Asianet Suvarna News Asianet Suvarna News

ಏಷ್ಯಾಕಪ್: ಇಂದು ಭಾರತ-ಬಾಂಗ್ಲಾ ಕಾದಾಟ

ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್​ ಭಾರತ, 4ರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. 4ರ ಘಟ್ಟದ ಮೊದಲ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲದೇಶವನ್ನ ಎದುರಿಸಲಿದೆ.

Asia Cup Cricket 2018: Bangladesh and India fight today
Author
Bengaluru, First Published Sep 21, 2018, 11:25 AM IST

ದುಬೈ, [ಸೆ.21]: ಏಷ್ಯಾ ಕಪ್​ ಕ್ರಿಕೆಟ್​ ಟೂರ್ನಿಯಲ್ಲಿ ಸತತ ಎರಡು ಗೆಲುವು ದಾಖಲಿಸಿರುವ ಹಾಲಿ ಚಾಂಪಿಯನ್​ ಭಾರತ, 4ರ ಘಟ್ಟಕ್ಕೆ ಎಂಟ್ರಿಕೊಟ್ಟಿದೆ. 4ರ ಘಟ್ಟದ ಮೊದಲ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ ಬಾಂಗ್ಲದೇಶವನ್ನ ಎದುರಿಸಲಿದೆ.

ಹಾಂಕಾಂಗ್​​ ಹಾಗೂ ಪಾಕಿಸ್ತಾನ ವಿರುದ್ಧ ಭರ್ಜರಿ ಗೆಲುವು ದಾಖಲಿಸಿರುವ ರೋಹಿತ್​ ಪಡೆ, ಗೆಲುವಿನ ಅಜೇಯ ಓಟದ ಮುಂದುವರೆಸುವ ಅತ್ಮವಿಶ್ವಾಸದಲ್ಲಿದೆ. ಟೂರ್ನಿಯಲ್ಲಿ ಸತತ 2 ಗೆಲುವು ದಾಖಲಿಸಿರುವ ಭಾರತಕ್ಕೆ ಇಂದಿನ ಪಂದ್ಯದಲ್ಲಿ ಆಡುವ 11ರ ಬಳಗದಲ್ಲಿ ಯಾರಿಗೆ ಅವಕಾಶ ನೀಡಬೇಕು ಅನ್ನೋ ಚಿಂತೆ ಶುರುವಾಗಿದೆ. 

ಸದ್ಯ ತಂಡದ ಓಪನರ್​ಗಳಾದ ರೋಹಿತ್​​ ಶರ್ಮ ಹಾಗೂ ಶಿಖರ್​ ಧವನ್​ ಲಯಕ್ಕೆ ಮರಳಿರುವುದು ಸಮಾಧಾನ ಮೂಡಿಸಿದೆ. ಅಷ್ಟೇ ಅಲ್ಲದೇ ಮಿಡಲ್​ ಆರ್ಡರ್​ನಲ್ಲಿ ಅಂಬಟಿ ರಾಯುಡು ಹಾಗೂ ದಿನೇಶ್​ ಕಾರ್ತಿಕ್​ ಉತ್ತಮ ಪರ್ಫಾರ್ಮನ್ಸ್​ ನೀಡುವ ಮೂಲಕ ಅತ್ಮವಿಶ್ವಾಸ ಮೂಡಿಸಿದ್ದಾರೆ.

 ಉಳಿದಂತೆ ಬೌಲಿಂಗ್​​ನಲ್ಲಿಯೂ ಭಾರತ ಉತ್ತಮ ಲಯದಲ್ಲಿದ್ದು, ಹಾರ್ದಿಕ್​ ಅನುಪಸ್ಥಿತಿ ಕಾಡಲಿದೆ. ಹೀಗಾಗಿ ತಂಡಕ್ಕೆ 5ನೇ ಬೌಲರ್​​ ಕೊರೆತೆ ಕಾಡುವ ಸಾಧ್ಯತೆ ದಟ್ಟವಾಗಿದೆ. ಇನ್ನು ಬಾಂಗ್ಲಾವನ್ನ ನೋಡುವುದಾದರೆ ಉತ್ತಮ ಬ್ಯಾಟ್ಸ್​​ಮನ್ಸ್​​,ಆಲ್​ರೌಂಡರ್ಸ್​ ಹಾಗೂ ಉತ್ತಮ ಬೌಲರ್​ಗಳನ್ನು ಹೊಂದಿದ್ದು, ಭಾರತಕ್ಕೆ ಟಕ್ಕರ್ ನೀಡುವ ವಿಶ್ವಾಸದಲ್ಲಿದೆ.

ನಿನ್ನೆ ಅಬುಧಾಬಿಯಲ್ಲಿ ಅಫ್ಘಾನ್​ ವಿರುದ್ಧ ಪಂದ್ಯವನ್ನಾಡಿ, ಇಂದು ಬಲಿಷ್ಠ ಭಾರತವನ್ನ ಎದುರಿಸುತ್ತಿರುವುದ ದೊಡ್ಡ ಸವಾಲಾಗಿದೆ. ಅಫ್ಘಾನ್​ ವಿರುದ್ಧ ಕಳೆದ ಪಂದ್ಯದಲ್ಲಿ ಎಲ್ಲಾ ವಿಭಾಗದಲ್ಲೂ ವೈಫಲ್ಯ ಅನುಭವಿಸಿದ ಬಾಂಗ್ಲಾ, ಇಂದು ಭಾರತದ ವಿರುದ್ಧ ತಿರುಗಿ ಬೀಳುವ ಲೆಕ್ಕಾಚಾರದಲ್ಲಿದೆ.

ಪಂದ್ಯ ಆರಂಭದ ಸಮಯ: ಸಂಜೆ 4ಕ್ಕೆ.

ನೇರ ಪ್ರಸಾರ: ಸ್ಟಾರ್ ಸ್ಪೋರ್ಟ್ಸ್

Follow Us:
Download App:
  • android
  • ios