ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಮೊದಲ ಹತ್ತು ಓವರ್’ಗಳಲ್ಲಿ ಆರಂಭಿಕ ಬ್ಯಾಟ್ಸ್’ಮನ್’ಗಳಿಬ್ಬರು ಪೆವಿಲಿಯನ್ ಸೇರಿದ್ದರು.
ಅಬುದಾಬಿ[ಸೆ.21]: ಹಸ್ಮತುಲ್ಲಾ ಶಾಹಿದಿ[97*] ಹಾಗೂ ನಾಯಕ ಆಸ್ಗರ್ ಆಫ್ಘಾನ್[67] ಆಕರ್ಷಕ ಅರ್ಧಶತಕಗಳ ನೆರವಿನಿಂದ ಆಫ್ಘಾನಿಸ್ತಾನ ತಂಡವು 6 ವಿಕೆಟ್ ನಷ್ಟಕ್ಕೆ 257 ರನ್ ಬಾರಿಸಿದ್ದು, ಪಾಕಿಸ್ತಾನ ತಂಡಕ್ಕೆ ಸವಾಲಿನ ಗುರಿ ನೀಡಿದೆ.
ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನದ ಆರಂಭ ಅಷ್ಟೇನು ಉತ್ತಮವಾಗಿರಲಿಲ್ಲ. ಮೊದಲ ಹತ್ತು ಓವರ್’ಗಳಲ್ಲಿ ಆರಂಭಿಕ ಬ್ಯಾಟ್ಸ್’ಮನ್’ಗಳಿಬ್ಬರು ಪೆವಿಲಿಯನ್ ಸೇರಿದ್ದರು. ಮಧ್ಯಮ ಕ್ರಮಾಂಕದಲ್ಲಿ ನೆಲಕಚ್ಚಿ ಆಡಿದ ಹಿಸ್ಮತುಲ್ಲಾ ಹಾಗೂ ಆಸ್ಗರ್ ತಂಡವನ್ನು ಗೌರವಾನ್ವಿತ ಮೊತ್ತದತ್ತ ಕೊಂಡ್ಯೊಯ್ದರು. ಒಟ್ಟು 5 ಸಿಕ್ಸರ್ ಸಿಡಿಸುವ ಮೂಲಕ ಪ್ರೇಕ್ಷಕರನ್ನು ರಂಜಿಸಿದ ಅಸ್ಗರ್ ಸುಮಾರು 21 ಇನ್ನಿಂಗ್ಸ್’ಗಳ ಬಳಿಕ ಅರ್ಧಶತಕ ಪೂರೈಸಿದರು. ಇನ್ನೊಂದೆಡೆ ಉತ್ತಮ ಫಾರ್ಮ್’ನಲ್ಲಿರುವ ಹಿಸ್ಮತುಲ್ಲಾ ಕೇವಲ ಮೂರು ರನ್’ಗಳಿಂದ ಶತಕ ವಂಚಿತರಾದರೂ ಅಜೇಯರಾಗುಳಿದರು.
ಪಾಕಿಸ್ತಾನ ಪರ ತಂಡಕ್ಕೆ ಕಮ್’ಬ್ಯಾಕ್ ಮಾಡಿದ ಮೊಹಮ್ಮದ್ ನವಾಜ್ ಮೂರು ವಿಕೆಟ್ ಕಬಳಿಸಿದರೆ, ಪದಾರ್ಪಣ ಪಂದ್ಯವಾಡಿದ ಯುವ ವೇಗಿ ಶಾಹಿನ್ ಅಫ್ರಿದಿ 2 ಹಾಗೂ ಹಸನ್ ಅಲಿ ಒಂದು ವಿಕೆಟ್ ಪಡೆದರು.
ಸಂಕ್ಷಿಪ್ತ ಸ್ಕೋರ್:
ಆಫ್ಘಾನಿಸ್ತಾನ: 257/6
ಹಿಸ್ಮತುಲ್ಲಾ: 97*
ಮೊಹಮ್ಮದ್ ನವಾಜ್: 57/3
