Asianet Suvarna News Asianet Suvarna News

ಹಾಂಕಾಂಗ್ ಆರಂಭಿಕರ ವಿಕೆಟ್ ಕಬಳಿಸಿ ನಿಟ್ಟುಸಿರುಬಿಟ್ಟ ಭಾರತ

ಏಷ್ಯಾಕಪ್ ಟೂರ್ನಿಯಲ್ಲಿ ಹಾಂಕಾಂಗ್ ವಿರುದ್ಧ ಅಭಿಯಾನ ಆರಂಭಿಸಿರುವ ಟೀಂ ಇಂಡಿಯಾಗೆ ಆರಂಭದಲ್ಲೇ ಸಂಕಷ್ಟ ಎದುರಾಗಿದೆ. ಹಾಂಗಾಂಗ್ ವಿರುದ್ಧ 285 ರನ್ ಸಿಡಿಸಿದ ಟೀಂ ಇಂಡಿಯಾದ ಬೌಲಿಂಗ್‌ನಲ್ಲಿ ಹಿನ್ನಡೆ ಅನುಭವಿಸಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

Asia cup 2018  Team india breaks Hong Kong opener partnership
Author
Bengaluru, First Published Sep 19, 2018, 12:05 AM IST

ದುಬೈ(ಸೆ.18): ಹಾಂಕಾಂಗ್ ವಿರುದ್ಧ ಸುಲುಭ ಗೆಲುವಿನ ನಿರೀಕ್ಷೆಯಲ್ಲಿದ್ದ ಟೀಂ ಇಂಡಿಯಾ ಇದೀಗ ಗೆಲುವಿಗಾಗಿ ಕಠಿಣ ಹೋರಾಟ ನಡೆಸುತ್ತಿದೆ. 174 ರನ್ ಜೊತೆಯಾಟದ ಮೂಲಕ ಭಾರತದ ಆತಂಕಕ್ಕೆ ಕಾರಣವಾಗಿದ್ದ ಹಾಂಕಾಂಗ್ ಆರಂಭಿಕರ ವಿಕೆಟ್ ಪತನಗೊಂಡಿದೆ. ಈ ಮೂಲಕ ಟೀಂ ಇಂಡಿಯಾ ನಿಟ್ಟುಸಿರುಬಿಟ್ಟಿದೆ.

ಗೆಲುವಿಗೆ 286 ರನ್ ಟಾರ್ಗೆಟ್ ಪಡೆದಿರುವ ಹಾಂಕಾಂಗ್ ತಂಡಕ್ಕೆ ನಿಜಾಕತ್ ಖಾನ್ ಹಾಗೂ ಅಂಶುಮಾನ್ ರಾತ್ 174 ರನ್ ಜೊತೆಯಾಟ ನೀಡಿದರು. ಅಂಶುಮಾನ್ 73 ರನ್ ಸಿಡಿಸಿದರೆ, ನಿಜಾಕತ್ 92 ರನ್ ಸಿಡಿಸಿ 8 ರನ್‌ಗಳಿಂದ ಶತಕ ವಂಚಿತರಾದರು.

ಆರಂಭಿಕರ ವಿಕೆಟ್ ಕಬಳಿಸಿದ ಟೀಂ ಇಂಡಿಯಾ ಇದೀಗ ಗೆಲುವಿಗಾಗಿ ಹೋರಾಟ ನಡೆಸುತ್ತಿದೆ. ಸದ್ಯ ಹಾಂಕಾಂಗ್ 2 ವಿಕೆಟ್ ನಷ್ಟಕ್ಕೆ 176 ರನ್ ಸಿಡಿಸಿದೆ. ಗೆಲುವಿಗೆ ಇನ್ನು 79 ಎಸೆತದಲ್ಲಿ 110 ರನ್‌ಗಳ ಅವಶ್ಯಕತೆ ಇದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತ್ತು. ಶಿಖರ್ ಧವನ್ 127  ಹಾಗೂ ಅಂಬಾಟಿ ರಾಯುಡು 60 ರನ್ ಕಾಣಿಕೆ ನೀಡಿದ್ದರು.

Follow Us:
Download App:
  • android
  • ios