ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಮೊದಲ ವಿಕೆಟ್’ಗೆ 45 ರನ್’ಗಳ ಜತೆಯಾಟವಾಡಿತು. ರೋಹಿತ್ ಶರ್ಮಾ 23 ರನ್ ಬಾರಿಸಿ ಎಹಸಾನ್ ಖಾನ್’ಗೆ ವಿಕೆಟ್ ಒಪ್ಪಿಸಿದರು.
ದುಬೈ[ಸೆ.18]: ಏಷ್ಯಾಕಪ್’ನಲ್ಲಿ ಭಾರತ ಶುಭಾರಂಭ ಮಾಡುವ ಮುನ್ನೂಚನೆ ನೀಡಿದ್ದು, ಮೊದಲು ಬ್ಯಾಟಿಂಗ್ ಆರಂಭಿಸಿರುವ ಟೀಂ ಇಂಡಿಯಾ 22 ಓವರ್ ಮುಕ್ತಾಯಕ್ಕೆ ಒಂದು ವಿಕೆಟ್ ನಷ್ಟಕ್ಕೆ 109 ರನ್ ಬಾರಿಸಿದೆ. ಶಿಖರ್ ಧವನ್ 26ನೇ ಅರ್ಧಶತಕ ಪೂರೈಸಿದ್ದಾರೆ.
ಟಾಸ್ ಸೋತರೂ ಮೊದಲು ಬ್ಯಾಟಿಂಗ್ ಮಾಡುವ ಅವಕಾಶ ಪಡೆದ ಟೀಂ ಇಂಡಿಯಾ ಮೊದಲ ವಿಕೆಟ್’ಗೆ 45 ರನ್’ಗಳ ಜತೆಯಾಟವಾಡಿತು. ರೋಹಿತ್ ಶರ್ಮಾ 23 ರನ್ ಬಾರಿಸಿ ಎಹಸಾನ್ ಖಾನ್’ಗೆ ವಿಕೆಟ್ ಒಪ್ಪಿಸಿದರು. ಎರಡನೇ ವಿಕೆಟ್’ಗೆ ಜತೆಯಾದ ಅಂಬಟಿ ರಾಯುಡು-ಶಿಖರ್ ಧವನ್ ಜೋಡಿ ಉತ್ತಮ ಜತೆಯಾಟ ಮುಂದುವರೆಸಿದ್ದಾರೆ.
ಇಂಗ್ಲೆಂಡ್ ಪ್ರವಾಸದ ವೇಳೆ ಟೆಸ್ಟ್ ಸರಣಿಯಲ್ಲಿ ಒಂದು ಅರ್ಧಶತಕ ಬಾರಿಸಲು ವಿಫಲವಾಗಿದ್ದ ಧವನ್ ಕ್ರಿಕೆಟ್ ಹಸುಳೆ ಹಾಂಕಾಂಗ್ ತಂಡದ ಬೌಲರ್’ಗಳನ್ನು ಮನಬಂದಂತೆ ದಂಡಿಸಿದರು. ಧವನ್ 64 ಎಸೆತಗಳಲ್ಲಿ 10 ಬೌಂಡರಿಗಳ ನೆರವಿನಿಂದ 64 ರನ್ ಬಾರಿಸಿದ್ದರೆ, ಅಂಬಟಿ ರಾಯುಡು 45 ಎಸೆತಗಳಲ್ಲಿ 1 ಬೌಂಡರಿ ಹಾಗೂ 1 ಸಿಕ್ಸರ್’ಗಳ ನೆರವಿನಿಂದ 36 ರನ್ ಬಾರಿಸಿದ್ದಾರೆ.
