Asianet Suvarna News Asianet Suvarna News

ಗೆಲುವು ತಪ್ಪಿಸಿದರೂ ಭಾರತೀಯರ ಹೃದಯ ಗೆದ್ದ ರಶೀದ್ ಖಾನ್

ಅಫ್ಘಾನಿಸ್ತಾನ ವಿರುದ್ಧದ ಎಂ.ಎಸ್ ಧೋನಿ ನಾಯಕನಾಗಿ ಕಣಕ್ಕಿಳಿಯುತ್ತಿದ್ದಂತೆ ಅಭಿಮಾನಿಗಳ ಕುತೂಹಲ ಹೆಚ್ಚಾಗಿತ್ತು. ಆದರೆ ಪಂದ್ಯ ಟೈನಲ್ಲಿ ಅಂತ್ಯಗೊಂಡಾಗ ಅಭಿಮಾನಿಗಳಿಗೆ ಭಾರಿ ನಿರಾಸೆಯಾಗಿದೆ. ಅದರಲ್ಲೂ ಪುಟ್ಟ ಬಾಲಕ ಕಣ್ಣೀರಿಗೆ ಸ್ವತಃ ರಶೀದ್ ಖಾನ್ ಸ್ಪಂದಿಸಿದ್ದಾರೆ.

Asia Cup Cricket 2018 Rashid Khan met Indian crying fan after match
Author
Bengaluru, First Published Sep 26, 2018, 4:32 PM IST
  • Facebook
  • Twitter
  • Whatsapp

ದುಬೈ(ಸೆ.26): ಭಾರತ ಹಾಗೂ ಅಫ್ಘಾನಿಸ್ತಾನ ನಡುವಿನ ಏಷ್ಯಾಕಪ್ ಸೂಪರ್ 4 ಹಂತದ ಪಂದ್ಯದ ಫಲಿತಾಂಶ ಉಭಯ ತಂಡಗಳಿಗೂ ಯಾವುದೇ ಪರಿಣಾ ಬೀರಿಲ್ಲ. ಕಾರಣ ಅಫ್ಘಾನ್ ಪಂದ್ಯಕ್ಕೂ ಮೊದಲೇ ಟೂರ್ನಿಯಿಂದ ಹೊರಬಿದ್ದಿದ್ದರೆ, ಭಾರತ ಫೈನಲ್‌ಗೆ ಲಗ್ಗೆ ಇಟ್ಟಿತ್ತು. ಆದರೆ ಈ ಪಂದ್ಯ ಟೂರ್ನಿಯ ಅತ್ಯಂತ ರೋಚಕ ಪಂದ್ಯ ಅನ್ನೋ ಹೆಗ್ಗಳಿಕೆಗೆ ಪಾತ್ರವಾಯಿತು.

ಅಂತಿಮ ಓವರ್ ವರೆಗೆ ಸಾಗಿದ ಪಂದ್ಯ ಟೈನಲ್ಲಿ ಅಂತ್ಯಗೊಂಡಿತು. ರವೀಂದ್ರ ಜಡೇಜಾ ವಿಕೆಟ್ ಪತನಗೊಳ್ಳುತ್ತಿದ್ದಂತೆ ಟೀಂ ಇಂಡಿಯಾ 252 ರನ್‌ಗೆ ಆಲೌಟ್ ಆಯಿತು. ಇಷ್ಟೇ ಅಲ್ಲ ಅಫ್ಘಾನ್ ಸಂಭ್ರಮಾಚರಣೆ ಆರಂಭಗೊಂಡಿತು. ಈ ಫಲಿತಾಂಶ ಭಾರತೀಯ ಪುಟ್ಟ ಅಭಿಮಾನಿಗೆ ತೀವ್ರ ಆಘಾತ ತಂದಿತು. 

 

 

ಭಾರತ ತಂಡದ ಸೋಲಿಗೆ ಪುಟ್ಟ ಬಾಲಕ ಕಣ್ಣೀರಿಟ್ಟ. ಆತನನ್ನ ಅದೆಷ್ಟೇ ಸಮಾಧಾನ ಪಡಿಸಿದರೂ ಕಣ್ಣೀರು ಮಾತ್ರ ನಿಲ್ಲಲೇ ಇಲ್ಲ. ನೇರಪ್ರಸಾರದ ಕ್ಯಾಮಾರ ಕಣ್ಣು ಕೂಡ ಈ ಬಾಲಕನ ಮೇಲೆ ಬಿತ್ತು. ಇದನ್ನ ಗಮನಿಸಿದ ಅಫ್ಘಾನಿಸ್ತಾನ ಸ್ಪಿನ್ನರ್ ರಶೀದ್ ಖಾನ್ ಹಾಗೂ ಬ್ಯಾಟ್ಸ್‌ಮನ್ ಮೊಹಮ್ಮದ್ ಶೆಹಝಾದ್ ಬಾಲಕ ಬಳಿಕ ಬಂದು ಫೋಟೋ ಕ್ಲಿಕ್ಕಿಸಿದರು. ಇಷ್ಟೇ ಅಲ್ಲ ಬಾಲಕನನ್ನ ಸಮಾಧಾನ ಪಡಿಸಿದರು.

ರಶೀದ್ ಖಾನ್ ಹಾಗೂ ಮೊಹಮ್ಮದ್ ಶೆಹಝಾದ್ ಕಳಕಳಿ  ಭಾರತ  ಹಾಗೂ ಅಫ್ಘಾನ್ ಸಂಬಂಧವನ್ನ ಮತ್ತಷ್ಟು ಬಲಪಡಿಸಿದೆ. 

Follow Us:
Download App:
  • android
  • ios