Asianet Suvarna News Asianet Suvarna News

ಏಷ್ಯಾಕಪ್: ಬಾಂಗ್ಲಾ ​​ಆರ್ಭಟಕ್ಕೆ ಶ್ರೀಲಂಕಾ ಖೇಲ್ ಖತಂ

ಶನಿವಾರ ನಡೆದ 14ನೇ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ದಾಖಲಿಸಿತು. 5 ಬಾರಿಯ ಚಾಂಪಿಯನ್​ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 137 ರನ್​ಗಳ ಬೃಹತ್ ಗೆಲುವು ಸಾಧಿಸಿದೆ.

Asia Cup Cricket 2018: Bangladesh Wins against Srilanka
Author
Dubai - United Arab Emirates, First Published Sep 16, 2018, 12:27 PM IST

ದುಬೈ, (ಸೆ.16): ಶನಿವಾರ ನಡೆದ 14ನೇ ಏಷ್ಯಾಕಪ್​ ಕ್ರಿಕೆಟ್​ ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ ಭರ್ಜರಿ ಗೆಲುವು ದಾಖಲಿಸಿತು. 5 ಬಾರಿಯ ಚಾಂಪಿಯನ್​ ಶ್ರೀಲಂಕಾ ವಿರುದ್ಧ ಬಾಂಗ್ಲಾದೇಶ 137 ರನ್​ಗಳ ಬೃಹತ್ ಗೆಲುವು ದಾಖಲಿಸಿತು.​

ಮೊದಲು ಟಾಸ್​ ಗೆದ್ದು ಬ್ಯಾಟಿಂಗ್ ಮಾಡಿದ ಬಾಂಗ್ಲಾ, ಆರಂಭದಲ್ಲೇ ಆಘಾತಕ್ಕೊಳಗಾಯಿತು. ಲಸಿತ್ ಮಾಲಿಂಗ​ ಮಾರಕ ಬೌಲಿಂಗ್​ ದಾಳಿಗೆ ಬಾಂಗ್ಲಾ ಬ್ಯಾಟ್ಸ್ ಮನ್‌ಗಳು​ ರನ್ ಗಳಿಸು ಪರದಾಡಿದರು. ಮೊದಲ ಓವರ್​​ನಲ್ಲಿ ಕೇವಲ 2 ರನ್​​​ಗಳಿಗೆ 2 ವಿಕೆಟ್​ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಅಷ್ಟೇ ಅಲ್ಲದೇ 2ನೇ ಓವರ್​ನಲ್ಲಿ ಭರವಸೆಯ ಬ್ಯಾಟ್ಸ್​​ಮನ್​ ತಮಿಮ್​ ಇಕ್ಬಾಲ್​ ಗಾಯಗೊಂಡಿದ್ದು, ಬಾಂಗ್ಲಾ ಪಾಲಿಗೆ ನುಂಗಲಾರದ ತುತ್ತಾಯಿತು.

 ಆದರೆ 3ನೇ ವಿಕೆಟಿಗೆ ಜೊತೆಯಾದ ಮುಶ್ಫೀಕರ್​​ ರಹೀಮ್​​ ಅವರ ಆಕರ್ಷಕ ಶತಕ ಹಾಗೂ ಮೊಹಮ್ಮದ್​​ ಮಿಥುನ್​​ ಅವರ ಅವರ ಅರ್ಧಶತಕ ಬಾಂಗ್ಲಾಕ್ಕೆ ಬಲತುಂಬಿತು. 3ನೇ ವಿಕೆಟಿಗೆ ಈ ಜೋಡಿ 131 ರನ್​ ಸೇರಿಸುವ ಮೂಲಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದ್ರು. ಅಂತಿಮವಾಗಿ 49.3 ಓವರ್​ಗಳಲ್ಲಿ ತನ್ನೆಲ್ಲ ವಿಕೆಟ್​ ಕಳೆದುಕೊಂಡ ಬಾಂಗ್ಲಾ ತಂಡ 261ರನ್​ ಕಲೆಹಾಕಿತು.

262ರನ್​ಗಳ ಟಾರ್ಗೆಟ್​ ಬೆನ್ನತ್ತಿದ್ದ ಲಂಕಾ, ಆರಂಭದಲ್ಲಿ ಅಘಾತಕ್ಕೊಳಗಾಯಿತು. 40 ರನ್​​ ಗಳಿಸುವಷ್ಟರಲ್ಲಿ ಪ್ರಮುಖ 4 ವಿಕೆಟ್​ ಕಳೆದುಕೊಂಡು ಸೋಲಿನತ್ತ ಮುಖ ಮಾಡಿತ್ತು. ಬಾಂಗ್ಲಾ ಬೌಲರ್​ಗಳ ಎದುರು ರನ್​ ಗಳಿಸುವುದಕ್ಕೆ ಪರದಾಡಿದ ಲಂಕಾ ಬ್ಯಾಟ್ಸ್​​ಮನ್​ಗಳು, ಪೆವಿಲಿಯನ್​ ಪೆರೇಡ್ ನಡೆಸಿದರು. 

ಅಂತಿಮವಾಗಿ 35.2 ಓವರ್​ಗಳಲ್ಲಿ 124 ರನ್​ಗಳಿಸಿದ ಸಿಂಹಳೀಯರು ತನ್ನೆಲ್ಲ ವಿಕೆಟ್​ ಕಳೆದುಕೊಂಡ​​ 137 ರನ್​ಗಳ ಸೋಲೊಪ್ಪಿಕೊಂಡರು.

Follow Us:
Download App:
  • android
  • ios