ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ನಡುವಿನ ಪಂದ್ಯ ಅಭಿಮಾನಿಗಳ ಕುತೂಹಲ ಹೆಚ್ಚಿಸಿದೆ. ದಿಟ್ಟ ಹೋರಾಟ ನೀಡುತ್ತಿದ್ದ ಹಾಂಕ್ ಕಾಂಗ್ ಬಲಿಷ್ಠ ಪಾಕ್ ವಿರುದ್ಧ ದಾಳಿಗೆ ಕುಸಿತ ಕಂಡಿದೆ. ಇಲ್ಲಿದೆ ಪಂದ್ಯದ ಅಪ್‌ಡೇಟ್ಸ್

ದುಬೈ(ಸೆ.16): ಏಷ್ಯಾಕಪ್ ಟೂರ್ನಿಯ ದ್ವಿತೀಯ ದಿನ ಪಾಕಿಸ್ತಾನ ಹಾಗೂ ಹಾಂಗ್ ಕಾಂಗ್ ತಂಡ ಹೋರಾಟ ನಡೆಸುತ್ತಿದೆ. ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಹಾಂಕ್ ಕಾಂಗ್ ,ಎದುರಾಳಿ ಪಾಕಿಸ್ತಾ ದಾಳಿಗೆ ಕುಸಿತ ಕಂಡಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

Scroll to load tweet…

ನಿಝಾಕತ್ ಖಾನ್ 13, ಅಂಶುಮಾನ್ ರಾತ್ 19 ರನ್ ಸಿಡಿಸಿ ಔಟಾದರು. ಬಾಬರ್ ಹಯಾತ್ ಹಾಗೂ ಕ್ರಿಸ್ಟೋಪರ್ ಕಾರ್ಟರ್ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ನೀಡಲಿಲ್ಲ. ಕಿಂಚಿತ್ ಶಾ ತಂಡಕ್ಕೆ ಆಸರೆಯಾಗಿದ್ದಾರೆ. ಹಾಂಕ್ ಕಾಂಗ್ 97 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದೆ.

ಅದ್ಬುತ ಬೌಲಿಂಗ್ ದಾಳಿ ಸಂಘಟಿಸಿದ ಪಾಕಿಸ್ತಾನ ಆರಂಭದಲ್ಲೇ ಮೇಲುಗೈ ಸಾಧಿಸುವಲ್ಲಿ ಯಶಸ್ವಿಯಾಗಿದೆ. ಪಾಕಿಸ್ತಾನದ ಶದಬ್ ಖಾನ್ 2, ಹಸನ್ ಆಲಿ , ಫಹೀಮ್ ಅಶ್ರಫ್ ಹಾಗೂ ಉಸ್ಮಾನ್ ಖಾನ್ ತಲಾ 1 ವಿಕೆಟ್ ಕಬಳಿಸಿದ್ದಾರೆ.