ಆ್ಯಷಸ್ ಕದನ: ಡ್ರಾನತ್ತ ಅಂತಿಮ ಟೆಸ್ಟ್
ಆ್ಯಷಸ್ ಸರಣಿಯ ಅಂತಿಮ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡ ಬೃಹತ್ ಮೊತ್ತದತ್ತ ದಾಪುಗಾಲು ಇಟ್ಟಿದೆ. ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 327 ರನ್‌ಗಳ ಮುನ್ನಡೆ ಸಾಧಿಸಿದೆ. ಈ ಕುರಿತಾದ ವರದಿ ಇಲ್ಲಿದೆ ನೋಡಿ...
ಲಂಡನ್(ಸೆ.15): ಆ್ಯಷಸ್ ಸರಣಿ ಬಹುತೇಕ 2-2ರಲ್ಲಿ ಡ್ರಾಗೊಳ್ಳುವತ್ತ ಸಾಗಿದೆ. 5ನೇ ಹಾಗೂ ಅಂತಿಮ ಪಂದ್ಯದ 2ನೇ ಇನ್ನಿಂಗ್ಸ್‌ನಲ್ಲಿ ಇಂಗ್ಲೆಂಡ್ ಬೃಹತ್ ಮುನ್ನಡೆಯತ್ತ ಹೆಜ್ಜೆ ಹಾಕಿದೆ.
ಆ್ಯಷಸ್ ಕದನ: ಆಸೀಸ್ ಮೇಲೆ ಆರ್ಚರ್ ಸವಾರಿ
ಪಂದ್ಯದ 3ನೇ ದಿನವಾದ ಶನಿವಾರ ವಿಕೆಟ್ ನಷ್ಟವಿಲ್ಲದೆ 9 ರನ್‌ಗಳಿಂದ ಆಟ ಮುಂದುವರಿಸಿದ ಇಂಗ್ಲೆಂಡ್, ಜೋ ಡೆನ್ಲಿ (94) ಹಾಗೂ ಬೆನ್ ಸ್ಟೋಕ್ಸ್‌ರ ಅರ್ಧಶತಕಗಳ ನೆರವಿನಿಂದ ಉತ್ತಮ ಸ್ಥಿತಿ ತಲುಪಿತು. ಮೂರನೇ ದಿನದಂತ್ಯಕ್ಕೆ ಇಂಗ್ಲೆಂಡ್ 8 ವಿಕೆಟ್ ಕಳೆದುಕೊಂಡು 313 ರನ್ ಬಾರಿಸಿದ್ದು, ಒಟ್ಟಾರೆ 382 ರನ್’ಗಳ ಮನ್ನಡೆ ಸಾಧಿಸಿದೆ.
ಆಸ್ಪ್ರೇಲಿಯಾ ಸರಣಿಯಲ್ಲಿ 2-1 ಮುನ್ನಡೆ ಹೊಂದಿದ್ದು, ಪಂದ್ಯ ಗೆಲ್ಲಬೇಕಿದ್ದರೆ ಬೃಹತ್ ಮೊತ್ತ ಬೆನ್ನತ್ತ ಬೇಕಿದೆ. ಈ ಪಂದ್ಯವನ್ನು ಡ್ರಾ ಮಾಡಿಕೊಂಡರೆ ಆಸ್ಟ್ರೇಲಿಯಾ ಆ್ಯಷಸ್ ಸರಣಿ ಕೈವಶ ಮಾಡಿಕೊಳ್ಳಲಿದೆ.
ಸ್ಕೋರ್: ಇಂಗ್ಲೆಂಡ್ 294 ಹಾಗೂ 258/5 (75 ಓವರಲ್ಲಿ),
ಆಸ್ಪ್ರೇಲಿಯಾ 225