Asianet Suvarna News Asianet Suvarna News

ಲೋಕಸಭಾ ಚುನಾವಣೆ 2024: 3ನೇ ಹಂತದ ಚುನಾವಣೆ ಇಂದು

12 ರಾಜ್ಯಗಳ 95ನೇ ಸ್ಥಾನಗಳಿಗೆ ಲೋಕಸಭೆಗೆ ಮೂರನೇ ಹಂತದ ಚುನಾವಣೆ ನಡೆಯಲಿದೆ. 95 ಸ್ಥಾನಗಳಿಗೆ ಒಟ್ಟು 1351 ಜನರು ಸ್ಪರ್ಧಿಸಿದ್ದಾರೆ. ಈ ಪೈಕಿ ಗುಜರಾತ್‌ನಲ್ಲಿ ಎಲ್ಲ 26 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಗರಿಷ್ಠ 658 ಜನರು ಸ್ಪರ್ಧಿಸಿದ್ದರೆ, ಮಹಾರಾಷ್ಟ್ರದಲ್ಲಿ ಮಂಗಳವಾರ ಚುನಾವಣೆ ನಡೆವ 11 ಸ್ಥಾನಕ್ಕೆ 519 ಜನರು ಸ್ಪರ್ಧಿಸಿದ್ದಾರೆ.
 

3rd Phase of Lok Sabha Elections 2024 Voting will be held on May 07 in India grg
Author
First Published May 7, 2024, 6:24 AM IST

ನವದೆಹಲಿ(ಮೇ.07): ಮಂಗಳವಾರ 12 ರಾಜ್ಯಗಳ 95ನೇ ಸ್ಥಾನಗಳಿಗೆ ಲೋಕಸಭೆಗೆ ಮೂರನೇ ಹಂತದ ಚುನಾವಣೆ ನಡೆಯಲಿದೆ.

95 ಸ್ಥಾನಗಳಿಗೆ ಒಟ್ಟು 1351 ಜನರು ಸ್ಪರ್ಧಿಸಿದ್ದಾರೆ. ಈ ಪೈಕಿ ಗುಜರಾತ್‌ನಲ್ಲಿ ಎಲ್ಲ 26 ಸ್ಥಾನಗಳಿಗೆ ಏಕಕಾಲಕ್ಕೆ ಚುನಾವಣೆ ನಡೆಯಲಿದ್ದು, ಗರಿಷ್ಠ 658 ಜನರು ಸ್ಪರ್ಧಿಸಿದ್ದರೆ, ಮಹಾರಾಷ್ಟ್ರದಲ್ಲಿ ಮಂಗಳವಾರ ಚುನಾವಣೆ ನಡೆವ 11 ಸ್ಥಾನಕ್ಕೆ 519 ಜನರು ಸ್ಪರ್ಧಿಸಿದ್ದಾರೆ.

ವಿಜಯಪುರ ಲೋಕಸಭಾ ಚುನಾವಣೆ, ಮತದಾನಕ್ಕೆ ಜಿಲ್ಲಾಡಳಿತ ಸಜ್ಜು: ಡಿಸಿ ಟಿ.ಭೂಬಾಲನ್ ಹೇಳಿದಿಷ್ಟು..

ಮೂರನೇ ಹಂತದ ಚುನಾವಣೆಯೊಂದಿಗೆ ಲೋಕಸಭೆಯ ಒಟ್ಟು 543 ಸ್ಥಾನಗಳ ಪೈಕಿ 284 ಸ್ಥಾನಗಳ ಚುನಾವಣೆ ಮುಕ್ತಾಯಗೊಳ್ಳಲಿದೆ. ಇನ್ನೂ 4 ಹಂತದ ಚುನಾವಣೆ ಬಾಕಿ ಇದ್ದು ಜೂ.4ರಂದು ಫಲಿತಾಂಶ ಪ್ರಕಟಗೊಳ್ಳಲಿದೆ.
ಪ್ರಮುಖರು:

ಕೇಂದ್ರ ಗೃಹ ಸಚಿವ ಅಮಿತ್‌ ಶಾ, ಕೇಂದ್ರ ಸಚಿವ ಜ್ಯೋತಿರಾಧಿತ್ಯ ಸಿಂಧಿಯಾ, ಮಾಜಿ ಸಿಎಂ ಶಿವರಾಜ್‌ ಸಿಂಗ್‌ ಚೌಹಾಣ್‌, ಸುಪ್ರಿಯಾ ಸುಳೆ, ಡಿಂಪಲ್‌ ಯಾದವ್‌ ಚುನಾವಣೆಯ ಕಣದಲ್ಲಿರುವ ಪ್ರಮುಖ ಸ್ಪರ್ಧಾಳುಗಳಾಗಿದ್ದಾರೆ.

ಎಲ್ಲೆಲ್ಲಿ ಚುನಾವಣೆ?:

ಕರ್ನಾಟಕ, ಬಿಹಾರ, ಮಧ್ಯಪ್ರದೇಶ, ಮಹಾರಾಷ್ಟ್ರ, ಉತ್ತರಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಢ, ಗೋವಾ, ಗುಜರಾತ್‌, ದಾದ್ರಾ ಮತ್ತು ನಗರ್‌ ಹವೇಲಿ, ದಮನ್ ಮತ್ತು ದಿಯು,

Follow Us:
Download App:
  • android
  • ios