Asianet Suvarna News Asianet Suvarna News

ಏಷ್ಯಾಕಪ್ 2018: ಕೊಹ್ಲಿ ಅನುಪಸ್ಥಿತಿಯಿಂದ ಕೋಟಿ ಕೋಟಿ ನಷ್ಟ!

ಏಷ್ಯಾಕಪ್ ಟೂರ್ನಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರೋದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಟೂರ್ನಿ ಅಧೀಕೃತ ಪ್ರಸಾರದ ಹಕ್ಕು ಪಡೆದಿರುವ  ಸ್ಟಾರ್ ಕಂಪೆನಿಗೂ  ನಷ್ಟವಾಗಿದೆ.  ಕೊಹ್ಲಿ ಅನುಪಸ್ಥಿತಿಗೆ ಇದೀಗ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗರಂ ಆಗಿದೆ.

Asia cup 2018 Star India unhappy with Virat Kohlis absence
Author
Bengaluru, First Published Sep 16, 2018, 9:12 PM IST

ದುಬೈ(ಸೆ.16): ಏಷ್ಯಾಕಪ್ ಟೂರ್ನಿಗೆ ಟೀಂ ಇಂಡಿಯಾ ತಂಡ ಪ್ರಕಟಿಸಿದಾಗಲೇ ಅಭಿಮಾನಿಗಳಿಗೆ ನಿರಾಸೆ ಕಾದಿತ್ತು. ಕಾರಣ ನಾಯಕ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಲಾಗಿತ್ತು. ಬದ್ಧವೈರಿ ಪಾಕಿಸ್ತಾನ ವಿರುದ್ಧ ಕೊಹ್ಲಿಯ ಬ್ಯಾಟಿಂಗ್ ಪ್ರದರ್ಶನಕ್ಕೆ ಕಾದು ಕುಳಿತಿದ್ದ ಅಭಿಮಾನಿಗಳಿಗೆ ನಿರಾಸೆಯಾಗಿತ್ತು.

ಏಷ್ಯಾಕಪ್ ಟೂರ್ನಿಯಿಂದ ವಿರಾಟ್ ಕೊಹ್ಲಿಗೆ ವಿಶ್ರಾಂತಿ ನೀಡಿರೋದು ಕೇವಲ ಅಭಿಮಾನಿಗಳಿಗೆ ಮಾತ್ರವಲ್ಲ, ಟೂರ್ನಿ ಅಧೀಕೃತ ಪ್ರಸಾರದ ಹಕ್ಕು ಪಡೆದಿರುವ  ಸ್ಟಾರ್ ಕಂಪೆನಿಗೂ  ನಷ್ಟವಾಗಿದೆ.  ಕೊಹ್ಲಿ ಅನುಪಸ್ಥಿತಿಗೆ ಇದೀಗ ಸ್ಟಾರ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಗರಂ ಆಗಿದೆ.

ವಿಶ್ವದ ಸೂಪರ್ ಸ್ಟಾರ್ ಕ್ರಿಕೆಟರ್ ವಿರಾಟ್ ಕೊಹ್ಲಿ.ಇದೀಗ ಐಕಾನ್ ಕ್ರಿಕೆಟಿಗ ಏಷ್ಯಾಕಪ್ ಟೂರ್ನಿಯಲ್ಲಿ ಇಲ್ಲದೇ ಇರುವುದು ಜಾಹೀರಾತು ಹಾಗೂ ಇತರ ವಾಣಿಜ್ಯ ಒಪ್ಪಂದಗಳಿಗೆ ಧಕ್ಕೆಯಾಗಿದೆ. ಇದರಿಂದ ಕೋಟಿ ಕೋಟಿ ನಷ್ಟವಾಗಲಿದೆ. ಇಷ್ಟೇ ಅಲ್ಲ ಪ್ರತಿಷ್ಠಿತ ಟೂರ್ನಿಗೆ ಪ್ರತಿ ತಂಡಗಳು ಸ್ಟಾರ್ ಆಟಗಾರರನ್ನ ಕೈಬಿಡಬಾರದು ಎಂದು ಸ್ಟಾರ್ ಈಗಾಗಲೇ ಏಷ್ಯಾ ಕ್ರಿಕೆಟ್ ಕೌನ್ಸಿಲ್‌ಗೆ ಪತ್ರ ಬರೆದಿದೆ ಎಂದು ಮುಂಬೈ ಮಿರರ್ ವರದಿ ಮಾಡಿದೆ.

ಕೊಹ್ಲಿ ಅನುಪಸ್ಥಿತಿಯಿಂದ ಕಂಪೆನಿಗಳು, ಜಾಹೀರಾತದಾರರು ಒಪ್ಪಂದದಿಂದ ಹಿಂದೆ ಸರಿಯುತ್ತಿದ್ದಾರೆ. ಇದರಿಂದ ಸ್ಟಾರ್‌ ಕೋಟಿ ಕೋಟಿ ರೂಪಾಯಿ ನಷ್ಟ ಅನುಭವಿಸಲಿದೆ ಎಂದು ಸ್ಟಾರ್ ಹೇಳಿದೆ. ಇಷ್ಟೇ ಅಲ್ಲ ಕೊಹ್ಲಿ ಕಣದಲ್ಲಿದ್ದರೆ, ವೀಕ್ಷಕರ ಸಂಖ್ಯೆಯೂ ಏರಿಕೆಯಾಗಲಿದೆ. ಆದರೆ ಕೊಹ್ಲಿ ಅನುಪಸ್ಥಿತಿಯಿಂದ ಪಂದ್ಯ ವೀಕ್ಷಕರ ಸಂಖ್ಯೆ ಕೂಡ ಇಳಿಮುಖವಾಗಲಿದೆ ಎಂದಿದೆ.

Follow Us:
Download App:
  • android
  • ios