Asianet Suvarna News Asianet Suvarna News

ಏಷ್ಯಾಕಪ್ 2018: ಮಿಥುನ್-ರಹೀಮ್ ಜೊತೆಯಾಟಕ್ಕೆ ಬ್ರೇಕ್!

ದುಬೈನ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ 2018ರ ಏಷ್ಯಾಕಪ್ ಟೂರ್ನಿ ಉದ್ಘಾಟನೆಗೊಂಡಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ ಹಾಗೂ ಬಾಂಗ್ಲಾದೇಶ ಹೋರಾಟ ಆರಂಭಿಸಿದೆ. ಇಲ್ಲಿದೆ ಮೊದಲ ಪಂದ್ಯದ ಅಪ್‌ಡೇಟ್ಸ್

Asia cup 2018 Rahim and Mithun half centuries help bangaldesh to comeback
Author
Bengaluru, First Published Sep 15, 2018, 7:10 PM IST

ದುಬೈ(ಸೆ.15): ಏಷ್ಯಾಕಪ್ ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಆರಂಭಿಕ ಆಘಾತದಿಂದ ಚೇತರಿಸಿಕೊಂಡಿದ್ದ ಬಾಂಗ್ಲಾದೇಶ ಇದೀಗ ಮತ್ತೆರಡು ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ. 

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಬಾಂಗ್ಲಾದೇಶ, ಲಂಕಾ ವೇಗಿ ಲಸಿತ್ ಮಲಿಂಗಾ ದಾಳಿಗೆ ತತ್ತರಿಸಿತು. ಲಿಟ್ಟನ್ ದಾಸ್ ಹಾಗೂ ಶಕೀಬ್ ಅಲ್ ಹಸನ್ ಶೂನ್ಯಕ್ಕೆ ಔಟಾದರು. ಈ ಮೂಲಕ ಬಾಂಗ್ಲಾದೇಶ 1 ರನ್ ಗಳಿಸುವಷ್ಟರಲ್ಲೇ 2 ವಿಕೆಟ್ ಕಳೆದುಕೊಂಡಿತು.

ಆರಂಭದಲ್ಲೇ ಹಿನ್ನಡೆ ಅನುಭವಿಸಿದ ತಂಡಕ್ಕೆ ಮುಶ್ಫಿಕರ್ ರಹೀಮ್ ಹಾಗೂ ಮೊಹಮ್ಮದ್ ಮಿಥುನ್ ಆಸರೆಯಾದರು. ಇಬ್ಬರು ಅರ್ಧಶತಕ ಸಿಡಿಸಿದರು. ಈ ಜೊತೆಯಾಟಕ್ಕೆ ಮಲಿಂಗ ಬ್ರೇಕ್ ನೀಡಿದರು.

ಮಿಥುನ್ 63 ರನ್ ಸಿಡಿಸಿ ಔಟಾದರು. ಇನ್ನು ಮಹಮ್ಮದುಲ್ಲಾ ಕೇವಲ 1 ರನ್ ಗಳಿಸಿ ನಿರ್ಗಮಿಸಿದರು. ಈ ಮೂಲಕ ಬಾಂಗ್ಲಾದೇಶ 4 ವಿಕೆಟ್ ನಷ್ಟಕ್ಕೆ 140  ರನ್ ಸಿಡಿಸಿದೆ.

 

Follow Us:
Download App:
  • android
  • ios