ದುರ್ಹಾಮ್ ತಂಡದ ವಿರುದ್ಧ ಅಶ್ವಿನ್ 130 ಎಸೆತಗಳಲ್ಲಿ 82 ರನ್ ಸಿಡಿಸಿ ಸಂಭ್ರಮಿಸಿದರು. ಅಶ್ವಿನ್ ಅರ್ಧಶತಕದ ನೆರವಿನಿಂದ ವರ್ಸೆ’ಸ್ಟರ್’ಶೈರ್ ಮೊದಲ ಇನಿಂಗ್ಸ್’ನಲ್ಲಿ 335 ರನ್ ಕಲೆ ಹಾಕಿದೆ.

ಲಂಡನ್(ಸೆ.26): ಟೀಂ ಇಂಡಿಯಾ ಅನುಭವಿ ಆಟಗಾರ ಆರ್. ಅಶ್ವಿನ್ ಕೌಂಟಿ ಕ್ರಿಕೆಟ್’ನಲ್ಲಿ ವರ್ಸೆ’ಸ್ಟರ್’ಶೈರ್ ತಂಡದ ಪರ ಚೊಚ್ಚಲ ಅರ್ಧಶತಕ ಸಿಡಿಸಿದ್ದಾರೆ. ಈ ಮೂಲಕ ಶೀಘ್ರದಲ್ಲೇ ಟೀಂ ಇಂಡಿಯಾಗೆ ಕಮ್’ಬ್ಯಾಕ್ ಮಾಡುವ ಸ್ಪಷ್ಟ ಸೂಚನೆ ನೀಡಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ದುರ್ಹಾಮ್ ತಂಡದ ವಿರುದ್ಧ ಅಶ್ವಿನ್ 130 ಎಸೆತಗಳಲ್ಲಿ 82 ರನ್ ಸಿಡಿಸಿ ಸಂಭ್ರಮಿಸಿದರು. ಅಶ್ವಿನ್ ಅರ್ಧಶತಕದ ನೆರವಿನಿಂದ ವರ್ಸೆ’ಸ್ಟರ್’ಶೈರ್ ಮೊದಲ ಇನಿಂಗ್ಸ್’ನಲ್ಲಿ 335 ರನ್ ಕಲೆ ಹಾಕಿದೆ.

ಅಶ್ವಿನ್ ಅವರನ್ನು ಆಸ್ಟ್ರೇಲಿಯಾ ವಿರುದ್ಧದ ಏಕದಿನ ಪಂದ್ಯದಿಂದ ಕೈಬಿಡಲಾಗಿತ್ತು. ಕಳೆದ ತಿಂಗಳಷ್ಟೇ ಕೌಂಟಿ ಕ್ರಿಕೆಟ್’ಗೆ ಪದಾರ್ಪಣೆ ಮಾಡಿದ್ದ ಅಶ್ವಿನ್ ಅರ್ಧಶತಕ ಮಾತ್ರವಲ್ಲದೇ, ಬೌಲಿಂಗ್’ನಲ್ಲಿ 13 ವಿಕೆಟ್ ಪಡೆದು ಟೀಂ ಇಂಡಿಯಾ ಆಯ್ಕೆ ಸಮಿತಿಗೆ ನಾನೊಬ್ಬ ಉಪಯುಕ್ತ ಆಲ್ರೌಂಡರ್ ಎನ್ನುವ ಸ್ಪಷ್ಟ ಸಂದೇಶವನ್ನು ನೀಡಿದ್ದಾರೆ.