ಕೊನೆಗೂ ಲಂಕಾ ತಂಡ ಕೂಡಿಕೊಂಡ ಮಾಲಿಂಗ

https://static.asianetnews.com/images/authors/56bf5dcb-7868-50e0-b2d0-38391a34809d.jpg
First Published 2, Sep 2018, 11:23 AM IST
Asia Cup 2018 Sri Lanka recalls Lasith Malinga for Asia Cup
Highlights

35 ವರ್ಷ ವಯಸ್ಸಿನ ಮಾಲಿಂಗ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ಆ ಬಳಿಕ ಮಾಲಿಂಗ ಅವರನ್ನು ಲಂಕಾ ತಂಡ ಕಡೆಗಣಿಸಿತ್ತು. ಮಾಲಿಂಗ ಏಕದಿನ ಕ್ರಿಕೆಟ್’ನಲ್ಲಿ 301 ವಿಕೆಟ್ ಕಬಳಿಸಿದ್ದರೆ, ಟಿ20 ಕ್ರಿಕೆಟ್’ನಲ್ಲಿ 90 ವಿಕೆಟ್ ಪಡೆದಿದ್ದಾರೆ.

ಕೊಲಂಬೊ[ಸೆ.02]: ನಿವೃತ್ತಿ ಯೋಚನೆಯಲ್ಲಿದ್ದ ವೇಗಿ ಲಸಿತ್ ಮಾಲಿಂಗ ಮತ್ತೆ ಶ್ರೀಲಂಕಾ ತಂಡಕ್ಕೆ ಮರಳಿದ್ದಾರೆ. ಹೌದು, ಮುಂಬರುವ ಏಷ್ಯಾ ಕಪ್‌ಗಾಗಿ ಮಾಲಿಂಗ ಲಂಕಾ ತಂಡದಲ್ಲಿ ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ.

ಸುಮಾರು 1 ವರ್ಷಗಳ ಬಳಿಕ ಮಾಲಿಂಗ ಮತ್ತೆ ಲಂಕಾ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. 16 ಸದಸ್ಯರ ಶ್ರೀಲಂಕಾ ತಂಡದಲ್ಲಿ ಮಾಲಿಂಗ ಕೂಡ ಒಬ್ಬರಾಗಿದ್ದಾರೆ. 35 ವರ್ಷ ವಯಸ್ಸಿನ ಮಾಲಿಂಗ ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ಏಕದಿನ ಪಂದ್ಯವನ್ನಾಡಿದ್ದರು. ಆ ಬಳಿಕ ಮಾಲಿಂಗ ಅವರನ್ನು ಲಂಕಾ ತಂಡ ಕಡೆಗಣಿಸಿತ್ತು. ಮಾಲಿಂಗ ಏಕದಿನ ಕ್ರಿಕೆಟ್’ನಲ್ಲಿ 301 ವಿಕೆಟ್ ಕಬಳಿಸಿದ್ದರೆ, ಟಿ20 ಕ್ರಿಕೆಟ್’ನಲ್ಲಿ 90 ವಿಕೆಟ್ ಪಡೆದಿದ್ದಾರೆ.

ಆ್ಯಂಜೆಲೋ ಮ್ಯಾಥ್ಯೂಸ್‌ಗೆ ತಂಡದ ಜವಾಬ್ದಾರಿ ವಹಿಸಲಾಗಿದೆ. ಸೆಪ್ಟೆಂಬರ್ 15ರಂದು ಉದ್ಘಾಟನಾ ಪಂದ್ಯದಲ್ಲಿ ಬಾಂಗ್ಲಾದೇಶ-ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿವೆ

loader