ಈತ ಟೀಂ ಇಂಡಿಯಾ ಕಂಡ ಅದ್ಭುತ ಬೌಲರ್. ಕಳೆದ 18 ವರ್ಷದಿಂದ ಅಂತಾರಾಷ್ಟ್ರೀಯ ಕ್ರಿಕೆಟ್'ನಲ್ಲಿ ಕಾಣಸಿಕೊಂಡ್ರೂ ಆಡಿದಕ್ಕಿಂತ ಅವಕಾಶಕ್ಕಾಗಿ ಕಾದು ಕುಳಿತ್ತಿದ್ದೇ ಹೆಚ್ಚು. ಆದರೆ ಈಗ ಕಾಯುವಿಕೆಗೆ ಫುಲ್ ಸ್ಟಾಪ್ ಇಡಲು ಹೊರಟಿದ್ದಾನೆ ಮಹಾನ್ ಬೌಲರ್. ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ಗುಡ್'ಬೈ ಹೇಳಲು ಚಿಂತಿಸುತ್ತಿದ್ದಾನೆ.
ಇನ್ನೂ ಕೆಲವೇ ಕೆಲವೂ ದಿನಗಳಲ್ಲಿ ಟೀಂ ಇಂಡಿಯಾದ ಮಾಸ್ಟರ್ ಪೀಸ್, ಆಂಟಿಕ್ ಪೀಸ್ ಅಂತ ಕರೆಯಿಸಿಕೊಳ್ಳೋ ಮೋಸ್ಟ್ ಎಕ್ಸ್'ಪೀರಿಯನ್ಸಡ್ ಬೌಲರ್ ಆಶೀಶ್ ನೆಹ್ರಾ ಭಾರತದ ಕ್ರಿಕೆಟ್ ಪ್ರೇಮಿಗಳು ದಂಗಾಗುವಂತಹ ಶಾಕಿಂಗ್ ನ್ಯೂಸ್ವೊಂದನ್ನ ಕೊಡಲಿದ್ದಾರೆ. ಆ ಶಾಕಿಂಗ್ ನ್ಯೂಸ್ ಇಡೀ ದೇಶವನ್ನ ಬೇಸರಪಡಿಸಲಿದೆ. ಆ ಶಾಕಿಂಗ್ ಕಮ್ ಬ್ರೇಕಿಂಗ್ ನ್ಯೂಸ್ ಬೇಱವುದು ಅಲ್ಲ. ಅಂತಾರಾಷ್ಟ್ರೀಯ ಕ್ರಿಕೆಟ್ನಿಂದ ನೆಹ್ರಾ ನಿವೃತ್ತಿಯಾಗ್ತಿರೋದು.
ಆಶೀಶ್ ನೆಹ್ರಾ ಸದ್ಯದಲ್ಲೇ ಅಂತಾರಾಷ್ಟ್ರೀಯ ಕ್ರಿಕೆಟ್'ಗೆ ನಿವೃತ್ತಿ ಘೋಷಿಸಲಿದ್ದಾರೆ. ಹೀಗಂತ ನಾವು ಹೇಳುತ್ತಿಲ್ಲ. ಬದಲಿಗೆ ಅವರ ಆಪ್ತ ಮೂಲಗಳು ನೆಹ್ರಾ ಈಗಾಗಲೇ ನಿವೃತ್ತಿ ಘೋಷಿಸಲು ನಿರ್ಧರಿಸಿದ್ದಾರೆ ಎಂದು ಹೇಳಿವೆ. ಹಾಗಾದಲ್ಲಿ ಸತತ 18 ವರ್ಷಗಳ ಅವರ ವೃತ್ತಿ ಜೀವನ ಅಂತ್ಯಗೊಳ್ಳಲಿದೆ.
18 ವರ್ಷದಲ್ಲಿ ನೆಹ್ರಾ ಏನ್ ಮಾಡಿದ್ದಾರೆ..?: ಆಡಿದಕ್ಕಿಂತ ತಂಡದಿಂದ ಹೊರಗುಳಿದ್ದಿದ್ದೆ ಹೆಚ್ಚು..!

1999ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನೆಹ್ರಾ ಅಂದಿನಿಂದ ಇಂದಿನವರೆಗೆ ಆಡಿರೋದು ಕೇವಲ 17 ಟೆಸ್ಟ್, 120 ಏಕದಿನ ಮತ್ತು 26 ಟಿ20ಗಳನ್ನ ಮಾತ್ರ. ಅವರು ಮೈದಾನದಲ್ಲಿ ಆಡಿದಕ್ಕಿಂತ ಇಂಜುರಿಯಾಗಿ ತಂಡದಿಂದ ಹೊರಗುಳಿದ್ದಿದ್ದೇ ಹೆಚ್ಚು. ನೀವು ನಂಬಲಿಕ್ಕಿಲ್ಲ ಕಳೆದ 18 ವರ್ಷದಲ್ಲಿ ನೆಹ್ರಾ ಬರೊಬ್ಬರಿ 12 ಬಾರಿ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಾರೆ.
ಹೆಚ್ಚು ಕಾಲ ತಂಡದಿಂದ ಹೊರಗುಳಿದ್ದಿದ್ರೂ ನೆಹ್ರಾ ಆಡಿದ್ದಾಗಲೆಲ್ಲಾ ಟೀಂ ಇಂಡಿಯಾ ಪರ ಕಮಾಲ್ ಮಾಡಿದ್ದಾರೆ. 2003 ಮತ್ತು 2011ರ ವಿಶ್ವಕಪ್'ನಲ್ಲಿ ಭಾರತ ಫೈನಲ್'ಗೇರಲು ನೆಹ್ರಾ ಪ್ರಮುಖ ಪಾತ್ರ ವಹಿಸಿದ್ರು. ಅದರಲ್ಲೂ ಎರಡೂ ವಿಶ್ವಕಪ್ ಸೆಮಿಫೈನಲ್ಗಳಲ್ಲಿ ನೆಹ್ರಾನೇ ಹೀರೋ. 2003ರಲ್ಲಿ ಇಂಗ್ಲೆಂಡ್ ವಿರುದ್ಧ ಅಬ್ಬರಿಸಿದ್ರೆ, 2011ರಲ್ಲಿ ಪಾಕಿಸ್ತಾನವನ್ನ ಬಗ್ಗು ಬಡೆದಿದ್ರು. ಉಳಿದಂತೆ ಯಾವಾಗಲೇ ಅವಕಾಶ ಸಿಕ್ಕರೂ ಕಮಾಲ್ ಮಾಡ್ತಿದ್ರು.
ತವರಿನಲ್ಲೇ ನೆಹ್ರಾ ನಿವೃತ್ತಿ ಘೋಷಣೆ..?: ಕಿವೀಸ್ ವಿರುದ್ಧ ಟಿ20 ನೆಹ್ರಾಗೆ ಕೊನೆ ಪಂದ್ಯ..?
ಈಗಾಗಲೇ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಗುಡ್ಬೈ ಹೇಳಲು ನಿರ್ಧರಿಸಿರುವ ನೆಹ್ರಾ ಯಾವಾಗ ಗುಡ್ಬೈ ಹೇಳಬೇಕು ಅಂತಲೂ ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ. ಮುಂದಿನ ನವೆಂಬರ್ 1ರಂದು ನ್ಯೂಜಿಲೆಂಡ್ ವಿರುದ್ಧ ನೆಹ್ರಾ ತವರು ದೆಹಲಿಯಲ್ಲಿ ನಡೆಯಲಿರುವ ಟಿ20 ಪಂದ್ಯದ ವೇಳೆ ತಮ್ಮ ಜನರ ಎದುರೇ ತಮ್ಮ ಕೊನೆಯ ಪಂದ್ಯವಾಡಲು ನಿರ್ಧರಿಸಿದ್ದಾರೆ ಎನ್ನಲಾಗ್ತಿದೆ.
ಸದ್ಯದ ಮಟ್ಟಿಗೆ ಅತೀ ಹಿರಿಯ ವೇಗಿ ಎನ್ನಿಸಿಕೊಂಡಿರೋ ಆಶೀಶ್ ನೆಹ್ರಾ ಸೂಕ್ತ ಸಮಯದಲ್ಲೇ ನಿವೃತ್ತಿ ಘೋಷಿಸಿದ್ದಾರೆ ಅನಿಸುತ್ತಿದೆ. ಕಾರಣ ಮೊನ್ನೆಯಷ್ಟೇ ಬಿಸಿಸಿಐ ಹೊಸ ನಿಯಮ ತಂದಿದೆ. ಅದರಂತೆ ಇನ್ನೂ ಮುಂದೇ ಪ್ರತೀ ಆಟಗಾರನೂ ಆಯ್ಕೆಯಾಗಬೇಕಾದ್ರೂ ಫಿಟ್ನೆ'ಸ್ ಟೆಸ್ಟ್ ಪಾಸ್ ಆಗಲೇಬೇಕು ಅದು ನೆಹ್ರಾಗೆ ಕೊಂಚ ಕಷ್ಟವಾಗಲಿದೆ. ಅಷ್ಟೇ ಅಲ್ಲ ಪದೇಪದೇ ಇಂಜುರಿಯಾಗುತ್ತಿದ್ದಾರೆ. ಇವೆಲ್ಲಾ ಕಾರಣದಿಂದ ನೆಹ್ರಾ ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರ ತೆಗೆದುಕೊಳ್ತಿದ್ದಾರೆ ಅನಿಸ್ತಿದೆ.
ಏನೇ ಆದ್ರೂ, ಒಬ್ಬ ಅದ್ಭುತ ಆಟಗಾರ. ದೇಶಕ್ಕಾಗಿ ತನ್ನ ಜೀವನವನ್ನೇ ಮುಡುಪಾಗಿಟ್ಟ ಒಬ್ಬ ಅದ್ಭುತ ಮನುಷ್ಯ ಇನ್ನೂ ಕೆಲವೇ ಕೆಲವು ದಿನಗಳಲ್ಲಿ ಕೊಂಚ ದೂರ ಸರಿಯಲಿದ್ದಾರೆ. ಆದ್ರೆ ಸಾಮಾಧನಕರ ವಿಷ್ಯ ಅಂದ್ರೆ ನೆಹ್ರಾ ಐಪಿಎಲ್ನಲ್ಲಿ ಇನ್ನೂ ಕೆಲ ಕಾಲ ಕಾಣಿಸಿಕೊಳ್ಳಲಿದ್ದಾರೆ ಅನ್ನೋದು.
