ಏಷ್ಯಾಕಪ್ ಟೂರ್ನಿಯಲ್ಲಿ ಭಾರತ ಹಾಗೂ ಪಾಕಿಸ್ತಾನ ಹೋರಾಟ ಫೈನಲ್ ಸ್ವರೂಪ ಪಡೆದುಕೊಂಡಿದೆ. ಇಲ್ಲಿ ಯಾರೂ ಕೂಡ ಸೋಲನ್ನ ಸಹಿಸಲ್ಲ. ಆದರೆ ಮಹತ್ವದ ಪಂದ್ಯಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಆಘಾತ ಎದುರಾಗಿದೆ.

ದುಬೈ(ಸೆ.18): ಏಷ್ಯಾಕಪ್ ಟೂರ್ನಿಯಲ್ಲಿ ಶುಭಾರಂಭ ಮಾಡಿರುವ ಪಾಕಿಸ್ತಾನ ಇದೀಗ ಟೀಂ ಇಂಡಿಯಾ ವಿರುದ್ಧದ ಹೋರಾಟಕ್ಕೆ ಸಿದ್ಧತೆ ಆರಂಭಿಸಿದೆ. ಚಾಂಪಿಯನ್ಸ್ ಟ್ರೋಫಿ ಫೈನಲ್ ಪಂದ್ಯದಲ್ಲಿ ಭಾರತವನ್ನ ಬಗ್ಗುಬಡಿದ ಪಾಕ್ ಇದೀಗ ಏಷ್ಯಾಕಪ್ ಟೂರ್ನಿಯಲ್ಲೂ ಗೆಲುವಿನ ವಿಶ್ವಾಸದಲ್ಲಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೀಂ ಇಂಡಿಯಾ ವಿರುದ್ಧ ಮಹತ್ವದ ಪಂದ್ಯ ಆರಂಭಕ್ಕೂ ಮುನ್ನ ಪಾಕಿಸ್ತಾನ ತಂಡಕ್ಕೆ ಮಾರ್ಗದರ್ಶಕರ ನೆರವಿಲ್ಲದೆ ಕಣಕ್ಕಿಳಿಯಬೇಕಿದೆ. ಪಾಕಿಸ್ತಾನ ವೇಗದ ಬೌಲಿಂಗ್ ಕೋಚ್ ಅಜರ್ ಮೆಹಮೂದ್ ದಿಢೀರ್ ಪಾಕಿಸ್ತಾನಕ್ಕೆ ವಾಪಾಸ್ಸಾಗಿದ್ದಾರೆ.

ಬೌಲಿಂಗ್ ಕೋಚ್ ಅಜರ್ ಸಂಬಂಧಿ ಸಾವಿನಿಂದ ಏಷ್ಯಾಕಪ್ ಟೂರ್ನಿಯಿಂದ ದಿಢೀರ್ ವಾಪಾಸ್ಸಾಗಿದ್ದಾರೆ. ಸೂಪರ್ ಫೋರ್ ಪಂದ್ಯದ ವೇಳೆ ಅಜರ್ ಮತ್ತೆ ಪಾಕಿಸ್ತಾನ ತಂಡ ಸೇರಿಕೊಳ್ಳಲಿದ್ದಾರೆ. ಆದರೆ ಭಾರತ ವಿರುದ್ಧದ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.