ಮ್ಯಾಂಚೆಸ್ಟರ್‌[ಸೆ.07]: ನಾಯಕ ಜೋ ರೂಟ್‌ ಹಾಗೂ ಆರಂಭಿಕ ರೋರಿ ಬರ್ನ್ಸ್ ಅವರ ಅದ್ಭುತ ಬ್ಯಾಟಿಂಗ್‌ ನೆರವಿನಿಂದ ಆತಿಥೇಯ ಇಂಗ್ಲೆಂಡ್‌, ಆಸ್ಪ್ರೇಲಿಯಾ ವಿರುದ್ಧ ಇಲ್ಲಿ ನಡೆಯುತ್ತಿರುವ ಆ್ಯಷಸ್‌ ಟೆಸ್ಟ್‌ ಸರಣಿಯ 4ನೇ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ತಿರುಗೇಟು ನೀಡುವ ಯತ್ನದಲ್ಲಿದೆ. 

ಆ್ಯಷಸ್ ಟೆಸ್ಟ್: ಸ್ಟೀವ್ ಸ್ಮಿತ್‌ ದಾಖಲೆಯ ದ್ವಿಶ​ತ​ಕ; ಆಸೀಸ್‌ ಬೃಹತ್‌ ಮೊತ್ತ!

3ನೇ ದಿನವಾದ ಶುಕ್ರವಾರ 1 ವಿಕೆಟ್‌ಗೆ 23 ರನ್‌ಗಳಿಂದ ಮೊದಲ ಇನ್ನಿಂಗ್ಸ್‌ ಮುಂದುವರೆಸಿದ ಇಂಗ್ಲೆಂಡ್‌ ಚಹಾ ವಿರಾಮದ ವೇಳೆಗೆ 2 ವಿಕೆಟ್‌ಗೆ 125 ರನ್‌ಗಳಿಸಿತು. ಮಳೆಯಿಂದಾಗಿ ಮೊದಲ ಅವ​ಧಿ​ಯಲ್ಲಿ ಆಟ ನಡೆ​ಯ​ಲಿಲ್ಲ. ಆ ಬಳಿಕ ಬ್ಯಾಟಿಂಗ್ ಮುಂದುವರೆಸಿದ ಇಂಗ್ಲೆಂಡ್ ದಿನದಂತ್ಯಕ್ಕೆ 5 ವಿಕೆಟ್ ಕಳೆದುಕೊಂಡು 200 ರನ್ ಬಾರಿಸಿದೆ. ರೋರಿ ಬರ್ನ್ಸ್ 81 ರನ್ ಬಾರಿಸಿ ವಿಕೆಟ್ ಒಪ್ಪಿಸಿದರೆ, ಜೋ ರೂಟ್ 71 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಆಸೀಸ್ ವೇಗಿ ಜೋಸ್ ಹ್ಯಾಜಲ್’ವುಡ್ 4 ವಿಕೆಟ್ ಪಡೆದು ಮಿಂಚಿದರು.

ಕೆಟ್ಟ ಅಂಪೈರಿಂಗ್‌: ಕ್ರಿಸ್‌, ವಿಲ್ಸನ್‌ ಆ್ಯಷಸ್‌ನಿಂದ ಔಟ್‌!

ಆಸ್ಪ್ರೇಲಿಯಾ ಮೊದಲ ಇನ್ನಿಂಗ್ಸ್‌ನಲ್ಲಿ 8 ವಿಕೆಟ್‌ಗೆ 497 ರನ್‌ಗಳಿಸಿ ಡಿಕ್ಲೇರ್‌ ಮಾಡಿಕೊಂಡಿತ್ತು. ಸ್ಟೀವ್ ಸ್ಮಿತ್ 211 ರನ್ ಬಾರಿಸುವ ಮೂಲಕ ಮತ್ತೊಮ್ಮೆ ತಂಡದ ಪಾಲಿಗೆ ಹೀರೋ ಎನಿಸಿದರು. 

ಸ್ಕೋರ್‌: ಆಸ್ಪ್ರೇಲಿಯಾ 497/8 ಡಿ. 
ಇಂಗ್ಲೆಂಡ್‌ 200/5