Asianet Suvarna News Asianet Suvarna News

ಏಷ್ಯಾಕಪ್ 2018: ಅಫ್ಘಾನ್ ವಿರುದ್ಧ ಗೆಲ್ಲಲೇಬೇಕಿದೆ ಶ್ರೀಲಂಕಾ

ಏಷ್ಯಾಕಪ್ ಟೂರ್ನಿ 3ನೇ ದಿನದಲ್ಲಿ ಶ್ರೀಲಂಕಾ ಹಾಗೂ ಆಫ್ಘಾನಿಸ್ತಾನ ತಂಡ ಹೋರಾಟ ನಡೆಸುತ್ತಿದೆ. ಲಂಕಾ ಸೋಲಿನಿಂದ ಹೊರಬರೋ ಯತ್ನದಲ್ಲಿದ್ದರೆ, ಆಫ್ಘಾನ್ ಶುಭಾರಂಭದ ವಿಶ್ವಾಸದಲ್ಲಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್.

Asia Cup 2018 Tharanga and Dhanjaya partnership help srilanka to fight back
Author
Bengaluru, First Published Sep 17, 2018, 10:27 PM IST

ದುಬೈ(ಸೆ.17): ಏಷ್ಯಾಕಪ್ ಟೂರ್ನಿಯ ಅಫ್ಘಾನಿಸ್ತಾನ ವಿರುದ್ಧದ ಗೆಲ್ಲಲೇಬೇಕಾದ ಪಂದ್ಯದಲ್ಲಿ ಶ್ರೀಲಂಕಾ ಎಚ್ಚರಿಕೆಯ ಹೋರಾಟಕ್ಕೆ ಮುಂದಾಗಿದೆ. ಗೆಲುವಿಗೆ 250 ರನ್ ಟಾರ್ಗೆಟ್ ಪಡೆದಿರುವ ಲಂಕಾ 2 ವಿಕೆಟ್ ಕಳೆದುಕೊಂಡು ಗೆಲುವಿಗಾಗಿ ಹೋರಾಟ ನಡೆಸುತ್ತಿದೆ.

ಆರಂಭಿಕ ಕುಸಾಲ್ ಮೆಂಡೀಸ್ ಶೂನ್ಯಕ್ಕೆ ಔಟಾದರು. ಈ ಮೂಲಕ ಲಂಕಾ ತಂಡದ ಆತಂತಕ್ಕೆ ಕಾರಣರಾದರು. ಆದರೆ ಉಪುಲ್ ತರಂಗ ಹಾಗೂ ಧನಂಜಯ್ ಡಿಸಿಲ್ವ ಜೊತೆಯಾಟದಿಂದ ಲಂಕಾ ಚೇತರಿಸಿಕೊಂಡಿತು. ಧನಂಜಯ್ 23 ರನ್ ಸಿಡಿಸಿ ರನೌಟ್‌ಗೆ ಬಲಿಯಾದರು. ಸದ್ಯ ಶ್ರೀಲಂಕಾ 2 ವಿಕೆಟ್ ನಷ್ಟಕ್ಕೆ 63 ರನ್ ಸಿಡಿಸಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಆಫ್ಘಾನಿಸ್ತಾನ 249 ರನ್ ಸಿಡಿಸಿತು. ರಹಮತ್ ಶಾ 72 , ಇಸಾನುಲ್ಹಾ ಶಾಹ 45, ಹಶ್ಮತುಲ್ಹಾ ಶಾಹಿದಿ 37 ರನ್‌ಗಳ ಕಾಣಿಕೆ ನೀಡಿದರು.

Follow Us:
Download App:
  • android
  • ios