ದುಬೈ[ಸೆ.18]: ಗಬ್ಬರ್ ಸಿಂಗ್ ಖ್ಯಾತಿಯ ಶಿಖರ್ ಧವನ್ ಹಾಂಕಾಂಗ್ ವಿರುದ್ಧ ಭರ್ಜರಿ ಶತಕ ಸಿಡಿಸುವ ಮೂಲಕ ಯುವರಾಜ್ ಸಿಂಗ್ ಅವರ ಶತಕಗಳ ದಾಖಲೆಯನ್ನು ಸರಿಗಟ್ಟಿದ್ದಾರೆ. 

ಏಷ್ಯಾಕಪ್’ನಲ್ಲಿ ಹಾಂಕಾಂಗ್ ವಿರುದ್ಧ ಮೊದಲ ಪಂದ್ಯವಾಡುತ್ತಿರುವ ಭಾರತಕ್ಕೆ ಧವನ್ ಉತ್ತಮ ಅಡಿಪಾಯ ಹಾಕಿದ್ದಾರೆ. ಕೇವಲ 105 ಎಸೆತಗಳಲ್ಲಿ ಶತಕ ಸಿಡಿಸಿ ಸಂಭ್ರಮಿಸಿದರು. ವೃತ್ತಿ ಜೀವನದ 106ನೇ ಪಂದ್ಯವಾಡುತ್ತಿರುವ ಧವನ್ 14 ಶತಕ ಪೂರೈಸಿದ್ದಾರೆ. ಇನ್ನು ಯುವರಾಜ್ ಸಿಂಗ್ 304 ಪಂದ್ಯಗಳಲ್ಲಿ 14 ಶತಕ ಗಳಿಸಿದ್ದಾರೆ.

ಶಿಖರ್ ಧವನ್’ಗೆ ಉತ್ತಮ ಸಾಥ್ ಕೊಟ್ಟ ಅಂಬಟಿ ರಾಯುಡು 60 ರನ್ ಬಾರಿಸಿ ವಿಕೆಟ್ ಒಪ್ಪಿಸಿದರು. ಇದೀಗ ಭಾರತ 36 ಓವರ್’ಗಳಲ್ಲಿ 2 ವಿಕೆಟ್ ನಷ್ಟಕ್ಕೆ 198 ರನ್ ಬಾರಿಸಿದೆ.