ನಿನ್ನೆಯಷ್ಟೇ ಮುಕ್ತಾಯವಾದ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 4 ಹಂತದ ಮೊದಲ ಪಂದ್ಯ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ. ಶಕೀಬ್ ಅಲ್ ಹಸನ್ ಅವರನ್ನು ರವೀಂದ್ರ ಜಡೇಜಾ ಬಲಿ ಪಡೆದಿದ್ದರು. ಅದರ ಕ್ರೆಡಿಟ್ ಅನ್ನು ಉಭಯ ಐಪಿಎಲ್ ಪ್ರಾಂಚೈಸಿಗಳು ತಮ್ಮ-ತಮ್ಮ ನಾಯಕರಿಗೆ ನೀಡಿವೆ.

ದುಬೈ[ಸೆ.22]: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾ ಚಾಂಪಿಯನ್ಸ್ ರೀತಿಯಲ್ಲಿಯೇ ಪ್ರದರ್ಶನ ತೋರುತ್ತಿದೆ. ಹಾಂಕಾಂಗ್ ವಿರುದ್ಧ ಸ್ವಲ್ಪ ಬೆವರು ಹರಿಸಿದ್ದು ಬಿಟ್ಟರೆ, ಉಳಿದರಡು ಪಂದ್ಯಗಳನ್ನು ಅನಾಯಾಸವಾಗಿ ಗೆದ್ದುಕೊಂಡಿದೆ.

ಅದರಲ್ಲೂ ನಿನ್ನೆಯಷ್ಟೇ ಮುಕ್ತಾಯವಾದ ಭಾರತ-ಬಾಂಗ್ಲಾದೇಶ ನಡುವಿನ ಸೂಪರ್ 4 ಹಂತದ ಮೊದಲ ಪಂದ್ಯ ಇದೀಗ ಮುಂಬೈ ಇಂಡಿಯನ್ಸ್ ಹಾಗೂ ಚೆನ್ನೈ ಸೂಪರ್’ಕಿಂಗ್ಸ್ ಪಾಲಿಗೆ ಪ್ರತಿಷ್ಠೆಯ ವಿಚಾರವಾಗಿ ಪರಿಣಮಿಸಿದೆ. ಶಕೀಬ್ ಅಲ್ ಹಸನ್ ಅವರನ್ನು ರವೀಂದ್ರ ಜಡೇಜಾ ಬಲಿ ಪಡೆದಿದ್ದರು. ಅದರ ಕ್ರೆಡಿಟ್ ಅನ್ನು ಉಭಯ ಐಪಿಎಲ್ ಪ್ರಾಂಚೈಸಿಗಳು ತಮ್ಮ-ತಮ್ಮ ನಾಯಕರಿಗೆ ನೀಡಿವೆ.

ಅಷ್ಟಕ್ಕೂ ಆಗಿದ್ದೇನು..?

ಮೊದಲ 6 ಓವರ್’ಗಳೊಳಗಾಗಿ ಬಾಂಗ್ಲಾದೇಶದ ಆರಂಭಿಕರು ಪೆವಿಲಿಯನ್ ಸೇರಿದ್ದರು. ಆ ಬಳಿಕ ಕ್ರೀಸ್’ಗಿಳಿದ ಅನುಭವಿ ಬ್ಯಾಟ್ಸ್’ಮನ್ ಶಕೀಬ್ ಅಲ್ ಹಸನ್ ಸ್ಫೋಟಕ ಇನ್ನಿಂಗ್ಸ್ ಕಟ್ಟುವ ಮುನ್ಸೂಚನೆ ನೀಡಿದರು. ಈ ವೇಳೆ 10 ಓವರ್’ನಲ್ಲಿ ದಾಳಿಗಿಳಿದ ರವೀಂದ್ರ ಜಡೇಜಾ ಬೌಲಿಂಗ್’ನಲ್ಲಿ ಸತತ ಎರಡು ಬೌಂಡರಿ ಬಾರಿಸಿ ಅಪಾಯದ ಮುನ್ಸೂಚನೆ ನೀಡಿದರು. ಈ ವೇಳೆ ಮಾಜಿ ನಾಯಕ ಧೋನಿ ಸ್ಕ್ವೇರ್’ಲೆಗ್’ನಲ್ಲಿ ಧವನ್ ನಿಲ್ಲಿಸುವಂತೆ ರೋಹಿತ್’ಗೆ ಸಲಹೆ ನೀಡಿದರು. ಅದರಂತೆ ನಾಯಕ ರೋಹಿತ್ ಸ್ಲಿಪ್’ನಲ್ಲಿದ್ದ ಧವನ್ ಅವರನ್ನು ಸ್ಕ್ವೇರ್’ಲೆಗ್’ನಲ್ಲಿ ನಿಲ್ಲಿಸಿದರು. ಮರು ಎಸೆತದಲ್ಲೇ ಮತ್ತೊಂದು ಬೌಂಡರಿ ಬಾರಿಸುವ ಯತ್ನದಲ್ಲಿ ಶಕೀಬ್ ಸ್ಕ್ವೇರ್’ಲೆಗ್’ನಲ್ಲಿದ್ದ ಧವನ್’ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು.

Scroll to load tweet…

ಈ ಯಶಸ್ಸಿನ ಕ್ರೆಡಿಟ್ ಅನ್ನು ಮುಂಬೈ ಇಂಡಿಯನ್ಸ್ ತಂಡ ತನ್ನ ಕ್ಯಾಪ್ಟನ್ ರೋಹಿತ್ ಶರ್ಮಾ ಅವರಿಗೆ ನೀಡಿದ್ದರೆ, ಚೆನ್ನೈ ಸೂಪರ್’ಕಿಂಗ್ಸ್ ತಂಡ ತನ್ನ ನಾಯಕ ಎಂ.ಎಸ್ ಧೋನಿಗೆ ಆ ಕ್ರೆಡಿಟ್ ನೀಡಿದೆ.

Scroll to load tweet…
Scroll to load tweet…

ಅಷ್ಟಕ್ಕೂ ಯಾರಿಗೆ ಈ ಕ್ರೆಡಿಟ್ ನೀಡಬೇಕು ಎನ್ನೋದು ನೀವಾದ್ರೂ ಹೇಳಿ..