಗಿವೆ.

ಇನ್ನು ಪಾಕಿಸ್ತಾನ-ಆಫ್ಘಾನಿಸ್ತಾನ ನಡುವಿನ ಮತ್ತೊಂದು ಸೂಪರ್ 4 ಪಂದ್ಯದಲ್ಲಿ ಟಾಸ್ ಗೆದ್ದ ಆಫ್ಘಾನ್ ಬ್ಯಾಟಿಂಗ್ ಆಯ್ದುಕೊಂಡಿದೆ.