ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿ ಮೊದಲ ಪಂದ್ಯ ಸುಲಭ ತುತ್ತು ಅಂದುಕೊಂಡಿದ್ದ ಟೀಂ ಇಂಡಿಯಾಗೆ ಕ್ರಿಕೆಟ್ ಶಿಶು ಹಾಂಕಾಂಗ್ ಚಳಿ ಬಿಡಿಸಿದೆ. ಭಾರತ ನೀಡಿರುವ 286 ರನ್ ಟಾರ್ಗೆಟ್ ಬೆನ್ನಟ್ಟುತ್ತಿರುವ ಹಾಂಕಾಂಗ್ ಶತಕದ ಜೊತೆಯಾಟ ನೀಡಿದೆ.

ಆರಂಭಿಕ ನಿಜಾಕತ್ ಖಾನ್  ಹಾಗೂ ಅಂಶುಮಾನ್ ರಾತ್ ಜೊತೆಯಾಟಕ್ಕೆ ಟೀಂ ಇಂಡಿಯಾ ಬೆಚ್ಚಿ ಬಿದ್ದಿದೆ. ವಿಕೆಟ್ ಕಬಳಿಸಿದ ರೋಹಿತ್ ಸೈನ್ಯ ಕಠಿಣ ಹೋರಾಟ ನಡೆಸುತ್ತಿದೆ. ಆದರೆ ಹಾಂಕಾಂಗ್ ಭಾರತಕ್ಕೆ ಶಾಕ್ ನೀಡಲು ಮುಂದಾಗಿದೆ.

ನಿಜಾಕತ್ ಆಕರ್ಷಕ ಅರ್ಧಶತಕ ಸಿಡಿಸಿ ಇದೀಗ ಶತದತ್ತ ಮುನ್ನಗ್ಗುತ್ತಿದ್ದರೆ, ಅಂಶುಮಾನ್ ಹಾಫ್ ಸೆಂಚುರಿ ಸನಿಹದಲ್ಲಿದ್ದಾರೆ. ಸದ್ಯ ಹಾಂಕಾಂಗ್ ವಿಕೆಟ್ ನಷ್ಟವಿಲ್ಲದೆ 124 ರನ್ ಸಿಡಿಸಿದೆ.  ಈ ಮೂಲಕ ಟೆಸ್ಟ್ ಮಾನ್ಯತೆ ಪಡೆದ ದೇಶದ ವಿರುದ್ದ ಗರಿಷ್ಠ ಆರಂಭಿಕ ಜೊತೆಯಾಟ ನೀಡಿದ ದಾಖಲೆ ಬರೆದಿದೆ. ಇದೀಗ ಹಾಂಕಾಂಗ್ ಗೆಲುವಿಗೆ 162 ರನ್ ಮಾತ್ರ ಬೇಕಿದೆ.

ಇದಕ್ಕೂ ಮೊದಲು ಬ್ಯಾಟಿಂಗ್ ಮಾಡಿದ ಭಾರತ 7 ವಿಕೆಟ್ ನಷ್ಟಕ್ಕೆ 285 ರನ್ ಸಿಡಿಸಿತ್ತು. ಶಿಖರ್ ಧವನ್ 127  ಹಾಗೂ ಅಂಬಾಟಿ ರಾಯುಡು 60 ರನ್ ಕಾಣಿಕೆ ನೀಡಿದ್ದರು.