ಮ್ಯಾಂಚೆ​ಸ್ಟರ್‌(ಸೆ.06): ಆಸ್ಪ್ರೇ​ಲಿ​ಯಾದ ಮಾಜಿ ನಾಯಕ ಸ್ಟೀವ್‌ ಸ್ಮಿತ್‌, ಇಂಗ್ಲೆಂಡ್‌ ವಿರುದ್ಧದ ಆ್ಯಷಸ್‌ ಸರ​ಣಿಯ 4ನೇ ಟೆಸ್ಟ್‌ನಲ್ಲಿ ಭರ್ಜರಿ ದ್ವಿಶ​ತಕ ಬಾರಿ​ಸಿ​ದ್ದಾರೆ. ಆಸೀಸ್‌ ಮೊದಲ ಇನ್ನಿಂಗ್ಸ್‌ನಲ್ಲಿ ಬೃಹತ್‌ ಮೊತ್ತ ಕಲೆಹಾಕಿದ್ದು, ಪಂದ್ಯದ ಮೇಲೆ ಹಿಡಿತ ಸಾಧಿ​ಸಿದೆ. 

ಇದನ್ನೂ ಓದಿ: ಕೇವಲ 12 ಮ್ಯಾಚ್: 85ರಿಂದ 3ನೇ ರ‍್ಯಾಂಕ್, ಇದು ಬುಮ್ರಾ ಝಲಕ್..!

 

ಸ್ಮಿತ್‌ ವೃತ್ತಿ​ಬ​ದು​ಕಿ​ನಲ್ಲಿ ಇದು 3ನೇ ದ್ವಿಶ​ತ​ಕವಾಗಿದ್ದು, ಮೂರೂ ದ್ವಿಶ​ತಕಗಳು ಇಂಗ್ಲೆಂಡ್‌ ವಿರು​ದ್ಧವೇ ದಾಖ​ಲಾ​ಗಿ​ರು​ವುದು ವಿಶೇಷ. 3 ವಿಕೆಟ್‌ ನಷ್ಟಕ್ಕೆ 170 ರನ್‌ಗಳಿಂದ 2ನೇ ದಿನ​ದಾಟಕ್ಕಿಳಿದ ಆಸೀಸ್‌ಗೆ ಸ್ಮಿತ್‌ ಆಸರೆಯಾದರು. 310 ಎಸೆತಗಳಲ್ಲಿ 22 ಬೌಂಡರಿ ಹಾಗೂ 2 ಸಿಕ್ಸರ್‌ಗಳೊಂದಿಗೆ ಸ್ಮಿತ್‌ ದ್ವಿಶ​ತಕ ಪೂರೈ​ಸಿ​ದರು. 116 ಓವರ್‌ಗಳಲ್ಲಿ ಆಸ್ಪ್ರೇ​ಲಿಯಾ 7 ವಿಕೆಟ್‌ಗೆ 415 ರನ್‌ ಗಳಿ​ಸಿತು. ನಾಯಕ ಟಿಮ್‌ ಪೈನ್‌ 6ನೇ ವಿಕೆಟ್‌ಗೆ ಸ್ಮಿತ್‌ ಜತೆಗೂಡಿ 135 ರನ್‌ ಜೊತೆ​ಯಾಟವಾಡಿ​ದರು.

ಸ್ಕೋರ್‌: ಆಸ್ಪ್ರೇ​ಲಿಯಾ 116 ಓವರ್‌ಗಳಲ್ಲಿ 415/7 (ಸ್ಮಿತ್‌ 205*, ಪೈನ್‌ 58)